ಕುಸಿದ ಒಣದ್ರಾಕ್ಷಿ ದರ: ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ದ್ರಾಕ್ಷಿ ಬೆಳೆಗಾರರು!

By Govindaraj S  |  First Published Aug 5, 2023, 7:39 PM IST

ರಾಜ್ಯದಲ್ಲೇ ಹೆಚ್ಚಾಗಿ ದ್ರಾಕ್ಷಿ ಬೆಳೆಯುವ ಜಿಲ್ಲೆ ವಿಜಯಪುರ ಜಿಲ್ಲೆ, ವಿಜಯಪುರ ಜಿಲ್ಲೆಯನ್ನು ದ್ರಾಕ್ಷಿಯ ಕಣಜ ಎಂದೇ ಪ್ರಸಿದ್ಧಿಯಾಗಿದೆ. ಆದ್ರೆ ಈ ವರ್ಷ ಒಣದ್ರಾಕ್ಷಿ ದರ ಪಾತಾಳಕ್ಕೆ ಕುಸಿದಿದ್ದು ದ್ರಾಕ್ಷಿ ಬೆಳೆಗಾರರು ಸಂಕಷ್ಟ ಸಿಲುಕಿದ್ದಾರೆ.


ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.05): ರಾಜ್ಯದಲ್ಲೇ ಹೆಚ್ಚಾಗಿ ದ್ರಾಕ್ಷಿ ಬೆಳೆಯುವ ಜಿಲ್ಲೆ ವಿಜಯಪುರ ಜಿಲ್ಲೆ, ವಿಜಯಪುರ ಜಿಲ್ಲೆಯನ್ನು ದ್ರಾಕ್ಷಿಯ ಕಣಜ ಎಂದೇ ಪ್ರಸಿದ್ಧಿಯಾಗಿದೆ. ಆದ್ರೆ ಈ ವರ್ಷ ಒಣದ್ರಾಕ್ಷಿ ದರ ಪಾತಾಳಕ್ಕೆ ಕುಸಿದಿದ್ದು ದ್ರಾಕ್ಷಿ ಬೆಳೆಗಾರರು ಸಂಕಷ್ಟ ಸಿಲುಕಿದ್ದಾರೆ. ಒಣದ್ರಾಕ್ಷಿಗೆ ‌ಸರ್ಕರ ಬೆಂಬಲ ಬೆಲೆ ಘೋಷಿಸುವಂತೆ ರೈತರ ಕೂಗಿದೆ. ಈಗ ರೈತರ ಹೋರಾಟಕ್ಕೆ ಸಾಥ್ ನೀಡಿದ್ದು ಮಠಾದೀಶರು. ಈಗ ದ್ರಾಕ್ಷಿ ಬೆಳೆದ ರೈತರಿಗೆ ಮತ್ತಷ್ಟು ಆನೆ ಬಲ ಬಂದಂತಾಗಿದೆ.

Tap to resize

Latest Videos

ಒಣದ್ರಾಕ್ಷಿಗೆ ಸಿಗದ ಬೆಲೆ, ರೈತರ ಬೆನ್ನಿಗೆ ಮಠಾಧೀಶರು: ರಾಜ್ಯದಲ್ಲೇ ಹೆಚ್ಚಿನ ದ್ರಾಕ್ಷಿಯನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ, ಆದರೆ ಇಂದು ಒಣ ದ್ರಾಕ್ಷೀಗೆ ಸೂಕ್ತ ಬೆಲೆ ಸಿಗದ ಕಾರಣ ದ್ರಾಕ್ಷೀ ಬೆಳೆಗಾರರು ಹೋರಾಟದ ಹಾದಿ ಹಿಡಿದಿದ್ದಾರೆ. ಇನ್ನೂ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಅರಿತ ಮಠಾಧೀಶರು ಸಹಿತ ದ್ರಾಕ್ಷೀ ಬೆಳೆದ ರೈತರಿಗೆ ಬೆಂಬಲಕ್ಕೆ ನಿಂತಿದ್ದಾರೆ. ಇಂದು ವಿಜಯಪುರ ನಗರದ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಲಯದಲ್ಲಿ ನಡೆದ ಚಿಂತನ ಸಭೆಯಲ್ಲಿ ರೈತರೊಂದಿಗೆ ಮಠಾಧೀಶರು ಪಾಲ್ಗೊಂಡು ಧೈರ್ಯ ತುಂಬುವ ಕೆಲಸ ಮಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ಕೆಜಿಗೆ ಕನಿಷ್ಠ 150 ರಿಂದ 250 ರೂಪಾಯಿಗಳವರೆಗೆ ಬೆಂಬಲ ಬೆಲೆ ನೀಡಿ ನೇರವಾಗಿ ಖರೀದಿಸಬೇಕು ಎಂದು ಮಠಾಧೀಶರು ಆಗ್ರಹಿಸಿದ್ದಾರೆ.

ಮನೆ ಮನೆ ಬೆಳಗುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ: ಸಚಿವ ತಿಮ್ಮಾಪೂರ

ಅಪಾರ ಪೌಷ್ಟಿಕಾಂಶ ಹೊಂದಿರುವ ಒಣದ್ರಾಕ್ಷಿ: ನಾಡಿನ ರೈತರು ಪ್ರತಿ ವರ್ಷ ಒಂದಿಲ್ಲ ಒಂದು ರೀತಿಯ ಸಂಕಷ್ಟ  ಎದುರಿಸುತ್ತಿದ್ದಾರೆ. ದ್ರಾಕ್ಷಿ ಬೆಳೆದ ರೈತರ ಪರಿಸ್ಥಿತಿ ಹೇಳ ತೀರದು. ಒಣ ದ್ರಾಕ್ಷಿ ಮಾನವಕುಲಕ್ಕೆ ಅತ್ಯಂತ ಉಪಯೋಗಕಾರಿಯಾಗಿದೆ. ಇದು ಮಕ್ಕಳ ಆರೋಗ್ಯಕ್ಕೆ ಹಾಗೂ ಜನಸಾಮಾನ್ಯರಿಗೆ 20ಕ್ಕೂ ಹೆಚ್ಚು ರೋಗಗಳಿಗೆ ಔಷಧಿಯ ಗುಣ ಹೊಂದಿದೆ. ಪೋಷಕಾಂಶಗಳಾದ ವಿಟಮಿನ್ ಬಿ 6, ವಿಟಮಿನ್ ಸಿ, ಗ್ಲೂಕೋಸ್, ಕ್ಯಾಲ್ಸಿಯಮ್, ಮೈಗ್ನಿಸಿಯಮ್, ಪೋಟ್ಯಾಸಿಯಂ, ಐರನ್ ಸೇರಿದಂತೆ ಹಲವಾರು ವಿಟಮಿನ್‌ಗಳು ಇವೆ. ಒಣದ್ರಾಕ್ಷಿ ಸೇವಿಸುವುದರಿಂದ ಮಕ್ಕಳಲ್ಲಿ ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ. 

ಸರ್ಕಾರ ಅಂಗನವಾಡಿ, ಶಾಲಾ ಮಕ್ಕಳಿಗೆ ಒಣದ್ರಾಕ್ಷಿ ವಿತರಿಸಲಿ: ಒಂದು ಕಡೆಗೆ ರೈತರು ಒಣದ್ರಾಕ್ಷಿಗೆ ಬೆಲೆ ಸಿಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅನೇಕ ರೈತರು ಒಣದ್ರಾಕ್ಷಿಯನ್ನ ಕೋಲ್ಡ್ ಸ್ಟೋರೆಜ್‌ಗಳಲ್ಲಿ ಇರಿಸಿ ರೇಟಿಗಾಗಿ ಕಾಯುತ್ತಿದ್ದಾರೆ. ಇದರಿಂದಲು ಸಾಕಷ್ಟ ಹಣ ವ್ಯಯ ಮಾಡ್ತಿದ್ದಾರೆ. ಇಂಥ ಸಮಯದಲ್ಲಿ ಸರ್ಕಾರ ದ್ರಾಕ್ಷಿ ಬೆಳೆಗಾರರ ಸಹಾಯಕ್ಕೆ ಧಾವಿಸಬೇಕು. ಸರ್ಕಾರ ರೈತರಿಂದ ಒಣದ್ರಾಕ್ಷಿ ಖರೀದಿಸಿ ಪ್ರತಿ ನಿತ್ಯ ಅಂಗನವಾಡಿ, ಸರ್ಕಾರಿ, ಮೊರಾರ್ಜಿ, ಇನ್ನಿತರ ಶಾಲಾ ಮಕ್ಕಳಿಗೆ ಹಾಗೂ ಸೈನಿಕರಿಗೆ ಸರಕಾರಿ ಆಸ್ಪತ್ರೆ ರೋಗಿಗಳಿಗೆ ಕನಿಷ್ಠ 50 ಗ್ರಾಂ ಒಣದ್ರಾಕ್ಷಿ ವಿತರಿಸಬೇಕು. ಹೀಗಾಗಿ ದ್ರಾಕ್ಷೀ ಬೆಳೆಗೆ ಸೂಕ್ತ ಬೆಂಬಲ ಬೆಲೆ ರಾಜ್ಯ ಸರ್ಕಾರ ನೀಡಿ ಖರೀದಿ ಮಾಡಬೇಕು ಎನ್ನುವ ಅಭಿಪ್ರಾಯ ಚಿಂತನೆ ಸಭೆಯಲ್ಲಿ ವ್ಯಕ್ತವಾಗಿದೆ. 

ಒಣದ್ರಾಕ್ಷಿ ಕ್ಷೇತ್ರದಲ್ಲಿ ಕರ್ನಾಟಕ ನಂ 2: ಕರ್ನಾಟಕ ರಾಜ್ಯದಲ್ಲಿ ದ್ರಾಕ್ಷಿ ಬೆಳೆಯನ್ನು ಅಂದಾಜು 90 ಸಾವಿರದಿಂರ 95 ಸಾವಿರ ಎಕರೆಯಲ್ಲಿ ಬೆಳೆಯುತ್ತಿದ್ದು, 7 ರಿಂದ 8.5 ಲಕ್ಷ ಮೆಟ್ರಿಕ್ ಟನ್ ದ್ರಾಕ್ಷಿ ಉತ್ಪಾದನೆಯಾಗುತ್ತಿದೆ. ದೇಶದಲ್ಲಿಯೇ ಮಹಾರಾಷ್ಟ್ರದ ನಂತರದಲ್ಲಿ ಕರ್ನಾಟಕ ರಾಜ್ಯವು 2ನೇ ಸ್ಥಾನದಲ್ಲಿದೆ, ಪ್ರತಿ ವರ್ಷ ದ್ರಾಕ್ಷಿ ಬೆಳೆಗಾರರು ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಗೆ ತುತ್ತಾಗಿ ಸಂಕಷ್ಟ ಸಿಲುಕುತ್ತಿದ್ದಾರೆ. ಆದ್ರೆ ಸರ್ಕಾರ ದ್ರಾಕ್ಷಿ ಬೆಳೆಗಾರರ ನೆರವಿಗೆ ಬಂದಿಲ್ಲ. ಈಗ ಒಣ ದ್ರಾಕ್ಷಿಯ ಬೆಲೆ ಸಂಪೂರ್ಣವಾಗಿ ಕುಸಿತ ಗೊಂಡಿದೆ. ಕೇವಲ 70 ರಿಂದ 100 ಕೆಜಿಗೆ ಮಾರಾಟವಾಗುತ್ತಿದೆ.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ನಿಯಮಾವಳಿಗಳನ್ನು ಮೀರಿಲ್ಲ: ಸಚಿವ ಮಹದೇವಪ್ಪ

ಡಿಸಿಗು ಮನವಿ ಸಲ್ಲಿಕೆ ಮಾಡಿದ ದ್ರಾಕ್ಷಿ ಬೆಳೆಗಾರರು: ರೈತರು ಸಂಕಷ್ಟದಲ್ಲಿ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಗಳ ಮೂಲಕ ಸಿಎಂ ಗೆ ಮನವಿ ಮಾಡಿದರು. ಇಂದು ಸಾಂಕೇತಿಕ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಮುಂಬರುವ ದಿನಗಳಲ್ಲಿ ತಮ್ಮ ಬೇಡಿಕೆ ಇಡೇರಿಸದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ದ್ರಾಕ್ಷೀ ಬೆಳೆಗಾರರು ಹಾಗೂ ಸ್ವಾಮಿಜಿಗಳು ನೀಡಿದರು. ಚಿಂತನ ಸಭೆಯಲ್ಲಿ ಚರ್ಚಿಸಿ ‌ಬಳಿಕ ನೇರವಾಗಿ ಡಿಸಿ ಕಚೇರಿಗೆ ಆಗಮಿಸುವ ಮೂಲಕ ಮನವಿಯನ್ನು ಸಲ್ಲಿಸಿದರು.

click me!