
ಗಿರೀಶ್ ಗರಗ
ಬೆಂಗಳೂರು(ಆ.30): ಒಂದು ಕಾಲದಲ್ಲಿ ಬೆಂಗಳೂರಿನ ಆಕರ್ಷಣೆಯಾಗಿದ್ದ ಡಬ್ಬಲ್ ಡೆಕ್ಕರ್ ಬಸ್‌ಗಳು ಈ ವರ್ಷದ ಅಂತ್ಯಕ್ಕೆ ನಗರದಲ್ಲಿ ಸಂಚರಿಸುವ ಸಾಧ್ಯತೆಗಳಿವೆ. ಅದಕ್ಕಾಗಿ ಡಬ್ಬಲ್ ಡೆಕ್ಕರ್ ಬಸ್‌ಗಳ ಪೂರೈಕೆಗೆ ಗುತ್ತಿಗೆ ಸಂಸ್ಥೆ ನೇಮಿಸಲು ಬಿಎಂಟಿಸಿ ಮುಂದಿನ 15 ದಿನದ ಒಳಗಾಗಿ ಟೆಂಡರ್ ಪ್ರಕ್ರಿಯೆ ನಡೆಸಲಿದೆ.
ಬೆಂಗಳೂರಿನಲ್ಲಿ 26 ವರ್ಷಗಳ ನಂತರ ಮತ್ತೆ ಡಬ್ಬಲ್ ಡೆಕ್ಕರ್ ಬಸ್ ಸೇವೆ ಒದಗಿಸಲು ಬಿಎಂಟಿಸಿ ಸಿದ್ಧವಾಗಿದೆ. 1970-80ರ ವೇಳೆಯಲ್ಲಿ ಸೇವೆ ಆರಂಭಿಸಿದ್ದ ಡಬ್ಬಲ್ ಡೆಕ್ಕರ್ ಬಸ್‌ಗಳ ಓಡಾಟವನ್ನು ಬಿಎಂಟಿಸಿ (ಅಂದಿನ ಬಿಟಿಎಸ್) 1997ರಲ್ಲಿ ಸ್ಥಗಿತಗೊಳಿಸಿತ್ತು. ರಸ್ತೆಗಳ ವಿಸ್ತೀರ್ಣ, ರಸ್ತೆಗಳ ಮೇಲ್ಭಾಗದಲ್ಲಿ ತಂತಿಗಳು ಹೆಚ್ಚಳ, ಬಸ್‌ಗಳ ನಿರ್ವಹಣೆ ಕೊರತೆ ಹೀಗೆ ಹಲವು ಕಾರಣಗಳಿಂದಾಗಿ ಡಬ್ಬಲ್ ಡೆಕ್ಕರ್ ಬಸ್‌ಗಳ ಸೇವೆಯನ್ನು ನಿಲ್ಲಿಸಲಾಗಿತ್ತು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಡಬ್ಬಲ್ ಡೆಕ್ಕರ್ ಬಸ್ ಸೇವೆ ಆರಂಭಿಸುವ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಅದನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಅದಕ್ಕಾಗಿ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ 10 ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸಿ ಕಾರ್ಯಾಚರಣೆಗೊಳಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ.
ಮಾರ್ಚ್‌ನಿಂದ ಬೆಂಗಳೂರಿನಲ್ಲಿ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಸೇವೆ, ದರ ಮತ್ತು ಮಾರ್ಗ ಮಾಹಿತಿ
ಹಿಂದಿನ ಟೆಂಡರ್ ರದ್ದು
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳೆದ ಜನವರಿಯಲ್ಲಿ 5 ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸುವ ಸಲುವಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಒಂದು ಸಂಸ್ಥೆ ಮಾತ್ರ ಬಿಡ್ ಸಲ್ಲಿಸಿತ್ತು. ಅದರಿಂದಾಗಿ ಆ ಸಂಸ್ಥೆಗೆ ಕಾರ್ಯಾದೇಶ ನೀಡಿರಲಿಲ್ಲ, ಬದಲಿಗೆ ಸಂಸ್ಥೆ ಜತೆಗೆ ಬಿಎಂಟಿಸಿಯಿಂದ ಮಾತುಕತೆ ನಡೆಸಲಾಗಿತ್ತು. ಆದರೆ, ಇದೀಗ 10 ಡಬ್ಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ಬಿಎಂಟಿಸಿ ನಿರ್ಧರಿಸಿದ್ದು, ಅದಕ್ಕಾಗಿ ಶೀಘ್ರದಲ್ಲಿ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಈ ಡಬ್ಬಲ್ ಡೆಕ್ಕರ್ ಬಸ್‌ಗಳಲ್ಲಿ ಬಹುತೇಕವು ಎಲೆಕ್ಟ್ರಿಕ್ ವಾಹನಗಳಾಗಿರಲಿವೆ.
ಡಬ್ಬಲ್ ಡೆಕ್ಕರ್ ಬಸ್‌ಗಳ ಖರೀದಿಗಾಗಿ ಕಳೆದ ಜೂನ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಜತೆಗೆ ಯೋಜನೆಗಾಗಿ 24 ಕೋಟಿಗಳನ್ನು ಒದಗಿಸುವುದಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು. ಅದರಂತೆ ಡಬ್ಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಬಸ್‌ಗಳನ್ನು ರಸ್ತೆಗಿಳಿಸುವ ಯೋಜನೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
Bengaluru: ಮತ್ತೆ ಸಿಲಿಕಾನ್ ಸಿಟಿಯ ರಸ್ತೆಗಿಳಿಯಲಿದೆ ಡಬಲ್ ಡೆಕ್ಕರ್ ಬಸ್..!
ಹೊರವರ್ತುಲ ರಸ್ತೆಗಳಲ್ಲಿ ಡಬ್ಬಲ್ ಡೆಕ್ಕರ್ ಸಂಚಾರ
ಸದ್ಯ ಬೆಂಗಳೂರಿನ ಒಳಭಾಗದಲ್ಲಿ ಡಬ್ಬಲ್ ಡೆಕ್ಕರ್ ಬಸ್‌ಗಳ ಸಂಚಾರಕ್ಕೆ ಸೂಕ್ತ ರಸ್ತೆಗಳಿಲ್ಲ. ಡಬ್ಬಲ್ ಡೆಕ್ಕರ್ ಬಸ್‌ಗಳು ಸಾಮಾನ್ಯ ಬಸ್‌ಗಳಿಗಿಂತ ಸಾಕಷ್ಟುಎತ್ತರ ಇಲ್ಲಿರುವ ಕಾರಣ, ನಗರದೊಳಗೆ ಸಂಚರಿಸಲು ಸಾಧ್ಯವಿಲ್ಲ. ಹೀಗಾಗಿ ಡಬ್ಬಲ್ ಡೆಕ್ಕರ್ ಬಸ್‌ಗಳು ಯಾವ ಮಾರ್ಗದಲ್ಲಿ ಸಂಚರಿಸಬಹುದು ಎಂದು ಬಿಎಂಟಿಸಿ ಈಗಾಗಲೇ ಸರ್ವೇಯನ್ನೂ ನಡೆಸಿದೆ. ಅದರ ಪ್ರಕಾರ ಹೊರವರ್ತುಲ ರಸ್ತೆಯಲ್ಲಿ ಡಬ್ಬಲ್ ಡೆಕ್ಕರ್ ಬಸ್ ಸೇವೆ ನೀಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಅದರ ಜತೆಗೆ ಡಬ್ಬಲ್ ಡೆಕ್ಕರ್ ಬಸ್‌ಗಳು ಸಂಚರಿಸಬಹುದಾದ ಇನ್ನಿತರ ಮಾರ್ಗಗಳನ್ನೂ ಹುಡುಕಲಾಗುತ್ತಿದ್ದು, ಸೂಕ್ತ ರಸ್ತೆಗಳು ಸಿಕ್ಕರೆ ಅಲ್ಲಿಯೂ ಡಬ್ಬಲ್ ಡೆಕ್ಕರ್ ಬಸ್‌ಗಳ ಸೇವೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
*ಗಾಂಧಿಬಜಾರ್, ಶಿವಾಜಿನಗರ, ಶ್ರೀನಗರ, ಕೆ.ಆರ್. ಮಾರುಕಟ್ಟೆಯಿಂದ ಮೆಜೆಸ್ಟಿಕ್‌ಗೆ ಓಡುತ್ತಿದ್ದ ಬಸ್
*1997ರ ನಂತರ ಬಸ್ ಸೇವೆ ಸ್ಥಗಿತ, ಪ್ರಸ್ತುತ ಚಾವಣಿ ಮುಚ್ಚಿರುವ ಡಬ್ಬಲ್ ಡೆಕ್ಕರ್ ಬಸ್‌ಗಳ ಖರೀದಿ
*ಎಲೆಕ್ಟ್ರಿಕ್ ಡಬ್ಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ಒತ್ತು, ಸೆಮಿ ಲೋ ಫೆಲೕರ್ ಇರುವ ಬಸ್‌ಗಳ ಖರೀದಿ
*ಪ್ರತಿ ಬಸ್‌ಗೆ .2.2 ಕೋಟಿ ವೆಚ್ಚವಾಗುವ ಸಾಧ್ಯತೆ, ಪ್ರತಿ ಬಸ್‌ಗಳಲ್ಲಿ 90 ಆಸನಗಳ ಸಾಮರ್ಥ್ಯ