ಪೊಲೀಸರ ಕಣ್ತಪ್ಪಿಸಿ ಜನರ ಓಡಾಟ: ಗಂಗಾವತಿಯಲ್ಲಿ ದ್ರೋಣ್‌ ಕಣ್ಗಾವಲು

By Kannadaprabha NewsFirst Published Apr 13, 2020, 11:06 AM IST
Highlights
ಕೊರೋನಾ ಸೋಂಕು ತಡೆಗೆ ಪೊಲೀಸ್‌ ಇಲಾಖೆ ದ್ರೋಣ್‌ ಕಣ್ಗಾವಲು| ಕೊಪ್ಪಳ ಜಿಲ್ಲೆಯ ಗಂಗಾವತಿ ಪಟಣದಲ್ಲಿ  ದ್ರೋಣ್‌ ಕ್ಯಾಮೆರಾ ಬಳಕೆ| 21 ಜನರನ್ನು ಕ್ವಾರೈಂಟೇನ್‌ಲ್ಲಿಟ್ಟಿದ್ದರಿಂದ ಗಂಗಾವತಿಯಲ್ಲಿ ತೀವ್ರ ನಿಗಾ| 
ಗಂಗಾವತಿ(ಏ.13): ನಗರದಲ್ಲಿ ಕೊರೋನಾ ಸೋಂಕು ತಡೆಗೆ ಇಲ್ಲಿಯ ಪೊಲೀಸ್‌ ಇಲಾಖೆ ದ್ರೋಣ್‌ ಕಣ್ಗಾವಲಿರಿಸಿದ್ದು, ಲಾಕ್‌ಡೌನ್‌ ಪಾಲಿಸದವರನ್ನು ಈ ಮೂಲಕ ಸರೆ ಹಿಡಿಯಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಕಳೆದ ಎರಡು ದಿನಗಳಿಂದ ಇಲ್ಲಿ ಪೊಲೀಸ್‌ ಉಪ ವಿಭಾಗಾಧಿಕಾರಿ ಡಾ. ಚಂದ್ರಶೇಖರ ನೇತ್ರತ್ವದಲ್ಲಿ ವಿವಿಧ ವೃತ್ತಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದ್ರೋಣ್‌ ಕ್ಯಾಮೆರಾ ಸೆರೆ ಹಿಡಿಯುವ ಕಾರ್ಯ ನಡೆಸಿದೆ.

ಲಾಕ್‌ಡೌನ್‌: ದಿನಸಿಗೆ ಜನರ ಪರದಾಟ, ಸಂಕಷ್ಟದಲ್ಲಿ ಗ್ರಾಮೀಣ ಭಾಗದ ಮಂದಿ!

ಈಗಾಗಲೇ ಕಳೆದ 20 ದಿನಗಳಿಂದ ಗಂಗಾವತಿ ನಗರದಲ್ಲಿ ಲಾಕ್‌ಡೌನ್‌ ಮಾಡಿದ್ದರಿಂದ ಜನರು ತಿರುಗಾಡುವುದು ಕಡಿಮೆಯಾಗಿದ್ದರೂ ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಓಡಾಡಲಾರಾಂಭಿಸಿದ್ದಾರೆ. ಅಲ್ಲದೆ ಗಂಗಾವತಿ ನಗರದಲ್ಲಿ 21 ಜನರನ್ನು ಕ್ವಾರೈಂಟೇನ್‌ಲ್ಲಿಟ್ಟಿದ್ದರಿಂದ ನಿಗಾವಹಿಸಿದೆ. ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಿದೆ. ಕೊಪ್ಪಳ, ರಾಯಚೂರು ಮತ್ತು ಆನೆಗೊಂದಿ ರಸ್ತೆಗಳಲ್ಲಿ ಪೊಲೀಸ್‌ ಬ್ಯಾರಿಕೇಡ್‌ ಹಾಕಲಾಗಿದೆ. ಜನರ ಜೊತೆ ಪೊಲೀಸ್‌ ಇಲಾಖೆ ಸಂಪರ್ಕ ಇಟ್ಟುಕೊಂಡಿದ್ದು ಯಾವುದೇ ಕಾರಣಕ್ಕೂ ಸಭೆ ಸಮಾರಂಭಗಳು ಮತ್ತು ಜಾತ್ರೆಗಳು ನಡೆಯದಂತೆ ಸೂಚನೆ ನೀಡಲಾಗಿದೆ.

ಗಂಗಾವತಿಯಲ್ಲಿ ಕಳೆದ ಎರುಡು ದಿನಗಳಿಂದ ದ್ರೋಣ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿರುವುದರಿಂದ ಅಪರಚಿತರ ಓಡಾಟ ಮತ್ತು ಪೊಲೀಸ್‌ ಇಲಾಖೆಗೆ ಮಾಹಿತಿ ನೀಡದೆ ಕಾರ್ಯಕ್ರಮಗಳನ್ನು ಮಾಡುವುದರ ಬಗ್ಗೆ ನಿಗಾವಹಿಸಿದೆ.
 
click me!