ಮಡಿಕೇರಿ ಹೊಸ ಬಡಾವಣೆ ನಿವಾಸಿಗಳಿಗೆ ಮಲ ಮಿಶ್ರಿತ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿನ ನಿವಾಸಿಗಳಿಗೆ ಮತ್ತೆ ನಲ್ಲಿಗಳ ಮೂಲಕ ಟಾಯ್ಲೆಟ್ ಮಿಶ್ರಿತ ನೀರನ್ನು ಸರಬರಾಜು ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಆದಷ್ಟೂಬೇಗ ನಗರಸಭೆಯಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಎಂದು ಸ್ಥಳೀಯ ಜನ ಒತ್ತಾಯಿಸಿದ್ದಾರೆ.
ಮಡಿಕೇರಿ(ಜ.21): ಒಂದೆಡೆ ಬೇಸಿಗೆ ಕಾಲ ಹತ್ತಿರ ಸಮೀಪಿಸುತ್ತಿದೆ. ಇನ್ನೇನು ಪ್ರತಿವರ್ಷದಂತೆ ಈ ಬಾರಿಯೂ ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಇದ್ದದ್ದೆ. ಮಡಿಕೇರಿ ನಗರದಲ್ಲಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಇರುವುದು ಒಂದೆಡೆಯಾದರೆ. ಇದೀಗ ಮಡಿಕೇರಿ ನಗರಸಭೆಯೂ, ಮಡಿಕೇರಿಯ ಹೊಸ ಬಡವಾಣೆಯ ನಿವಾಸಿಗಳಿಗೆ ಮಲ ಮಿಶ್ರಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ.
ಕಳೆದ ಎರಡು- ಮೂರು ದಿನಗಳಿಂದ ಮಡಿಕೇರಿಯ ಹೊಸ ಬಡವಾಣೆಯ ನಿವಾಸಿಗಳು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಹೊಸ ಬಡವಾಣೆಯಲ್ಲಿನ ನಿವಾಸಿಗಳಿಗೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕಸಕಡ್ಡಿ ಮಿಶ್ರಿತ ಕಲುಷಿತ ನೀರನ್ನು ನಗರಸಭೆ ಸರಬರಾಜು ಮಾಡಿದ್ದ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ನಗರಸಭೆ ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಿತು.
ಬಾಂಬ್ ನಿಷ್ಕ್ರಿಯ ಕಾರ್ಯಾಚರಣೆಯಲ್ಲಿ ಕೊಡಗಿನ ಯೋಧ ಭಾಗಿ
ಆದರೆ ಇದೀಗ ಇಲ್ಲಿನ ನಿವಾಸಿಗಳಿಗೆ ಮತ್ತೆ ನಲ್ಲಿಗಳ ಮೂಲಕ ಟಾಯ್ಲೆಟ್ ಮಿಶ್ರಿತ ನೀರನ್ನು ಸರಬರಾಜು ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಆದಷ್ಟೂಬೇಗ ನಗರಸಭೆಯಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಎಂದು ಸ್ಥಳೀಯ ಜನ ಒತ್ತಾಯಿಸಿದ್ದಾರೆ.
ಕಸ ಕಡ್ಡಿ ಮಿಶ್ರಿತ ನೀರು
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಗರದ ಹೊಸಬಡಾವಣೆಯ ನಿವಾಸಿಗಳಿಗೆ ಕಸಕಡ್ಡಿ ಮಿಶ್ರಿತ ಕುಡಿಯುವ ನೀರು ಪೂರೈಕೆ ಆಗಿತ್ತು. ಈ ಬಗ್ಗೆ ಪತ್ರಿಕೆ, ಮಾಧ್ಯಮಗಳಲ್ಲೂ ವರದಿಯಾಗಿತ್ತು. ಆದರೆ ಇದೀಗ ಮಲ ಮಿಶ್ರಿತದಲ್ಲಿ ನೀರು ಸರಬರಾಜಾಗಿದ್ದು. ಹೊಸ ಬಡವಾಣೆಯ ನಿವಾಸಿಗಳು ನಲ್ಲಿ ನೀರು ಬಳಕೆಗೆ ಹಿಂಜರಿಯುವಂತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಚಿತ್ರಗಳು ವೈರಲ್
ಮಡಿಕೇರಿ ಹೊಸ ಬಡವಾಣೆಯಲ್ಲಿನ ನಿವಾಸಿಗಳಿಗೆ ನಲ್ಲಿ ಮುಖಾಂತರ ನಗರಸಭೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ಸೋಮವಾರ ಇಲ್ಲಿನ ನಿವಾಸಿಗಳಿಗೆ ಟಾಯ್ಲೆಟ್ ಮಿಶ್ರಿತ ಕುಡಿಯುವ ನೀರು ಸರಬರಾಜಾಗಿದ್ದು, ಟಾಯ್ಲೆಟ್ ಮಿಶ್ರಿತ ನೀರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
'ಮುಸ್ಲಿಮರೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗ್ಬೇಡಿ'..! ಆಡಿಯೋ ವೈರಲ್
ಕಳೆದ ಎರಡು- ಮೂರು ದಿನಗಳಿಂದ ನಮಗೆ ಮಲ ಮಿಶ್ರಿತ ನೀರು ನಗರಸಭೆಯಿಂದ ಪೂರೈಕೆ ಆಗುತ್ತಿದೆ. ನೀರಿನಲ್ಲಿ ಮಲ ಮಿಶ್ರಿತ, ಗಲೀಜು ವಾಸನೆ ಬರುತ್ತಿದ್ದು, ಇದೀಗ ಕುಡಿಯವ ನೀರಿಗೆ ತೊಂದರೆ ಉಂಟಾಗಿದೆ. ಇದರ ಬಗ್ಗೆ ನಗರ ಸಭೆ ಎಚ್ಚೆತ್ತುಕೊಂಡು ಹೊಸ ಬಡವಾಣೆಯ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ ಎಂದು ಹೊಸ ಬಡಾವಣೆ ನಿವಾಸಿ ಸುಮಿತ್ರ ಹೇಳಿದ್ದಾರೆ.
ಕಳೆದ 2- 3 ದಿನಗಳಿಂದ ನಗರದ ಹೊಸ ಬಡಾವಣೆಯ ನಿವಾಸಿಗಳಿಗೆæ ಶೌಚಾಲಯದ ಮಲ ಮಿಶ್ರಿತ ಕಲುಷಿತ ನೀರು ಸರಬರಾಜು ಆಗುತ್ತಿದೆ. ಈ ಸಂಬಂಧ ನಗರಸಭೆಯ ಅಭಿಯಂತರ ಗಮನಕ್ಕೆ ತರಲಾಗಿದ್ದು, ಈಗಾಗಲೇ ಕಿರಿಯ ಅಭಿಯಂತರರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಹೊಸ ಪೈಪ್ ಲೈನ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರವಿಗೌಡ ಹೇಳಿದ್ದಾರೆ.
ಏರ್‌ಪೋರ್ಟ್‌ನಲ್ಲಿ ಬಾಂಬ್ ಪ್ರಕರಣ; ಮಂಗಳೂರಿಗೆ ಎನ್‌ಐಎ ತಂಡ
ಈ ಹಿಂದೆ ಕೂಡ ಚರಂಡಿ ಸ್ಲೇಬ್‌ನ ಒಳಗಿನಿಂದ ಹಾದುಹೋಗಿರುವ ನೀರು ಸರಬರಾಜು ಪೈಪ್ ಲೈನ್ ಒಡೆದು ಕಲುಷಿತ ನೀರು ಸರಬರಾಜು ಆಗಿತ್ತು. ಈ ಸಂಬಂಧ ಪರಿಶೀಲನೆ ಮಾಡಿ ಒಡೆದ ಪೈಪ್ ಅನ್ನು ಪತ್ತೆ ಹಚ್ಚಿ ಪೈಪ್‌ಗಳ ದುರಸ್ತಿ ಮಾಡಲಾಯಿತು. ಆದರೆ ಇದೀಗ ಆದೇ ರೀತಿಯ ಸಮಸ್ಯೆ ಮತ್ತೆ ಎದುರಾಗಿದ್ದು, ಕಲುಷಿತ ನೀರು ಕೆಲ ಮನೆಗಳಿಗೆ ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ನಗರಸಭೆ ಸಿಬ್ಬಂದಿ ದುರಸ್ತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಹೊಸ ಪೈಪ್ ಲೈನ್ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮಡಿಕೇರಿ ನಗರಸಭೆ ಕಿರಿಯ ಅಭಿಯಂತರರು ನಾಗರಾಜ್ ಹೇಳಿದ್ದಾರೆ.