ಇದೊಂದು ಅತ್ಯಂತ ನೋವಿನ ಸಂಗತಿ : ನಟ ಅನಿರುದ್ಧ

Kannadaprabha News   | Asianet News
Published : Sep 16, 2020, 09:08 AM ISTUpdated : Sep 16, 2020, 09:17 AM IST
ಇದೊಂದು ಅತ್ಯಂತ ನೋವಿನ ಸಂಗತಿ : ನಟ ಅನಿರುದ್ಧ

ಸಾರಾಂಶ

ಇದೊಂದು ಅತ್ಯಂತ ನೋವಿನ ಸಂಗತಿಯಾಗಿದೆ. ಇದರಿಂದ ಉಳಿಸಿ ಬೆಳೆಸಿದ ಸಂಸ್ಕೃತಿಗೆ ಕೆಟ್ಟ ಹೆಸರು ಬರುತ್ತದೆ ಎಂದು ನಟ ಅನಿರುದ್ಧ್ ಹೇಳಿದ್ದಾರೆ.

ಮೈಸೂರು (ಸೆ.16): ‘ಕನ್ನಡ ಚಿತ್ರರಂಗದಲ್ಲಿ ಈ ರೀತಿ ನಡೆಯುತ್ತಿರುವುದು ನೋವಿನ ಸಂಗತಿ. ನಮ್ಮನ್ನು ನೋಡಿ ಸಮಾಜ ಮತ್ತು ಮಕ್ಕಳು ಕಲಿಯುವುದರಿಂದ ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನು ಬಿಟ್ಟು ಹೋಗಬೇಕು’ ಎಂದು ನಟ ಅನಿರುದ್ಧ ಹೇಳಿದ್ದಾರೆ. 

ಡ್ರಗ್ಸ್‌ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಡ್ರಗ್ಸ್‌ ಎಂಬುದು ಪ್ರಪಂಚದಾದ್ಯಂತ ಇದೆ. ಅದು ಕೇವಲ ಸ್ಯಾಂಡಲ್‌ವುಡ್‌ಗೆ ಮಾತ್ರ ಸಂಬಂಧಿಸಿಲ್ಲ. ಆದರೆ ಕನ್ನಡ ಚಿತ್ರರಂಗದಲ್ಲಿ ಈ ರೀತಿ ನಡೆಯುತ್ತಿರುವುದು ನೋವಿನ ವಿಷಯ ಎಂದು ಅಭಿಪ್ರಾಯಪಟ್ಟರು.

ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮಡದಿ, ಮಕ್ಕಳ 'ಜೊತೆ ಜೊತೆಯಲಿ' ಆರ್ಯವರ್ಧನ್...!

ನಾವು ನಮ್ಮ ಹಿರಿಯರನ್ನು ಸ್ಪೂರ್ತಿಯಾಗಿಟ್ಟುಕೊಂಡು ಬೆಳೆಯಬೇಕು. ನಮ್ಮನ್ನು ನೋಡಿ ಸಮಾಜ ಮತ್ತು ಮಕ್ಕಳು ಕಲಿಯುತ್ತಾರೆ. ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನು ಬಿಟ್ಟು ಹೋಗಬೇಕು. ಹಿರಿಯರು ಹಾಕಿದ ಬುನಾದಿಯನ್ನು ನಾವು ಕೆಡಿಸಬಾರದು. 

ಹಾಗಾಗಿ ಆ ಹಾದಿಯಲ್ಲಿ ನಾವು ಸಾಗಬೇಕು ಎಂದು ಕಿವಿಮಾತು ಹೇಳಿದರು. ಸ್ಯಾಂಡಲ್‌ವುಡ್‌ನ ಜವಾಬ್ದಾರಿ ಕೇವಲ ಒಬ್ಬರದ್ದಲ್ಲ ಎಲ್ಲರದ್ದು. ಎಲ್ಲರೂ ಕೂಡ ಈಗ ಸ್ಯಾಂಡಲ್‌ವುಡ್‌ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

"

PREV
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ