ಮೊಳಕಾಲ್ಮೂರು ಪಟ್ಟಣದ ಜನರಿಗೆ ಆಂಧ್ರದಿಂದ ಕುಡಿಯುವ ನೀರು ಪೂರೈಕೆ. ಖಾಸಗಿ ಟ್ಯಾಂಕರ್ ಗಳಿಂದ ನೀರು ಸರಬರಾಜು ಮಾಡ್ತಿರೋ ಪಕ್ಕದ ರಾಜ್ಯದವರು. ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ದ ಸ್ಥಳೀಯರ ಹಿಡಿಶಾಪ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮಾ.4): ಮೊದಲೇ ಹೇಳಿ ಕೇಳಿ ಈ ಭಾಗದ ಬರ ಪೀಡಿತ ಪ್ರದೇಶ. ಬೇಸಿಗೆ ಬಂತಂದ್ರೆ ಸಾಕು ಕುಡಿಯುವ ನೀರಿಗಾಗಿ ಜನರು ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗುತ್ತೆ. ಆದ್ರೆ ಈ ಬಾರಿ ಮಳೆ ಬಾರದೇ ಬರಗಾಲ ತಾಂಡವ ಆಡ್ತಿರೋದ್ರಿಂದ ನೀರಿಗಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
undefined
ಹೀಗೆ ಬೇರೊಂದು ರಾಜ್ಯದ ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡ್ತಿರೋ ಟ್ಯಾಂಕರ್ ಮಾಲೀಕರು. ನಮಗೆ ಬೇರೆ ಗತಿಯಿಲ್ಲ ಎಂದು ಕೇಳಿದಷ್ಟು ಹಣ ನೀಡಿ ನೀರು ತುಂಬಿಸಿಕೊಳ್ತಿರೋ ಆ ಭಾಗದ ಜನರು. ಈ ದೃಶ್ಯಗಳು ಕಂಡು ಬಂದಿದ್ದು, ಬರದ ನಾಡು ಎಂದು ಕುಖ್ಯಾತಿ ಪಡೆದಿರೋ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪ್ರದೇಶ. ಮೊದಲೇ ಹೇಳಿ ಕೇಳಿ ಚಿತ್ರದುರ್ಗ ಜಿಲ್ಲೆ ಬರದನಾಡು ಎಂದು ಸರ್ಕಾರದಿಂದ ಘೋಷಣೆಯಾಗಿದೆ. ಅದರಲ್ಲಂತೂ ಚಳ್ಳಕೆರೆ, ಮೊಳಕಾಲ್ಮೂರು ಭಾಗದಲ್ಲಿ ಯಾವುದೇ ನೀರಾವರಿ ಮೂಲವಿಲ್ಲ. ಕಳೆದೊಂದು ತಿಂಗಳಿನಿಂದಲೂ ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಪಡ್ತಿದ್ದಾರೆ.
ಸಾರಿಗೆ ನಿಗಮಗಳ ನೌಕರರ ಬೇಡಿಕೆ ಬೇಗ ಈಡೇರಿಸಲು ಒತ್ತಾಯ
ಪಟ್ಟಣದಲ್ಲಿ ಇರುವ ಯಾವುದೇ ಆರ್ ಓ ಪ್ಲಾಂಟ್ ಗಳು ಸರಿಯಾಗಿ ಕೆಲಸ ಮಾಡದ ಪರಿಣಾಮ ಪಕ್ಕದ ಆಂಧ್ರ ರಾಜ್ಯದ ಖಾಸಗಿ ನೀರಿನ ಟ್ಯಾಂಕರ್ ಗಳು ಪಟ್ಟಣಕ್ಕೆ ಲಗ್ಗೆ ಇಡ್ತಿವೆ. ಬೇರೆ ದಾರಿಯಿಲ್ಲದೇ ಜನರು ಒಂದು ಕ್ಯಾನ್ ಗೆ 20ರೂ, ಒಂದು ಕೊಡಕ್ಕೆ 10 ರೂಗಳನ್ನು ನೀಡಿ ತುಂಬಿಸಿಕೊಳ್ತಿದ್ದಾರೆ. ಇನ್ನೂ ಮೊಳಕಾಲ್ಮೂರು ಪಟ್ಟಣದ ನೀರಿಗಾಗಿ ಬರ ಬಂದಿದ್ರು ಯಾವುದೇ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಇರುವುದು ಇಲ್ಲಿನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಖಾಸಗಿ ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡ್ತಿದ್ರು ಜಿಲ್ಲಾಡಳಿತ ನಾಚಿಗೆ ಇಲ್ಲದೇ ಸುಮ್ಮನೆ ಇರುವುದು ವಿಷಾದನೀಯ. ಜನರಿಗೆ ಬರದ ಸಂದರ್ಭದಲ್ಲಿ ಕುಡಿಯಲು ನೀರನ್ನು ಒದಗಿಸಲು ಮೀನಾಮೇಷ ಹೇಳಿಸ್ತಿರೋದು ಖಂಡನೀಯ ಅಂತಿದ್ದಾರೆ ಸ್ಥಳೀಯರು. ಇನ್ನೂ ಪಕ್ಕದ ರಾಜ್ಯದಿಂದ ನೀರು ತಂದು ಮಾರಾಟ ಮಾಡ್ತಿರೋ ವ್ಯಕ್ತಿಯನ್ನೇ ವಿಚಾರಿಸಿದ್ರೆ, ಮೊಳಕಾಲ್ಮೂರಿಂದ ಕೆಲವೇ ದೂರದಲ್ಲಿ ಪಕ್ಕದ ಆಂಧ್ರಪ್ರದೇಶವಿದೆ. ರಾಯದುರ್ಗದಿಂದ ಆಂಧ್ರಕ್ಕೆ ಹೋಗಿ ನೀರು ತಂದು ಮಾರಾಟ ಮಾಡ್ತಿದ್ದೀನಿ. ಕೊಡಕ್ಕೆ 10 ರೂ ಕ್ಯಾನ್ ಗೆ 20ರೂ ತೆಗೆದುಕೊಳ್ತೀವಿ. ಒಂದು ದಿನಕ್ಕೆ ಬರೋಬ್ಬರಿ 100 ಮನೆಗಳಿಗೆ ನೀರು ಸರಬರಾಜು ಮಾಡ್ತೀವಿ ಎಂದರು.
ಬೆಂಗಳೂರು ಮಹಿಳಾ ಸಬ್ ಇನ್ಸಪೆಕ್ಟರ್ ರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಗೆ ಆಯ್ಕೆ
ಒಟ್ಟಾರೆ ಬರದಿಂದ ಕಂಗಾಲಾಗಿ ನೀರಿಗಾಗಿ ಸಂಕಷ್ಟ ಪಡ್ತಿರೋ ಜನರಿಗೆ ಕುಡಿಯಲು ನೀರು ಒದಗಿಸಲುವಲ್ಲಿ ನಿರ್ಲಕ್ಷ್ಯ ತೋರ್ತಿರೋ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳೇ ನಿಮಗೆ ನಾಚಿಗೆ ಆಗೋದಿಲ್ವೇ? ಪಕ್ಕದ ರಾಜ್ಯದಿಂದ ನೀರು ತಂದು ಕೊಟ್ರು ನೀವು ಮಾಡ್ತಿರೋ ಘನಂಧಾರಿ ಕೆಲಸವಾದ್ರು ಏನು ಹೇಳ್ತೀರ ಎಂದು ಪ್ರಶ್ನೆ ಮಾಡ್ತಿದ್ದಾರೆ ನೊಂದ ಜನರು.