ಬಿಜೆಪಿ ಸರ್ಕಾರದ ನೀತಿಗೆ ತೀವ್ರ ಖಂಡನೆ| ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ| ಮಾ.5ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ| ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಭಾಗವಹಿಸಲು ಮನವಿ|
ಬಸವನಬಾಗೇವಾಡಿ(ಮಾ.01): ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ. 5ರಂದು ಜಿಲ್ಲಾ ಕೇಂದ್ರ ವಿಜಯಪುರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಸುರೇಶ ಮಣ್ಣೂರ ಹೇಳಿದ್ದಾರೆ.
ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಡಿ.ಎಸ್.ಎಸ್. ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರ ಸೌಲಭ್ಯ ಕಡಿಮೆ ಮಾಡಿ ಅಭಿವೃದ್ಧಿಯಲ್ಲಿ ದಲಿತರು ಹಿಂದೆ ಬೀಳಬೇಕು. ಅವರು ಇನ್ನೂ ಆರ್ಥಿಕವಾಗಿ ಕೆಳಮಟ್ಟದಲ್ಲಿ ಇರಬೇಕು ಅನ್ನುವ ಕಾರಣಕ್ಕೆ ಡಾ.ಬಿ.ಆರ್.ಅಂಬೇಡ್ಕರ ನಿಗಮದಿಂದ ಸ್ವಯಂ ಉದ್ಯೋಗಕ್ಕೆ ಸಹಾಯವಾಗಲಿ ಅನ್ನುವ ದೃಷ್ಟಿಯಿಂದ ನೀಡುತ್ತಿದ್ದ 5 ಲಕ್ಷಗಳವರೆಗೆ ಸಹಾಯ ಧನವನ್ನು ಕೇವಲ ಒಂದು ಲಕ್ಷಕ್ಕೆ ನಿಗದಿಗೊಳಿಸಿರುವುದು ದಲಿತ ವಿರೋಧಿ ನೀತಿ ಎಂದು ಆರೋಪಿಸಿದರು.
undefined
ಇದೇ ರೀತಿ ವೃತ್ತಿಪರ ಕೋರ್ಸ್‌ಗಳಿಗೆ ನೀಡತಕ್ಕಂತ ಸ್ಕಾಲರ್‌ಶಿಪ್‌ಗಳನ್ನು ಕಡಿತಗೂಳಿಸದೆ. ಈ ಹಿಂದಿನ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಾಂಗವು ಉದ್ಯಮವನ್ನು ಮಾಡಲು 10 ಲಕ್ಷದವರಿಗೆ ಸಹಾಯಧನವನ್ನು ನೀಡಲಾಗುತಿತ್ತು. ಇದನ್ನು ಈಗಿನ ಸರ್ಕಾರ ನಿಲ್ಲಿಸಿದೆ. ಇನ್ನೂ ಅಂಬೇಡ್ಕರ, ಬಸವ, ಇಂದಿರಾ, ಪ್ರಧಾನಮಂತ್ರಿ ಆವಾಸ ಯೋಜನೆಗಳನ್ನು ನಿಲ್ಲಿಸಲಾಗಿದೆ. ಆದ್ದರಿಂದ ಈ ಎಲ್ಲಾ ಯೋಜನೆಗಳಿಗೆ ಹಣವನ್ನು ಬಿಡುಗಡೆಗೂಳಿಸಲು ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 5ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಉಪಚುನಾಣೆ : ಮುತಾಲಿಕ್ಗೆ ಸಿಗಲಿದೆಯಾ ಟಿಕೆಟ್..?
ಸಮುದಾಯದ ನೂತನ ಗ್ರಾಪಂ ಸದಸ್ಯರು, ಅಧ್ಯಕ್ಷರು ಹಾಗೂ ನಿವೃತ ಬಿಎಸ್‌ಎಫ್ ಯೋಧ ಯಲ್ಲಪ್ಪ ಆರೇರ ಅವರನ್ನು ಸನ್ಮಾನಿಸಲಾಯಿತು. ತಾಲೂಕು ದಸಸಂ ಖಾಲಿ ಇರುವ ಸಂಘಟನಾ ಸಂಚಾಲಕ ಹುದ್ದೆಗೆ ಚಂದ್ರಶೇಖರ ನಾಲತವಾಡ (ನಾಗೂರ) ಹಾಗೂ ರಾಘು ಹೊಸಮನಿ ಅವರನ್ನು ಆಯ್ಕೆ ಮಾಡಲಾಯಿತು.
ಸಾನ್ನಿಧ್ಯವನ್ನು ಸಂಗಮನಾಥ ದೇವರು ಅಂಬಳನೂರ ವಹಿಸಿದ್ದರು .ದಲಿತ ಮುಖಂಡರಾದ ಈಶ್ವರ ಚಲವಾದಿ, ಮುತ್ತಣ್ಣ ಚಲವಾದಿ, ಸಿದ್ರಾಮ ಅಂಗಡಗೇರಿ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಪದಾಧಿಕಾರಿಗಳಾದ ಚಂದ್ರಶೇಖರ ನಾಡಗೇರ , ಪಿ.ಡಿ. ಭೂತನಾಳ, ಕಾಳಪ್ಪ ಮಸಬಿನಾಳ, ದೇವು ಬ್ಯಾಲಾಳ, ಯಮನಪ್ಪ ಚಲವಾದಿ ಮುತ್ತಗಿ, ಪರಶುರಾಮ ಕೂಡಗಿ, ಶ್ರೀಶೈಲ ಚಲವಾದಿ, ಮುಖಂಡರಾದ ಪರಶುರಾಮ ತಳಕೇರಿ, ಅನಿಲ ಹಟ್ಟಿ, ಸಂಗಮೇಶ ನಾಗರದಿನ್ನಿ, ವಿಜಯಕುಮಾರ ಬ್ಯಾಳಿ ಅನೇಕರಿದ್ದರು. ತಾಲೂಕು ಸಂಚಾಲಕ ಗುರುರಾಜ ಗುಡಿಮನಿ ಸ್ವಾಗತಿಸಿದರು. ತಾಲೂಕು ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಯಮನಪ್ಪ ಚಲವಾದಿ ಅಂಬಳನೂರ ನಿರೂಪಿಸಿದರು.