ಧಾರಾಕಾರ ಮಳೆ: ಮಹಾರಾಷ್ಟ್ರದಿಂದ ಕೃಷ್ಣೆಗೆ 92,422 ಕ್ಯುಸೆಕ್‌ ನೀರು

By Kannadaprabha News  |  First Published Jul 23, 2023, 8:11 PM IST

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 72,000 ಕ್ಯುಸೆಕ್‌ ಮತ್ತು ದೂಧಗಂಗಾ ನದಿಯಿಂದ 20,422 ಕ್ಯುಸೆಕ್‌ ಹೀಗೆ ಒಟ್ಟು ಕಲ್ಲೋಳ ಬ್ಯಾರೇಜ್‌ ಮೂಲಕ 92,422 ಕ್ಯುಸೆಕ್‌ ನಷ್ಟು ನೀರು ಹರಿದು ಬರುತ್ತಿದೆ. 


ಚಿಕ್ಕೋಡಿ(ಜು.23): ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಜಿಟಿಜಿಟಿ ಮಳೆ ಇದ್ದರೂ, ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ದೂಧಗಂಗಾ ಸೇರಿದಂತೆ ಉಪನದಿಗಳಿಗೆ ನಿರಂತರ ನೀರು ಹರಿದು ಬರುತ್ತಿದ್ದು, ಇವತ್ತು ನದಿಗಳ ನೀರಿನ ಮಟ್ಟಏರಿಕೆಯಾಗಿದ್ದರಿಂದ ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಯ ಬ್ಯಾರೇಜ್‌ಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 72,000 ಕ್ಯುಸೆಕ್‌ ಮತ್ತು ದೂಧಗಂಗಾ ನದಿಯಿಂದ 20,422 ಕ್ಯುಸೆಕ್‌ ಹೀಗೆ ಒಟ್ಟು ಕಲ್ಲೋಳ ಬ್ಯಾರೇಜ್‌ ಮೂಲಕ 92,422 ಕ್ಯುಸೆಕ್‌ ನಷ್ಟು ನೀರು ಹರಿದು ಬರುತ್ತಿದೆ. ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಸಿ, ಮಮದಾಪುರ-ಹುನ್ನರಗಿ, ಕುನ್ನೂರ-ಬಾರವಾಡ, ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ಮಾಂಜರಿ-ಸವದತ್ತಿ ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

Latest Videos

undefined

ಉಕ್ಕಿದ ನದಿಗಳು, ತುಂಬುತ್ತಿವೆ ಡ್ಯಾಂ: ಒಂದೇ ವಾರದಲ್ಲಿ ಬದಲಾಯ್ತು ಬರದ ಚಿತ್ರಣ..!

ಕುನ್ನೂರ-ಬಾರವಾಡ ಸೇತುವೆ ಪ್ರವಾಹದ ಪರಿಸ್ಥಿತಿ ಅವಲೋಕಿಸಿದ ಎಸ್ಪಿ

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ಸದ್ಯ ಪ್ರವಾಹ ಪರಿಸ್ಥಿತಿ ಉಲ್ಭಣಗೊಂಡಿದೆ. ಪರಿಣಾಮ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಜೀವಕುಮಾರ ಪಾಟೀಲ ಅವರು ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ ಸೇತುವೆ ಬಳಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ಬೆಳಗಾವಿ ಜಿಲ್ಲೆಯ 16 ಸೇತುವೆಗಳು ಜಲಾವೃತಗೊಂಡಿದೆ. ನದಿತೀರದಲ್ಲಿ ಬ್ಯಾರಿಗೇಟ್‌ ಹಾಕಿ ಸಿಬ್ಬಂದಿಯನ್ನು ನಿಯೋಜನೆ ಮಾಡಿದೇವೆ. ನದಿತೀರದಲ್ಲಿ ಬಳಿ ಯಾರು ಕೂಡಾ ಹೋಗಬಾರದೆಂದು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದರು.

click me!