ದೇವೇಗೌಡರ ಸೂಚನೆಯ ಮೇರೆಗೆ ಜೆಡಿಎಸ್‌ನಿಂದ ಮಹತ್ವದ ಕಾರ್ಯ

By Kannadaprabha News  |  First Published Nov 10, 2023, 8:34 AM IST

ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರ ಸೂಚನೆಯ ಮೇರೆಗೆ ಪ್ರತಿ ತಾಲೂಕಿನಲ್ಲಿ ಬರ ಪರಿಶೀಲನೆ ಮಾಡಿ ಪ್ರಧಾನಿಗೆ ವರದಿ ನೀಡುವುದಾಗಿ ಶಾಸಕ ಎಂ ಟಿ ಕೃಷ್ಣಪ್ಪ ತಿಳಿಸಿದ್ದಾರೆ.


 ಕುಣಿಗಲ್ :  ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರ ಸೂಚನೆಯ ಮೇರೆಗೆ ಪ್ರತಿ ತಾಲೂಕಿನಲ್ಲಿ ಬರ ಪರಿಶೀಲನೆ ಮಾಡಿ ಪ್ರಧಾನಿಗೆ ವರದಿ ನೀಡುವುದಾಗಿ ಶಾಸಕ ಎಂ ಟಿ ಕೃಷ್ಣಪ್ಪ ತಿಳಿಸಿದ್ದಾರೆ.

ಯಡಿಯೂರು ಹೋಬಳಿಯ ಬೀರಗಾನಹಳ್ಳಿ ಗ್ರಾಮದ ವಸಂತ ಅವರರ ಜಮೀನಿನಲ್ಲಿ ಬೆಳೆ ಪರಿಶೀಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.

Tap to resize

Latest Videos

ಈಗಾಗಲೇ ಕುಣಿಗಲ್ ತಾಲೂಕು ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಚಿವರು ಇಲ್ಲವೆ ಶಾಸಕರು ಯಾವುದೇ ಬರ ಪರಿಶೀಲನೆ ನಡೆಸಿಲ್ಲ. ಅಧಿಕಾರಿಗಳು ತೋಟಗಾರಿಕೆ ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ನೀಡಿಲ್ಲ. ದೇವೇಗೌಡರ ಹಾಗೂ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ನಾವು ಪ್ರತಿ ತಾಲೂಕಿನಲ್ಲೂ ಬರ ಪರಿಶೀಲನೆ ಕಾರ್ಯಕ್ರಮ ಮಾಡುತ್ತಿದ್ದೇವೆ.

ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಸ್ಥಳೀಯ ಸರ್ಕಾರದ ವೈಫಲ್ಯಗಳನ್ನು ಮನವರಿಕೆ ಮಾಡಿ ಕೊಡುವುದರ ಜೊತೆಗೆ ರೈತರಿಗೆ ಸಹಕಾರ ಮಾಡುವ ಹಾಗೂ ಬರ ಪರಿಹಾರ ಕೊಡಿಸುವಲ್ಲಿ ನಾವು ಕಾರ್ಯನಿರ್ವಹಿಸಲಿದ್ದೇವೆ ಎಂದರು.

ದೇವೇಗೌಡರ ನೇತೃತ್ವದಲ್ಲಿ ಬರ ಪರಿಶೀಲನ ತಂಡ ಪ್ರಧಾನಿ ಅವರನ್ನು ಭೇಟಿ ಮಾಡಲಿದೆ ಎಂದರು.

ಸ್ಥಳೀಯ ಬರ ಪರಿಶೀಲನೆ ಮಾಡದೆ ಕೈಯಲ್ಲಿ ವರದಿ ಇಲ್ಲದೆ ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ 17ರಿಂದ 30ಸಾವಿರ ಕೋಟಿ ಅನುದಾನ ಕೇಳುತ್ತಿರುವ ಕಾಂಗ್ರೆಸ್ಸಿಗರ ಬಳಿ ಯಾವುದೇ ವರದಿ ಹಾಗೂ ದಾಖಲಾತಿಗಳಿಲ್ಲ. ಸರ್ಕಾರ ಅನುದಾನ ಕೊಡಲು ಯಾವ ಆಧಾರದ ಮೇಲೆ ಕೊಡುತ್ತದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಕುಮಾರಸ್ವಾಮಿ ಸರ್ಕಾರದಲ್ಲಿ 25000 ಕೋಟಿ ರೈತರ ಸಾಲ ಮನ್ನಾ ಮಾಡಿದರು. ಯಾವುದೇ ಕೇಂದ್ರ ಸರ್ಕಾರದ ಕಡೆ ಅವರು ಕೈ ತೋರಿಸಲಿಲ್ಲ. ಕಾಂಗ್ರೆಸ್ ಸರ್ಕಾರ ತನ್ನ ಯೋಜನೆ ಪೂರೈಸಲಾಗದೆ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಿದೆ ಎಂದರು.

ಮಾಜಿ ಸಚಿವ ಡಿ ನಾಗರಾಜಯ್ಯ, ಮೇವಿನ ಬೆಳೆ ಸೇರಿದಂತೆ ರಾಗಿ ನೆಲಕಚ್ಚಿದೆ, ಮಾರ್ಕೋನಹಳ್ಳಿ ಜಲಾಶಯದ ನೀರು ಹಂಚಿಕೆ ವಿಚಾರದಲ್ಲೂ ಸ್ಥಳೀಯ ಶಾಸಕರು ಜವಾಬ್ದಾರಿ ಮರೆತಿದ್ದಾರೆ, ಹೇಮಾವತಿ ನಾಲಾ ನಿಗಮದ ಹಣವನ್ನು ರಸ್ತೆಗಾಗಿ ಬಳಸುತ್ತಿರುವುದು ಸರಿ ಇಲ್ಲ.

ಜೆಡಿಎಸ್ ಮುಖಂಡ ಬಿ ಎನ್ ಜಗದೀಶ್, ಮುಖಂಡರಾದ ಗುಬ್ಬಿ ಮುಖಂಡ ನಾಗರಾಜ್ , ತಿಪಟೂರು ಮುಖಂಡ ಶಾಂತಕುಮಾರ್ , ಕುಣಿಗಲ್‌ ಮಾಜಿ ಸಚಿವ ಡಿ ನಾಗರಾಜಯ್ಯ , ಜೆಡಿಎಸ್‌ ಮುಖಂಡ ಬಿ ಎನ್ ಜಗದೀಶ್ , ಮಲ್ಲಿಕಾರ್ಜುನ್ , ಅರೇಪಾಳ್ಯ ಮಂಜು , ತರೀಕೆರೆ ಪ್ರಕಾಶ್‌ , ಎಡೆಯೂರು ದೀಪು , ಗಿರೀಶ್ , ಕುಮಾರಸ್ವಾಮಿ , ನವೀನ್ ಇದ್ದರು.

click me!