ಬೆಂಗಳೂರು ಪ್ರೆಸ್ ಕ್ಲಬ್ ಕೊಡಮಾಡುವ 2019ನೇ ಸಾಲಿನ ‘ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ’ಗೆ ಈ ಬಾರಿ ಹಲವು ಸಾಧಕರನ್ನು ಆಯ್ಕೆ ಮಾಡಲಾಗಿದೆ. ವರ್ಷದ ವ್ಯಕ್ತಿ ಪ್ರಶಸ್ತಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ವೆಂಕಟಸುಬ್ಬಯ್ಯ ಅವರಿಗೆ ನೀಡಲಾಗುತ್ತಿದೆ. ಇನ್ನು ಜೆಪಿ ಶೆಟ್ಟಿ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ.
ಬೆಂಗಳೂರು [ಡಿ.25]: ಬೆಂಗಳೂರು ಪ್ರೆಸ್ ಕ್ಲಬ್ ಕೊಡಮಾಡುವ 2019ನೇ ಸಾಲಿನ ‘ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ‘ಯುಗದ ಸಾಧಕ ಪ್ರಶಸ್ತಿ’ಗೆ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು ಹಿರಿಯ ಪತ್ರಕರ್ತರಾದ ಜಯಪ್ರಕಾಶ ಶೆಟ್ಟಿ, ಎಂ.ಸಿದ್ದರಾಜು, ಕೆ.ಸುನೀಲ್ ಪ್ರಸಾದ್, ಕೆ.ಎಚ್.ಸಾವಿತ್ರಿ, ಬಿ.ವಿ.ನಾಗರಾಜು, ರವೀಂದ್ರ ಜಿ.ಭಟ್, ಕೆ.ಎನ್.ಚನ್ನೇಗೌಡ, ಹರಿಶ್ಚಂದ್ರ ಭಟ್ ಬಿ., ಅಬ್ದುಲ್ ಹಮೀದ್ ಎಂ., ಇಮ್ರಾನ್ ಖುರೇಶಿ, ಜಿ.ಕೆ.ಸತ್ಯ, ಲಕ್ಷ್ಮಣ ಕೊಡಸೆ, ಜೋಸೆಫ್ ಹೂವರ್, ಎನ್.ಎಸ್.ಶಂಕರ್, ಬಿ.ಕೆ.ರವಿ, ರು.ಬಸಪ್ಪ ಅವರನ್ನು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸುವರ್ಣ ನ್ಯೂಸ್ ಜಯಪ್ರಕಾಶ್ ಶೆಟ್ಟಿಗೆ ಮೋಗ್ಲಿಂಗ್ ಪ್ರಶಸ್ತಿ...
ಡಿ.31ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜೆಪಿ ಶೆಟ್ಟಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ
ಹಿರಿಯ ಪತ್ರಕರ್ತರಾದ ಜೆಪಿ ಶೆಟ್ಟಿ ಅವರು ಈ ಬಾರಿ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಿಗ್ 3 ಮೂಲಕ ಖ್ಯಾತಿಯಾಗಿರುವ ಅವರಿಗೆ ಈ ಗೌರವ ಸಿಕ್ಕಿದೆ.
ಸುವರ್ಣ ನ್ಯೂಸ್ ಕರೆಂಟ್ ಅಫೇರ್ಸ್ ಎಡಿಟರ್ ಆಗಿರುವ ಜಯಪ್ರಕಾಶ್ ಶೆಟ್ಟಿ ಅವರಿಗೆ ಇತ್ತೀಚೆಗಷ್ಟೇ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಹರ್ಮನ್ ಮೋಗ್ಲಿಂಗ್ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದ್ದು, ಇದೀಗ ಮತ್ತೊಂದು ಗೌರವ ಒಲಿದು ಬಂದಿದೆ.