ರಕ್ತದಾನದಿಂದ ಜೀವದಾನ: ಅನಿಲ್‌

Published : Sep 02, 2023, 08:15 AM IST
 ರಕ್ತದಾನದಿಂದ ಜೀವದಾನ: ಅನಿಲ್‌

ಸಾರಾಂಶ

ರಕ್ತವು ಪ್ರಕೃತಿ ನಮಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ರಕ್ತದಾನ ಎಂದರೆ ಒಬ್ಬ ವ್ಯಕ್ತಿಗೆ ಜೀವದಾನ ನೀಡಿದಂತೆ. ನಾವು ನೀಡುವ ರಕ್ತ ಇನ್ನೊಂದು ದಿನ ಬೇರೆಯವರಿಗೆ ಸಹಾಯವಾಗುತ್ತದೆ ಎಂದು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಮೇಜರ್‌ ಅನಿಲ್‌ ಕುಮಾರ್‌ ಹೇಳಿದರು.

 ಶಿರಾ :  ರಕ್ತವು ಪ್ರಕೃತಿ ನಮಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ರಕ್ತದಾನ ಎಂದರೆ ಒಬ್ಬ ವ್ಯಕ್ತಿಗೆ ಜೀವದಾನ ನೀಡಿದಂತೆ. ನಾವು ನೀಡುವ ರಕ್ತ ಇನ್ನೊಂದು ದಿನ ಬೇರೆಯವರಿಗೆ ಸಹಾಯವಾಗುತ್ತದೆ ಎಂದು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಮೇಜರ್‌ ಅನಿಲ್‌ ಕುಮಾರ್‌ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ರೆಡ್‌ ಕ್ರಾಸ್‌ ಘಟಕ ಹಾಗೂ ಶಿರಾ ರೋಟರಿ ಸ್ಯಾಟಲೈಟ್‌ ಕ್ಲಬ್‌ ಸಹಯೋಗದೊಂದಿಗೆ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದು. 18 ವರ್ಷದ ಮೇಲ್ಪಟ್ಟಮತ್ತು 45 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವಿರುವ ಯಾವುದೇ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು ಎಂದು ತಿಳಿಸಿದರು.

ಈ ಶಿಬಿರದಲ್ಲಿ ತುಮಕೂರು ಜಿಲ್ಲಾ ರಕ್ತ ನಿಧಿ ಕೇಂದ್ರದಿಂದ 40 ಯೂನಿಟ್‌ ರಕ್ತವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಯಿತು. ಶಿರಾ ರೋಟರಿ ಸ್ಯಾಟಲೈಟ್‌ ಕ್ಲಬ್‌ ಚೇರ್ಮನ್‌ ಡಿ.ಎಸ್‌.ಕೇಶವ, ರೊಟೇರಿಯನ್‌ ಕೆವಿ ಕುಮಾರಸ್ವಾಮಿ, ಕಾಲೇಜಿನ ರೆಡ್‌ ಕ್ರಾಸ್‌ ಘಟಕದ ಆಯಿಷ, ಡಾ. ಶೇಕ್‌ ಸೇರಿದಂತೆ ಹಲವರು ಹಾಜರಿದ್ದರು. 

ಮದುವೆಯ ಆರತಕ್ಷತೆ ಸಮಾರಂಭದಲ್ಲೂ ರಕ್ತದಾನ

ಬಳ್ಳಾರಿ(ಆ.27): ಮಹಾರಕ್ತದಾನಿ ಎಂದೇ ಹೆಸರಾಗಿರುವ ನಗರದ ಎಸ್‌ಬಿಐ ಬ್ಯಾಂಕ್‌ ನೌಕರ ಬಿ. ದೇವಣ್ಣ ಅವರು ಪುತ್ರನ ಮದುವೆಯ ಆರತಕ್ಷತೆ ಸಮಾರಂಭದಲ್ಲೂ ರಕ್ತದಾನ ಏರ್ಪಡಿಸುವ ಮೂಲಕ ಮಾನವೀಯ ಕಾಳಜಿ ಮೆರೆದಿದ್ದಾರೆ.

ನಗರದ ಬಲಿಜ ಭವನದಲ್ಲಿ ಜರುಗಿದ ಬಿ.ದೇವಣ್ಣನವರ ಪುತ್ರ ಕೆ.ಶ್ರೀಕಾಂತ್‌ ಹಾಗೂ ಹೇಮಾಶ್ರೀ ದಂಪತಿ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಸ್ವಯಂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ದೇವಣ್ಣನವರ ಕುಟುಂಬ ಸದಸ್ಯರು, ಸ್ನೇಹಿತರು ಸೇರಿದಂತೆ ಒಟ್ಟು 51 ಜನರು ರಕ್ತದಾನ ಮಾಡಿದರು.

ಲೋಕಸಭೆಗೆ ಶ್ರೀರಾಮುಲು ಸ್ಪರ್ಧಿಸುವುದು ಸೂಕ್ತ: ಸೋಮಶೇಖರ ರೆಡ್ಡಿ

ಅಷ್ಟೇ ಅಲ್ಲ, ಮಗನ ಮದುವೆ ಸಮಾರಂಭ ನಿಮಿತ್ತ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಗೆ .10 ಸಾವಿರ ಹಾಗೂ ಶಾಂಭವಿ ಭಜನಾ ಟ್ರಸ್ಟ್‌ಗೆ .51 ಸಾವಿರ ದೇಣಿಗೆ ನೀಡಿ ಸಮಾಜಮುಖಿ ಕೆಲಸಕ್ಕೆ ದೇವಣ್ಣ ನೆರವಾದರು.
ಶ್ರೀಕಾಂತ -ಹೇಮಾಶ್ರೀ ಮದುವೆಗೆ ಆಗಮಿಸಿದ್ದ ಕುಟುಂಬ ಸದಸ್ಯರು ಹಾಗೂ ಬಂಧುಮಿತ್ರರು ಮದುವೆ ಸಮಾರಂಭದ ಬಿಡುವಿಲ್ಲದ ಕೆಲಸದ ನಡುವೆಯೂ ರಕ್ತದಾನ ಶಿಬಿರಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡ ದೇವಣ್ಣನರ ಸೇವಾ ಕಾರ್ಯ ಕಂಡ ಅನೇಕರು, ಆರತಕ್ಷತೆಯ ಸಮಾರಂಭದ ಬಳಿಕ ತಾವೂ ರಕ್ತದಾನ ಮಾಡಿ ಸಾರ್ಥಕಭಾವ ಕಂಡುಕೊಂಡರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕಮ್ಮರಚೇಡು ಮಠದ ಶ್ರೀಕಲ್ಯಾಣಸ್ವಾಮಿ ದೇವಣ್ಣ ಕುಟುಂಬ ಸದಸ್ಯರ ಸೇವಾ ಕಾರ್ಯ ಶ್ಲಾಘಿಸಿದರು.

ಸರ್ಕಾರಿ ನೌಕರರು ರಜೆ ದಿನಗಳಲ್ಲಿ ಕುಟುಂಬ ಜತೆ ಇರಲು ಬಯಸುತ್ತಾರೆ. ಇಲ್ಲವೇ ಗೆಳೆಯರ ಜತೆ ಪ್ರವಾಸ ಮತ್ತಿತರ ಕಡೆ ತೆರಳಿ ಸಂಭ್ರಮಿಸುತ್ತಾರೆ. ಆದರೆ, ದೇವಣ್ಣವರು ಬ್ಯಾಂಕ್‌ ನೌಕರರಾಗಿದ್ದು ರಜೆಗಳನ್ನು ಸಮಾಜಸೇವೆಗೆ ವಿನಿಯೋಗ ಮಾಡಿದ್ದಾರೆ. ಇಂತಹ ವ್ಯಕ್ತಿತ್ವಗಳು ಸಮಾಜದಲ್ಲಿ ಅಪರೂಪ. ಪ್ರತಿಯೊಂದರಲ್ಲೂ ಸ್ವಾರ್ಥದ ಚಿಂತನೆ ಹೆಚ್ಚುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ದೇವಣ್ಣನವರು ವಿಶೇಷವಾಗಿ ಕಾಣುತ್ತಾರೆ ಎಂದರಲ್ಲದೆ, ದೇವಣ್ಣನವರ ಬದುಕು ಬೇರೆಯವರಿಗೆ ಆದರ್ಶವಾಗಿದೆ ಎಂದು ಶ್ಲಾಘಿಸಿದರು.

ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಎಂ.ಎ. ಶಕೀಬ್‌, ಸದಸ್ಯರಾದ ಎಲ್‌ಐಸಿ ರಾಮುಕು, ಕೆ.ಗೋಪಾಲ, ಶಿವಸಾಗರ, ಹರಿಶಂಕರ ಸೇರಿದಂತೆ ಅನೇಕ ಗಣ್ಯರು ಆರಕ್ಷತೆಯಲ್ಲಿ ಪಾಲ್ಗೊಂಡಿದ್ದರು.

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!