ಚಿಕ್ಕಮಗಳೂರು: ಗ್ರಾಮದೊಳಗೆ ಬಂದ ದಲಿತ ಯುವಕನ ಮೇಲೆ ಹಲ್ಲೆ, ಡಿಎಸ್‌ಎಸ್ ಪ್ರತಿಭಟನೆ

By Girish Goudar  |  First Published Jan 2, 2024, 10:30 PM IST

ಜೆಸಿಬಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮಾರುತಿ ಎಂಬ ಯುವಕ ಜೆಸಿಬಿ ಕೆಲಸಕ್ಕೆಂದು ಗೊಲ್ಲರಹಟ್ಟಿ ಗ್ರಾಮಕ್ಕೆ ಹೋಗಿದ್ದನು. ಈ ವೇಳೆ ಆತನ ಜಾತಿ ಕೇಳಿದ ಸ್ಥಳೀಯರು ದಲಿತ ಎಂದು ಗೊತ್ತಾಗಿ ಹಲ್ಲೆ ಮಾಡಿದ್ದರು. ಆತನ ಜೇಬಿನಲ್ಲಿದ್ದ 20 ಸಾವಿರ ಹಣವನ್ನ ದಂಡ ಎಂದು ಕಟ್ಟಿಸಿಕೊಂಡಿದ್ದರು. ವಿಷಯ ತಿಳಿದ ದಲಿತ ಸಂಘಟನೆಗಳು ಪ್ರತಿಭಟನೆ ಮಾಡಿ ಹಲ್ಲೆಗೈದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜ.02): ದಲಿತ ಯುವಕನೋರ್ವ ಗ್ರಾಮದೊಳಗೆ ಬಂದ ಎಂದು ಗ್ರಾಮಸ್ಥರು ಆತನ ಮೇಲೆ ಹಲ್ಲೆ ಮಾಡಿ 20 ಸಾವಿರ ದಂಡ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ನಡೆದಿದೆ. 

Tap to resize

Latest Videos

undefined

ಜನವರಿ 1ರಂದು ಜೆಸಿಬಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮಾರುತಿ ಎಂಬ ಯುವಕ ಜೆಸಿಬಿ ಕೆಲಸಕ್ಕೆಂದು ಗೊಲ್ಲರಹಟ್ಟಿ ಗ್ರಾಮಕ್ಕೆ ಹೋಗಿದ್ದನು. ಈ ವೇಳೆ ಆತನ ಜಾತಿ ಕೇಳಿದ ಸ್ಥಳೀಯರು ದಲಿತ ಎಂದು ಗೊತ್ತಾಗಿ ಹಲ್ಲೆ ಮಾಡಿದ್ದರು. ಆತನ ಜೇಬಿನಲ್ಲಿದ್ದ 20 ಸಾವಿರ ಹಣವನ್ನ ದಂಡ ಎಂದು ಕಟ್ಟಿಸಿಕೊಂಡಿದ್ದರು. ವಿಷಯ ತಿಳಿದ ದಲಿತ ಸಂಘಟನೆಗಳು ಇಂದು ಗ್ರಾಮದೊಳಗೆ ಪ್ರತಿಭಟನೆ ಮಾಡಿ ಹಲ್ಲೆಗೈದವರ ವಿರುದ್ಧ ಆಕ್ರೋಶ ಹೊರಹಾಕಿದ್ದರು. 

ಚಿಕ್ಕಮಗಳೂರು: ಖಾಸಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು, ಎಸ್‌ಪಿ ಆಮಟೆ

ಸ್ಥಳದಲ್ಲಿ  ಕೆಲ ಕಾಲ ಬಿಗುವಿನ ವಾತಾವರಣ : 

ಮಾರುತಿ ಮೇಲೆ ಹಲ್ಲೆ ಮಾಡಿದ್ದ ಸ್ಥಳದಲ್ಲೇ ಇಂದು ನೂರಾರು ದಲಿತ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿ ಹಲ್ಲೆಗೈದರವ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದ ಕಾರಣ ಮೂವರು ಪಿ.ಎಸ್.ಐ. ಹಾಗೂ ತಹಶೀಲ್ದಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಪ್ರತಿಭಟನೆಯ ಬಳಿಕ ಪೊಲೀಸ್ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಊರಿನ ತುಂಬಾ ಓಡಾಡಿದರು. ಊರಿನ ಜನ ಮಾರುತಿ ಮೇಲೆ ಹಲ್ಲೆಗೈಯುವಾಗ ನೀನು ಊರಿಗೆ ಬಂದಿರೋದ್ರಿಂದ ಗ್ರಾಮಕ್ಕೆ ಮೈಲಿಗೆ ಆಗಿದೆ. ದೇವರಿಗೆ ಮೈಲಿಗೆಯಾಗಿದೆ ಎಂದು ಹಲ್ಲೆಗೈದಿದ್ದರು. ಹಾಗಾಗಿ, ಇಂದು ಪ್ರತಿಭಟನೆಯ ಬಳಿಕ ನೂರಾರು ದಲಿತ ಕಾರ್ಯಕರ್ತರು ದೇವಸ್ಥಾನಕ್ಕೆ ಹೋಗಲು ಯತ್ನಿಸಿದರು. ಈ ವೇಳೆ ಊರಿನ ವ್ಯಕ್ತಿಯೋರ್ವ ದೇವಸ್ಥಾನದ ಗೇಟಿಗೆ ಅಡ್ಡನಿಂತು ಒಳಗೆ ಬಿಡುವುದಿಲ್ಲ, ಹೋಗುವಂತಿಲ್ಲ ಎಂದು ತಾಕೀತು ಮಾಡಿದ್ದರು.

ಪೊಲೀಸರು, ತಹಶೀಲ್ದಾರರಿಂದ ಪರಿಸ್ಥಿತಿ ತಿಳಿ : 

ಗ್ರಾಮದ ಮಹಿಳೆ ಕೂಡ ದೇವಸ್ಥಾನದ ಕಾಂಪೌಂಡ್ ಒಳಗೆ ಹೋಗಿ ಒಳಗೆ ಬಿಡಲ್ಲ ಎಂದು ಹೇಳಿದ್ದರು. ಈ ವೇಳೆ ಸ್ಥಳದಲ್ಲಿ ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ದಲಿತ ಮುಖಂಡರು ದೇವಸ್ಥಾನ ಬಾಗಿಲು ಹಾಕಿದೆ. ಇಂದು ಬೇಡ. ಇನ್ನೊಂದು ದಿನ ಬರೋಣ ಎಂದು ಅವರೇ ಆಕ್ರೋಶಿತ ಕಾರ್ಯಕರ್ತರನ್ನ ಸಮಾಧಾನ ಮಾಡಿದ್ದರು. ಬಳಿಕ ಪೊಲೀಸ್ ಹಾಗೂ ತಹಶೀಲ್ದಾರರು ಮದ್ಯಪ್ರವೇಶಿಸಿ ವಾತಾವರಣವನ್ನ ತಿಳಿಗೊಳಿಸಿದರು. ಬಳಿಕ ತಹಶೀಲ್ದಾರ್ ಊರಿನ ಮುಖಂಡರನ್ನ ಕರೆಸಿ ಮುಂದಿನ ದಿನಗಳಲ್ಲಿ ಮತ್ತೆ ಹೀಗಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ದಲಿತನ ಯುವಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಗೊಲ್ಲರಹಟ್ಟಿ ಗ್ರಾಮದ 15 ಜನರ ಮೇಲೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!