ರಾಸಲೀಲೆ ವಿಡಿಯೋ ಬಹಿರಂಗ ಮಾಡಿ, ಸವಾಲ್ ಹಾಕಿದ ಚಿತ್ರದುರ್ಗದ ದಿಟ್ಟೆ

First Published 16, Nov 2018, 6:14 PM IST
Highlights

ಇದೊಂದು ತರಹದ ವಿಚಿತ್ರ ಪ್ರಕರಣ. ಗಂಡನೇ ಹೆಂಡತಿಯ ಚಾರಿತ್ರ್ಯ ವಧೆ ಮಾಡಲು ಮುಂದಾದನೆ? ಚಿತ್ರದುರ್ಗದ ಈ ಗಂಡ-ಹೆಂಡತಿ ಜಟಾಪಟಿ ಏನು? 

ಚಿತ್ರದುರ್ಗ(ನ.16]  ಪತ್ನಿಯ ಚಾರಿತ್ರ್ಯ ವಧೆ ಮಾಡಿದ್ದ ಪತಿ ವಿರುದ್ದ ತಿರುಗಿ  ಪತ್ನಿ ತಿರುಗಿ ಬಿದ್ದಿದ್ದಾಳೆ. ಪತಿ ರಾಘವೇಂದ್ರ ನೀಡುತ್ತಿದ್ದ ಕಿರುಕುಳದ ಬಗ್ಗೆ ಮಾಧ್ಯಮಗಳ ಮುಂದೆ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ನನ್ನ ಗಂಡ ವಕೀಲ ರಾಘವೇಂದ್ರ ಅವರಿಂದ ಆರು ತಿಂಗಳಿನಿಂದ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಮುದ್ದೆ ಕೋಲಿನಿಂದ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ. ರಾತ್ರಿ ಹನ್ನೆರಡು ಗಂಟೆ ವೇಳೆಯಲ್ಲಿ  ಮುದ್ದೆ ಕೋಲಿನಿಂದ ಹಲ್ಲೆ  ಮಾಡಿದ್ದಾನೆ. ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ತಾಯಿ ಹೆಸರಿಗೆ ಬರೆದು ಕೊಟ್ಟಿದ್ದಕ್ಕೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.

"

ಗಂಡ ರಾಘವೇಂದ್ರ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದಾನೆ. ಸೋದರ ಮಾವನ ಜೊತೆ  ನನಗೆ ಅನೈತಿಕ  ಸಂಬಂಧ ಇದೆ ಎಂದು ಅಪಪ್ರಚಾರ  ಮಾಡಿದ್ದಾನೆ.  ನನ್ನ ಬಳಿ ಪತ್ನಿಯ ರಾಸಲೀಲೆ ವಿಡಿಯೋ ಇದೆ. ಅದನ್ನು ಬಿಡುಗಡೆ ಮಾಡುವುದಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡು ಚಾರಿತ್ರ್ಯ ಹರಣ ಮಾಡಿದ್ದಾಮೆ. ಅಲ್ಲದೇ  ಪೊಲೀಸರಿಗೂ ದೂರು ನೀಡಿ, ಪಾಕ್ಷಿಕ ಪತ್ರಿಕೆಗಳಲ್ಲಿ ನನ್ನ ವಿರುದ್ದ ಇಲ್ಲ ಸಲ್ಲದ್ದನ್ನು ಬರೆಸಿದ್ದಾನೆ ಎಂದು ಆರೋಪಿಸಿದ್ದಾಳೆ

ಅವರ ಬಳಿ ಅನೈತಿಕ ಸಂಬಂಧದ ಸಿಡಿ ಇದ್ದರೆ ಕೂಡಲೇ ಬಿಡುಗಡೆ ಮಾಡಲಿ. ಸಾಬೀತಾದರೆ ನಾನು ಕೊಟ್ಟ ದೂರುಗಳನ್ನ  ಹಿಂಪಡೆಯುತ್ತೆನೆ. ಕಳೆದ 6 ತಿಂಗಳಿನಿಂದ ಇವನ ಕಿರುಕುಳ ತಡೆದುಕೊಂಡು  ಸಾಕಾಗಿದೆ.ಮನೆಯಿಂದ ನನ್ನನ್ನು ಹೊರಹಾಕಿ ನಾಪತ್ತೆಯಾಗಿದ್ದಾನೆ. ಹೀಗಾಗಿ ವರದಕ್ಷಿಣೆ ಕಿರುಕುಳ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದೇನೆ ಎಂದು ನೊಂದ ಪತ್ನಿ ಶೋಭಾ ಅವರಿಂದ ಪತಿ ರಾಘವೇಂದ್ರ ವಿರುದ್ದ ದೂರು ನೀಡಿದ್ದಾರೆ.

 

 

 

Last Updated 16, Nov 2018, 8:58 PM IST