ಗೊಂಬೆ ಭೂತ ತೆಗೆಯಿರಿ ಎಂದ ವಾಟಾಳ್ ನಾಗರಾಜ್

By Kannadaprabha NewsFirst Published Dec 25, 2019, 8:02 AM IST
Highlights

ಸಿಗ್ನಲ್ ನಲ್ಲಿ ನಿಲ್ಲಿಸಿದ ಪೊಲೀಸ್ ಗೊಂಬೆಗಳು ಭೂತಗಳಾಗಿವೆ. ಅವುಗಳನ್ನು ತೆರವು ಮಾಡಿ ಎಂದು ವಾಟಾಳ್ ನಾಗರಾಜ್ ಹೋರಾಟ ಮಾಡಿದ್ದಾರೆ. 

ಬೆಂಗಳೂರು [ಡಿ.25]:  ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ರಸ್ತೆ ಸಿಗ್ನಲ್‌ಗಳಲ್ಲಿ ನಿಲ್ಲಿಸಿದ್ದ ಸಂಚಾರ ಪೊಲೀಸ್‌ ಗೊಂಬೆ ತೆರವುಗೊಳಿಸುವಂತೆ ಆಗ್ರಹಿಸಿ ವಿರುದ್ಧ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಮತ್ತು ಕಾರ್ಯಕರ್ತರು ಮಂಗಳವಾರ ಅರಮನೆ ರಸ್ತೆಯ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್‌ ನಾಗರಾಜ್‌, ಸಂಚಾರ ಪೊಲೀಸರು ಸರಿಯಾಗಿ ಕೆಲಸ ಮಾಡುವುದಿಲ್ಲವೆಂದು ಹೇಳಿ ಸಿಗ್ನಲ್‌ಗಳಲ್ಲಿ ಇಂತಹ ಗೊಂಬೆ ನಿಲ್ಲಿಸಿದ್ದಾರೆ. ಈ ಗೊಂಬೆ ಭೂತ ಇದೀಗ ಪೊಲೀಸ್‌ ಇಲಾಖೆಗೆ ಕಾಡುತ್ತಿದೆ. ಸಮರ್ಪಕವಾಗಿ ಕೆಲಸ ಮಾಡುತ್ತಿರುವ ಪೊಲೀಸರ ಹೆಸರಿಗೆ ಗೊಂಬೆಯಿಂದ ಚ್ಯುತಿ ಬರುತ್ತದೆ. ಅವರ ಕಾರ್ಯಕ್ಕೆ ಕೆಟ್ಟಹೆಸರು ಬರುತ್ತದೆ. ಆದ್ದರಿಂದ ಈ ಬೊಂಬೆ ಭೂತವನ್ನು ತೆರವು ಮಾಡಿ ಗ್ಯಾರೇಜ್‌ಗೆ ಹಾಕಬೇಕು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಘವೇಂದ್ರ ಔರಾದ್ಕರ್‌ ವರದಿಯನ್ನು ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಬೇಕು. ಸರ್ಕಾರ ಈಗಾಗಲೇ ವರದಿಯನ್ನು ಜಾರಿ ಮಾಡಲಾಗಿದೆ ಎಂದು ಹೇಳುತ್ತಿದೆ. ಇದರಿಂದ ಹೊಸದಾಗಿ ನೇಮಕಗೊಂಡ ಪೊಲೀಸರಿಗೆ ಮಾತ್ರ ಅನುಕೂಲವಾಗುತ್ತಿದೆ. ಎಲ್ಲ ಪೊಲೀಸರಿಗೆ ಅನುಕೂಲವಾಗುವಂತೆ ವರದಿ ಜಾರಿ ಮಾಡಬೇಕೆಂದು ಅವರು ಒತ್ತಾಯಿಸಿದರು.

click me!