ಚಿತ್ರದುರ್ಗ ಜಿಲ್ಲಾಡಳಿತ ಯಡವಟ್ಟು: ಕುಡಿಯುವ ನೀರಿಗೆ ಜನರ ಪರದಾಟ

By Govindaraj S  |  First Published Aug 10, 2023, 7:02 PM IST

ಬೇಸಿಗೆ ವೇಳೆ ನೀರಿನ ಆಹಾಕಾರ‌ ಕೇಳಿ‌ ಬರೋದು ಸಹಜ. ಆದ್ರೆ ಎಲ್ಲೆಡೆ ಕೆರೆ ಕಟ್ಟೆಗಳು ನೀರಿನಿಂದ‌ ಭರ್ತಿಯಾಗಿ, ಕೊಳವೆ ಬಾವಿಗಳಲ್ಲಿ ನೀರು ಭೋರ್ಗರೆಯತ್ತಿದೆ. ಆದ್ರೆ ಇಂತಹ ವೇಳೆ ಚಿತ್ರದುರ್ಗ ಜಿಲ್ಲಾಡಳಿತದ  ಯಡವಟ್ಟಿನಿಂದಾಗಿ ನಾಗರೀಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.10): ಬೇಸಿಗೆ ವೇಳೆ ನೀರಿನ ಆಹಾಕಾರ‌ ಕೇಳಿ‌ ಬರೋದು ಸಹಜ. ಆದ್ರೆ ಎಲ್ಲೆಡೆ ಕೆರೆ ಕಟ್ಟೆಗಳು ನೀರಿನಿಂದ‌ ಭರ್ತಿಯಾಗಿ, ಕೊಳವೆ ಬಾವಿಗಳಲ್ಲಿ ನೀರು ಭೋರ್ಗರೆಯತ್ತಿದೆ. ಆದ್ರೆ ಇಂತಹ ವೇಳೆ ಚಿತ್ರದುರ್ಗ ಜಿಲ್ಲಾಡಳಿತದ  ಯಡವಟ್ಟಿನಿಂದಾಗಿ ನಾಗರೀಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ನೀರಿಗಾಗಿ ನಲ್ಲಿ ಬಳಿ ಕಾದು ನಿಂತ ಮಹಿಳೆಯರು. ನೀರಿಗಾಗಿ ಸಿಕ್ಕ ಸಿಕ್ಕ ಕಚೇರಿಗಳಿಗೆ ಅಲೆದಾಟ. ಈ ದೃಶ್ಯಗಳು ಚಿತ್ರದುರ್ಗ ನಗರದಾದ್ಯಂತ ಕಳೆದೊಂದು ವಾರದಿಂದ ಸಜಹವಾಗಿವೆ. 

Tap to resize

Latest Videos

ಕಾವಾಡಿಗರಹಟ್ಟಿಯಲ್ಲಿ ನಡೆದ ಕಲುಷಿತ ನೀರಿನ ದುರಂತದಿಂದಾಗಿ ಇಡೀ ಚಿತ್ರದುರ್ಗ ನಗರಕ್ಕೆ ನೀರು ಸರಬರಾಜನ್ನು ಜಿಲ್ಲಾಡಳಿತ ನಿಲ್ಲಿಸಿದೆ. ಶಾಂತಿಸಾಗರ ಹಾಗೂ ವಿ.ವಿ‌.ಸಾಗರ ಸೇರಿದಂತೆ ವಿವಿದೆಡೆಗಳಿಂದ ಚಿತ್ರದುರ್ಗ ನಗರಕ್ಕೆ ಸರಬರಾಜಾಗುವ ಎಲ್ಲಾ  ನೀರನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಹೀಗಾಗಿ ಆ ವರದಿ ಬರಬೇಕು ಹಾಗು ಡಿಸಿ ಮೇಡಂ ಹೇಳಬೇಕು. ಅಲ್ಲಿಯವರೆಗೆ ನೀರು ಬಿಡಲ್ಲ ಎನ್ನುವ ನಗರಸಭೆ ಸಿಬ್ಬಂದಿಗಳು ನೀರು ಬಿಡದೇ ಬಿಂದಾಸ್ ಆಗಿ ಕಾಲ ಕಳೆಯುತಿದ್ದಾರೆ. ಹೀಗಾಗಿ ಜನರು ನೀರಿಗಾಗಿ ಪರದಾಡುವಂತಾಗಿದೆ.

ಕಾಫಿನಾಡಲ್ಲಿ ಮತ್ತೆ ಹಿಜಾಬ್ ವಿವಾದ: ಬುರ್ಖಾ ಧರಿಸಿ ತರಗತಿಗಳಿಗೆ ಹೋದ ವಿದ್ಯಾರ್ಥಿನಿಯರು!

ದೂರದ ಬಡಾವಣೆಗಳಲ್ಲಿನ  ಖಾಸಗಿ ನೀರಿನ ಶುದ್ದಿಕರಣ‌ಘಟಕಗಳಿಗೆ ತೆರಳಿ ನೀರನ್ನ ತರಲು ಹರಸಾಹಸ ಪಡುವಂತಾಗಿದೆ.ಹೀಗಾಗಿ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ  ನಾಗರೀಕರು ಕಿಡಿಕಾರಿದ್ದಾರೆ. ತುರ್ತಾಗಿ ಕುಡಿಯುವ  ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಇನ್ನು ಇಂತಹ ಸಮಸ್ಯೆ ಎದುರಾದಾಗ ಬೇರೆಡೆಯಿಂದಾದರು ಯೋಗ್ಯ ಕುಡಿಯುವನೀರನ್ನು  ಸರಬರಾಜು ಮಾಡಿಸಬೇಕಿತ್ತು. ಆದ್ರೆ ಕಾವಾಡಿಗರಹಟ್ಟಿ‌ದುರಂತದ ನೆಪ್ಪದಲ್ಲಿ ಇಡೀ  ಚಿತ್ರದುರ್ಗದ ಜನರಿಗೆ ನೀರಿನ ಅಭಾವ ಸೃಷ್ಟಿಸಿದ್ದಾರೆ‌.

ಅಮೆರಿಕಾಗೆ ಬೈ.. ಬೈ.. ಸ್ಟಾರ್ಟಪ್‌ಗೆ ಹಾಯ್‌ ಎಂದಿದ್ದ ಸಾಫ್ಟ್‌ವೇರ್‌ ಇಂಜಿನಿಯರ್ ಕೊನೆಗೂ ಸಕ್ಸಸ್!

ಈ ಬಗ್ಗೆ ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಅವರನ್ನು ಕೇಳಿದ್ರೆ ಲ್ಯಾಬ್ ನಿಂದ ನೀರು ಪರಿಶುದ್ಧವಾಗಿದೆ ಅಂತ ವರದಿ ಬಂದ ತಕ್ಷಣ ಬಿಡ್ತಿವಿ ಅಂತಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದಕೊಂಡಿದ್ದೇವೆ ಅಂತ ಸಮಜಾಯಿಷಿ ಕೊಡ್ತಾರೆ. ಒಟ್ಟಾರೆ ಬರದನಾಡು ಚಿತ್ರದುರ್ಗದಲ್ಲಿ  ಜಿಲ್ಲಾಡಳಿತದ ಯಡವಟ್ಟಿನಿಂದ ನೀರಿನ ಅಭಾವ ಸೃಷ್ಡಿಯಾಗಿದೆ. ಆದ್ರೆ ಪರ್ಯಾಯ‌ ವ್ಯವಸ್ಥೆ ಕಲ್ಪಿಸಬೇಕಾದ ನಗರಸಭೆ ಕಣ್ಮುಚ್ಚಿ‌ ಕುಳಿತಿದೆ. ಇನ್ನಾದ್ರ ಸಂಬಂಧಪಟ್ಟ‌ ಜನಪ್ರತಿನಿಧಿಗಳಾದ್ರು ಅಗತ್ಯ ನೀರಿನ ವ್ಹವಸ್ಥೆ ಕಲ್ಪಿಸಬೇಕಿದೆ.

click me!