ಬರ ನಿರ್ವಹಣೆಗೆ 15ಕೋಟಿ ಬಿಡುಗಡೆ ಡಾ.ಜಿ.ಪರಮೇಶ್ವರ್

By Kannadaprabha News  |  First Published Nov 11, 2023, 9:22 AM IST

ತುಮಕೂರು ಜಿಲ್ಲೆಯ 10 ತಾಲೂಕುಗಳನ್ನು ಬರ ಪ್ರದೇಶ ಎಂದು ಘೋಷಿಸಲಾಗಿದ್ದು, ಈಗಾಗಲೆ ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಗೆ 15 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಅನುದಾನವನ್ನು ಬರ ನಿರ್ವಹಣೆಗಾಗಿ ಬಳಸಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.


 ಕೊರಟಗೆರೆ  : ತುಮಕೂರು ಜಿಲ್ಲೆಯ 10 ತಾಲೂಕುಗಳನ್ನು ಬರ ಪ್ರದೇಶ ಎಂದು ಘೋಷಿಸಲಾಗಿದ್ದು, ಈಗಾಗಲೆ ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಗೆ 15 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಅನುದಾನವನ್ನು ಬರ ನಿರ್ವಹಣೆಗಾಗಿ ಬಳಸಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳೊಂದಿಗೆ ನಡೆದ ಪರಿಸ್ಥಿತಿ ನಿರ್ವಹಣಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿನ ಬರದ ನಿರ್ವಹಣೆಯನ್ನು ಯಾವ ರೀತಿ ಮಾಡಬೇಕು ಎಂಬುದುನ್ನು ಗಂಭೀರ ಚಿಂತನೆ ನಡೆಸಿದೆ. ರಾಜ್ಯದಲ್ಲಿ 226 ತಾಲೂಕುಗಳಲ್ಲಿ 223 ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಗುರುತಿಸಲಾಗಿದ್ದು, ಬರದ ಛಾಯೆಯಿಂದ 37 ಸಾವಿರ ಕೋಟಿ ನಷ್ಟ ಉಂಟಾಗಿದ್ದು, ಅದರಲ್ಲಿ ಕೇಂದ್ರ ಸರ್ಕಾರಕ್ಕೆ 17 ಸಾವಿರ ಕೋಟಿ ನೆರವು ನೀಡುವಂತೆ ಮನವಿ ಮಾಡಿದ್ದರೂ ಇಲ್ಲಿಯವೆರೆಗೂ ಒಂದು ನಯಾಪ್ಯಸೆ ಬಿಡುಗಡೆ ಮಾಡಿಲ್ಲ.

Latest Videos

undefined

ರಾಜ್ಯ ಸರ್ಕಾರವೇ ಬರ ನಿರ್ವಹಣೆಗೆ ಮುಂದಾಗಿದ್ದು, ಬರದ ತೀವ್ರತೆಗೆ ತಕ್ಕಂತೆ ನಿರ್ವಹಣೆಗೆ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ, ಸಧ್ಯದ ಪರಿಸ್ಥಿಯಲ್ಲಿ ಯಾವುದೇ ರೀತಿಯ ಹಣದ ಕೊರತೆಯಿಲ್ಲ, ಮುಂದಿನ ಡಿಸೆಂಬರ್ ನಿಂದ ಏಪ್ರಿಲ್ ತಿಂಗಳಲ್ಲಿ ಉಂಟಾಗುವ ಬರದ ತೀವ್ರತೆಗೆ ಸಮಸ್ಯೆ ಬಾರದು ಎಂದು ತಿಳಿಸಿದರು.

ರೈತರು ಗ್ರಾಮಗಳಿಂದ ಬೇರೆಕಡೆ ಹೋಗುತ್ತಿದ್ದಾರೆಂಬ ವಿರೋಧ ಪಕ್ಷದವರ ಆರೋಪಗಳು ಸುಳ್ಳಾಗಿದ್ದು, ಈಗಾಗಲೆ ಬರದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 500 ಕೋಟಿ ವೆಚ್ಚದಲ್ಲಿ ನರೇಗಾ ಕಾಮಗಾರಿ ಅನಷ್ಠಾನಗೊಳಿಸಲಾಗುತ್ತಿದೆ, ಪ್ರತಿ ಗ್ರಾ.ಪಂ 100 ಜನ ಹಾಗೂ ಪ್ರತಿ ರೈತರಿಗೆ 30 ರಿಂದ 50 ಸಾವಿರದವರೆಗೆ ನರೇಗಾ ಯೋಜನೆಯಡಿ ಅಂಗನವಾಡಿ, ಶಾಲಾ ಕಟ್ಟಡ, ಮೈದಾನ, ಆಸ್ಪತ್ರೆ, ರಸ್ತೆ ಸೇರಿದಂತೆ ವಿವಿಧ ಸಮುದಾಯ ಆಧಾರಿತ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುತ್ತಿದ್ದು, 5 ಗ್ಯಾರಂಟಿಗಳಲ್ಲಿ ಈಗಾಲೆ 4 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆತರಲಾಗಿದೆ. ಉಳಿದ 1 ಗ್ಯಾರಂಟಿ ಅತಿ ಶೀಘ್ರದಲ್ಲಿ ಅನುಷ್ಠಾನಕ್ಕೆ ತರಲಾಗುವುದು. ಬರ ಪರಿಶೀಲನೆಗೆ ಕೊರಟಗೆರೆ ತಾಲೂಕಿಗೆ ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತಾಲೂಕಿನ ಗ್ರಾ.ಪಂ. ನಲ್ಲಿ ಎಸ್ಸಿ ಎಸ್ಟಿ ಅವರಿಗೆ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, ಸರ್ಕಾರದಲ್ಲಿ ಹಣ ಇಲ್ಲ ಎಂದು ಟೀಕೆ ಮಾಡಿದ್ದರು. ಆದರೆ, ತಾಂತ್ರಿಕ ತೊಂದರೆಯಿಂದ ಬೌನ್ಸ್ ಆಗಿರುವ ಚೆಕ್‌ಗೆ ಹಣ ಸಂದಾಯವಾಗಿದೆ, ಅಧಿಕಾರಿಗಳ ನಿರ್ಲಕ್ಷದಿಂದ ಹಣ ಸಂದಾಯ ನಿಧಾನವಾಗಿದೆ. ಸರ್ಕಾರದ ಬಗ್ಗೆ ಟೀಕೆ ಬಿಟ್ಟು ವೀರೋಧ ಪಕ್ಷದವರು ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಬರ ಪರಿಹಾರ ಹಣ ಬಿಡುಗಡೆಗೆ ಮನವಿ ಮಾಡಿ ಜನತೆಯ ಸಹಾಯಕ್ಕೆ ಬರಲಿ. ಅದು ಬಿಟ್ಟು ಕೇವಲ ಟೀಕೆ ಮಾಡುವುದಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶೀನಿವಾಸ್, ಸಿಇಒ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಧುಗಿರಿ ಉಪ ವಿಭಾಗಾಧಿಕಾರಿ ರಿಷಿ, ತಹಶೀಲ್ದಾರ್ ಕೆ.ಮಂಜುನಾಥ್, ತಾ.ಪಂ. ಸಿಇಒ ಡಾ.ದೊಡ್ಡಸಿದ್ದಯ್ಯ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ವಿವಿಧ ಇಲಾಖಾ ಅದಿಕಾರಿಗಳು ಉಪಸ್ಥಿತರಿದ್ದರು. 

click me!