ಕಲಬುರಗಿ ಜಿಲ್ಲೆ ವಾಡಿಯಲ್ಲಿ ಮಗುವಿಗೆ ಕೊರೋನಾ ಸೋಂಕು ದೃಢ| ಕೂಗಳತೆ ದೂರದಲ್ಲಿರುವ ಯಾದಗಿರಿಯಲ್ಲಿ ಮುಂಜಾಗ್ರತೆ ಅವಶ್ಯ| ಜಿಲ್ಲೆಯ ಗಡಿ ಭಾಗದಲ್ಲಿ ಮತ್ತಷ್ಟೂ ಬಿಗಿ ಭದ್ರತೆ : ತಪಾಸಣೆ| ಜಿಲ್ಲೆಯಲ್ಲಿ 52 ವರದಿ ನೆಗೆಟಿವ್, 18 ರಿಪೋರ್ಟ್ ಬರಬೇಕಿದೆ|
ಯಾದಗಿರಿ(ಏ.13): ಕೊರೋನಾ ಸೋಂಕಿತ ಹಾಗೂ ಶಂಕಿತರಾರಯರೂ ಇಲ್ಲದಿದ್ದರಿಂದ, ಸುರಕ್ಷತಾ ವಲಯದಲ್ಲಿ (ಸೇಫ್ ಝೋನ್)ರುವ ಜಿಲ್ಲೆಯ ಪಟ್ಟಿಯಲ್ಲಿರುವ ಯಾದಗಿರಿ ಜಿಲ್ಲೆಯ ಜನರ ಪಾಲಿಗೆ ನಿಟ್ಟುಸಿರು ಬಿಡುವಂತಹ ಸಂದರ್ಭವಾದರೂ, ಭಾನುವಾರ ನೆರೆಯ ಕಲಬುರಗಿ ಜಿಲ್ಲೆ ವಾಡಿ ಪಟ್ಟಣದಲ್ಲಿ 2ವರ್ಷದ ಮಗುವೊಂದಕ್ಕೆ ಸೋಂಕು ದೃಢಪಟ್ಟಿರೋದು ಮತ್ತಷ್ಟು ಮುಂಜಾಗ್ರತೆ ವಹಿಸುವಂತೆ ಮುನ್ಸೂಚನೆ ನೀಡಿದಂತೆ.
ಯಾದಗಿರಿ ನಗರದಿಂದ ಅನತಿ ದೂರದಲ್ಲಿರುವ (38 ಕಿ.ಮಿ.) ದೂರದಲ್ಲಿರುವ ವಾಡಿ ಪಟ್ಟಣದ ಮಗುವಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿ ದೃಢಪಡುತ್ತಿದ್ದಂತೆಯೇ ಜಿಲ್ಲಾಡಳಿತ ಮತ್ತಷ್ಟೂ ಬಿಗಿ ಕ್ರಮಗಳನ್ನು ಅನುಸರಿಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಲಾಕ್ ಡೌನ್ ಅವಧಿಯಲ್ಲಿ ಹೊರತುಪಡಿಸಿ, ಕಲಬುರಗಿಯಿಂದ ಶಹಬಾದ್-ವಾಡಿ ಮಾರ್ಗವಾಗಿ ಯಾದಗಿರಿ ನಗರಕ್ಕೆ ದಿನಂಪ್ರತಿ ಸಾವಿರಾರು ಜನರ ಸಂಚಾರ, ವ್ಯಾಪಾರ ವಹಿವಾಟು ಸಾಕಷ್ಟಿತ್ತು.
ಈಗ ಲಾಕ್ ಡೌನ್ ಅವಧಿಯಲ್ಲಿ ಬಹುತೇಕ ನಿಯಂತ್ರಣಕ್ಕೆ ಬಂದಿದೆಯಾದರೂ, ಜನಸಂಚಾರ ಕಣ್ತಪ್ಪಿಸಿ ಬರುವುದು ಹಾಗೂ ಖಾಸಗಿ ವಾಹನಗಳ ಒಂದಿಷ್ಟುಓಡಾಟ ತಪ್ಪಿರಲಿಲ್ಲ. ಅದರಲ್ಲೂ, ಕಲಬುರಗಿಯಿಂದ ಬಹುತೇಕ ಸರ್ಕಾರಿ ನೌಕರರ ಅಪ್ ಆ್ಯಂಡ್ ಡೌನ್ ಜಿಲ್ಲಾಡಳಿತಕ್ಕೆ ತಲೆನೋವಾಗಿಸಿತ್ತು. ಕೇಂದ್ರಸ್ಥಾನದಲ್ಲೇ ಇರುವಂತೆ ಜಿಲ್ಲಾಧಿಕಾರಿ ಸೂಚನೆ ಇದ್ದಾಗ್ಯೂ ಸಹ ಇದು ನಿಯಂತ್ರಣಕ್ಕೆ ಬಂದಿರಲಿಲ್ಲ.
ಜಿಲ್ಲೆಯ ಗಡಿಗೆ ಹೊಂದಿಕೊಂಡ ವಾಡಿ ಪಟ್ಟಣ ಇಲ್ಲಿಂದ ಕೆಲವೇ ಕಿ.ಮೀ. ದೂರದಲ್ಲಿದೆ. ನಮ್ಮ ಜಿಲ್ಲೆಯ ಗ್ರಾಮಗಳ ಅನೇಕರ ಹೊಲಗದ್ದೆಗಳು ಅಲ್ಲಿನ ನಾಲ್ವಾರ್ ಗಡಿಭಾಗದಲ್ಲಿ ಬರುತ್ತಿವೆ. ಆದರೆ, ವಾಡಿಯಲ್ಲಿ ಪ್ರಕರಣದ ದೃಢಪಟ್ಟನಂತರ, ಮತ್ತಷ್ಟೂಬಿಗಿ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಕನ್ನಡಪ್ರಭಕ್ಕೆ ತಿಳಿಸಿದ ಎಸ್ಪಿ ಋುಷಿಕೇಶ್, ಯರಗೋಳಗೆ ಹೋಗಿ ಪರಿಶೀಲಿಸಿದ್ದೇನೆ. ಕಲಬುರಗಿಯಿಂದ ಇಲ್ಲಿಗೆ ಯಾವುದೇ ಸಂಚಾರ ಆಗದಂತೆ ಸೂಚಿಸಿದ್ದೇನೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗುಲಿಲ್ಲವಾದರೂ, ಜನರು ಮತ್ತಷ್ಟೂಎಚ್ಚರ ವಹಿಸಬೇಕಾಗಿದೆ. ಪಕ್ಕದಲ್ಲೇ ವಾಡಿ ಪಟ್ಟಣ ಸಾಕಷ್ಟುಮುಂಜಾಗ್ರತೆ ವಹಿಸಬೇಕಾಗುತ್ತದೆ. ಎಲ್ಲವೂ ನೆಗೆಟಿವ್ ಬಂದಿವೆಯೆಂದು ಜನರು ಮನೆಯಿಂದ ಹೊರಬಂದರೆ, ಅನಾಹುತಕ್ಕೆ ಆಹ್ವಾನ ಕೊಟ್ಟಂತೆ ಎಂದು ಆತಂಕ ವ್ಯಕ್ತಪಡಿಸಿದ ಜಿಲ್ಲಾ ಆರೋಗ್ಯಧಿಕಾರಿ ಡಾ. ಎಂ. ಎಸ್. ಪಾಟೀಲ್, ಜಿಲ್ಲೆಯ ಜನರು ಮೊದಲಿಗಿಂತಲೂ ಈಗ ಮತ್ತಷ್ಟೂಗಂಭೀರವಹಿಸಬೇಕು ಎಂದು ಮನವಿ ಮಾಡಿದ್ದಾರೆ.