ದಸರಾದಲ್ಲಿ ಡ್ರೋನ್ ಕ್ಯಾಮೆರಾ ಬಳಕೆ ನಿಷೇಧ

Published : Oct 01, 2019, 03:02 PM IST
ದಸರಾದಲ್ಲಿ ಡ್ರೋನ್ ಕ್ಯಾಮೆರಾ ಬಳಕೆ ನಿಷೇಧ

ಸಾರಾಂಶ

ಮೈಸೂರು ದಸರಾದ ಸುಂದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತವೆ. ಪ್ರೊಫೆಷನಲ್ ಫೋಟೋಗ್ರಾಫರ್‌ಗಳು ಸೇರಿದಂತೆ ಸಾಕಷ್ಟು ಮಂದಿ, ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತಾರೆ. ಆದರೆ ದಸರಾ ಸಂದರ್ಭ ಡ್ರೋನ್ ಬಳಸೋದನ್ನು ನಿಷೇಧಿಸಲಾಗಿದೆ.

ಮೈಸೂರು(ಅ.01): ಮೈಸೂರು ದಸರಾದ ಸುಂದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತವೆ. ಪ್ರೊಫೆಷನಲ್ ಫೋಟೋಗ್ರಾಫರ್‌ಗಳು ಸೇರಿದಂತೆ ಸಾಕಷ್ಟು ಮಂದಿ, ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತಾರೆ. ಆದರೆ ದಸರಾ ಸಂದರ್ಭ ಡ್ರೋನ್ ಬಳಸೋದನ್ನು ನಿಷೇಧಿಸಲಾಗಿದೆ.

ದಸರಾ ವೇಳೆ ಡ್ರೋನ್ ಕ್ಯಾಮರಾಗಳ ಬಳಕೆಗೆ ನಿಷೇಧಿಸಲಾಗಿದ್ದು, ಇದನ್ನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ ಎಚ್ಚರಿಸಿದ್ದಾರೆ.

ದಸರೆಯಲ್ಲಿ ಮೋದಿ, ಬಿಎಸ್‌ವೈ ಗುಣಗಾನ ಮಾಡಿದ ಜಿಟಿಡಿ

ನಗರದಲ್ಲಿ ಅ.8 ರವರೆಗೆ ನಡೆಯುವ ದಸರಾ ಉತ್ಸವದ ಸೊಬಗನ್ನು ಸೆರೆ ಹಿಡಿಯಲು ಡ್ರೋಣ್‌ ಕ್ಯಾಮರಾಗಳನ್ನು ಕೆಲವರು ಬಳಸಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ. ಭಾರತದ ಗೃಹ ಮಂತ್ರಾಲಯ ನೀಡಿರುವ ನಿರ್ದೇಶನಗಳನ್ವಯ ಡ್ರೋಣ್‌ ಕ್ಯಾಮರಾಗಳ ಬಳಕೆಯನ್ನು ನಿರ್ಭಂದಿಸಿರುತ್ತದೆ.

ಅದೇ ರೀತಿ ದಸರಾ ವೇಳೆ ಭದ್ರತಾ ದೃಷ್ಟಿಯಿಂದ ನಗರದಾದ್ಯಂತ ಯಾವುದೇ ವ್ಯಕ್ತಿ, ಸಂಸ್ಥೆ , ಸರ್ಕಾರದ ಇಲಾಖೆಗಳು, ದಸರಾ ಉಪ ಸಮಿತಿಗಳ ವತಿಯಿಂದ ಡ್ರೋಣ್‌ ಕ್ಯಾಮರಾಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ.

ಸದಾ ಸ್ಮರಣೀಯ ದಸರಾ ಸಿರಿ ಪರಂಪರೆಯನ್ನು ನೆನೆದ ಸಿಎಂ ಯಡಿಯೂರಪ್ಪ

ಈ ನಿರ್ಬಂಧವನ್ನು ಉಲ್ಲಂಘಿಸಿಯಾರಾದರು ಡ್ರೋಣ್‌ ಕ್ಯಾಮರಾಗಳನ್ನು ಬಳಸುವುದು ಕಂಡು ಬಂದಲ್ಲಿ ಡ್ರೋಣ್‌ ಪರಿಕರಣಗಳನ್ನು ಜಪ್ತಿ ಮಾಡಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC