ಅಕ್ಷಯ ತೃತೀಯದಂದು ಮುಸ್ಲಿಂರ ಅಂಗಡಿಯಲ್ಲಿ ಚಿನ್ನ ಖರೀದಿಸಬೇಡಿ: ಹಿಂದೂಗಳಿಗೆ ಮುತಾಲಿಕ್ ಕರೆ, ಲವ್ ಜಿಹಾದ್, ಪೊಲೀಸರ ವಿರುದ್ಧ ಕಿಡಿ

Published : Apr 18, 2026, 01:09 PM IST
Pramod mutalik

ಸಾರಾಂಶ

ಕೊಪ್ಪಳದಲ್ಲಿ ಮಾತನಾಡಿದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಬಂಗಾರ ಖರೀದಿಸುವಂತೆ ಕರೆ. ಅಳವಂಡಿ ಲವ್ ಜಿಹಾದ್ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದ ಅವರು, ಟಿಸಿಎಸ್ ಮತಾಂತರ ಪ್ರಕರಣದ ಬಗ್ಗೆ ಎನ್‌ಐಎ ತನಿಖೆಗೆ ಆಗ್ರಹ.

ಕೊಪ್ಪಳ (ಏ.18) ಅಕ್ಷಯ ತೃತೀಯದಂದು ಮುಸ್ಲಿಂ ಸಮುದಾಯದ ಅಂಗಡಿಗಳಲ್ಲಿ ಬಂಗಾರ ಖರೀದಿಸಬಾರದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಿಂದೂಗಳಿಗೆ ಕರೆ ನೀಡಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಬಂಗಾರ ಖರೀದಿಸುವ ಶಾಸ್ತ್ರ ಪವಿತ್ರವಾದದ್ದು. ಮೂರ್ತಿ ಭಂಜಕರ ಬಳಿ ವ್ಯವಹಾರ ಬೇಡ, ಧರ್ಮಕ್ಕಾಗಿ ಹಲಾಲ್ ಮುಕ್ತ ವ್ಯವಹಾರ ನಡೆಸಿ, ಹಿಂದೂ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಬಂಗಾರ ಖರೀದಿಸುವಂಎ ಕರೆ ನೀಡಿದರು.

ಐಟಿ ಸೆಕ್ಟರ್‌ TCS ನಲ್ಲೇ ಮತಾಂತರ ಆಘಾತಕಾರಿ

ನಾಸಿಕ್‌ನ ಟಿಸಿಎಸ್ (TCS) ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಮತಾಂತರ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ ಮುತಾಲಿಕ್, ಇದು ಅತ್ಯಂತ ಗಂಭೀರ ವಿಚಾರ. ದೇಶದ ಇಡೀ ಐಟಿ ಸೆಕ್ಟರ್ ಅನ್ನು ಎನ್‌ಐಎ (NIA) ಮೂಲಕ ಸಮೀಕ್ಷೆ ನಡೆಸಬೇಕು. ನಿದಾ ಖಾನ್ ಎಂಬಾಕೆ ಹಲವರೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಯಿದ್ದು, ತನಿಖೆ ಚುರುಕುಗೊಳ್ಳಬೇಕು ಎಂದು ಆಗ್ರಹಿಸಿದರು.

ಅಳವಂಡಿ ಪ್ರಕರಣ: ಪೊಲೀಸರಿಗೆ ಹೆಣ್ಮಕ್ಕಳಿದ್ದಾರೋ ಇಲ್ವೋ?

ಕೊಪ್ಪಳದ ಅಳವಂಡಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣದ ಬಗ್ಗೆ ಮಾತನಾಡುತ್ತಾ ಪೊಲೀಸರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಅಳವಂಡಿಯಲ್ಲಿ ನಡೆದಿರುವುದು ಐದನೆಯ ಪ್ರಕರಣವಾಗಿದೆ. ಮುಸ್ತಾಫ್ ಗಾಂಜಾ, ಡ್ರಗ್. ಮಟ್ಕಾ ಕಿಂಗ್ ಪಿನ್, ಅವನ ಮೊಬೈಲ್‌ನಲ್ಲಿ ನಾಲ್ಕು ಸಾವಿರ ಅಶ್ಲೀಲ ವಿಡಿಯೋ, ಆರು ಸಾವಿರ ಫೋಟೊಗಳಿವೆ. ಅವುಗಳನ್ನು ಸ್ವಲ್ಪ ಸಮಯದಲ್ಲೇ ಡಿಲಿಟ್ ಮಾಡಿದ್ದಾನೆ. ಮುಸ್ತಾಫ್ ಅಕ್ರಮಗಳ ಕಿಂಗ್‌ಪಿನ್ ಆಗಿದ್ದರೂ ಪೊಲೀಸರು ಏಕೆ ಬಂಧಿಸಿಲ್ಲ? ನೀವು ಸೆಗಣಿ ತಿನ್ನುತ್ತಿದ್ದೀರಾ? ಎಂದು ಪ್ರಶ್ನಿಸಿದ ಮುತಾಲಿಕ್, ಅಳವಂಡಿ ಕಾಂಗ್ರೆಸ್ ಮುಖಂಡರು ಮುಸ್ಲಿಂ ಓಲೈಕೆಯಲ್ಲಿ ತೊಡಗಿದ್ದು, ಈ ಕೇಸ್‌ನ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಆದರೆ ಈ ಪೊಲೀಸರು ಖಾಕಿ ತೊಟ್ಟು ಕರ್ತವ್ಯ ಪಾಲನೆ ಮಾಡದೇ ಭ್ರಷ್ಟಾಚಾರಕ್ಕೆ ಬಲಿಯಾಗಿದ್ದಾರೆ' ಎಂದು ಗಂಭೀರ ಆರೋಪ ಮಾಡಿದರು.

ವಾಲ್ಮೀಕಿ ಸಮಾಜದ ಯುವತಿ ಮೇಲೆ ಮತಾಂತರದ ಪ್ರಭಾವ

ವಾಲ್ಮೀಕಿ ಸಮಾಜದ ಯುವತಿ ಮುಸ್ತಾಫ್ ಮನೆಯಲ್ಲಿದ್ದು, ಆಕೆಗೆ ಈಗಾಗಲೇ ಹಿಜಾಬ್, ಬುರ್ಕಾ ಹಾಗೂ ನಮಾಜ್ ಕಲಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಂ ಕ್ರಿಮಿನಲ್‌ಗಳಿಗೆ ರೇಪಿಸ್ಟ್ ಕೊಲೆಗಾರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಕೋರ್ಟ್‌ಗಳು ಇಂತಹ ಪ್ರಕರಣಗಳಲ್ಲಿ ವಿಳಂಬ ಮಾಡದೆ ತಕ್ಷಣ ತೀರ್ಪು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭಜರಂಗ ದಳ ಜಿಲ್ಲಾಧ್ಯಕ್ಷ ಅರುಣ ಹೂಗಾರ ಹಾಗೂ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀಧರ ಕಲಬುರಗಿ ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಈ ಸಾವಿಗೆ ಯಾರು ಹೊಣೆ? ಬಯಲಾಟ ನೋಡುವ ವೇಳೆ ಕುಸಿದು ಬಿದ್ದ ಬೋರ್ಡ್‌, ಬದುಕಿ ಬಾಳಬೇಕಾದ ಇಬ್ಬರು ಮಕ್ಕಳ ಸಾವು!
Women Reservation bill ಮಹಿಳಾ ಮೀಸಲಾತಿ ವಿರೋಧಿಸೋರು ಸಮಾನತೆಯ ವೈರಿಗಳು: ಯಡಿಯೂರಪ್ಪ