
ಕಾರವಾರ(ಮಾ.14): ಜಿಲ್ಲೆಯ ಕುಮಟಾ ತಾಲೂಕಿನ ಗುಡೇಅಂಗಡಿ ಸಮುದ್ರ ತೀರದಲ್ಲಿ ಶುಕ್ರವಾರ ಅಪರೂಪದ ಡಾಲ್ಛಿನ್ ಕಳೆಬರ ಪತ್ತೆಯಾಗಿದೆ.
ಇಂಡೋ ಪೆಸಿಫಿಕ್ ಹಂಪ್ ಬ್ಯಾಕ್ ಪ್ರಭೇದದ ಡಾಲ್ಛಿನ್ ಇದಾಗಿದ್ದು, ಸುಮಾರು 2.55 ಮೀಟರ್ ಉದ್ದ ಹಾಗೂ 250 ಕೆಜಿ ತೂಕವಿದೆ. ಬೋಟ್‌ಗೆ ಡಿಕ್ಕಿ ಹೊಡೆದು ಅಥವಾ ಆಹಾರದಲ್ಲಿ ವಿಷ ಪ್ರಾಶನವಾಗಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಗೋಕರ್ಣ ಮಹಾಬಲೇಶ್ವರ ದೇಗುಲದ ಮೊಬೈಲ್ ಆ್ಯಪ್ ಲೋಕಾರ್ಪಣೆ
ಆಳ ಸಮುದ್ರದಲ್ಲಿ ಕಂಡುಬರುವ ಈ ಡಾಲ್ಛಿನ್ 15ರಿಂದ 20 ಸೆಕೆಂಡ್‌ಗಳಷ್ಟು ಸಮುದ್ರದಿಂದ ಮೇಲೆ ಬಂದು ಹೋಗುತ್ತದೆ. ಬಳಿಕ ಸಮುದ್ರದೊಳಗೆ ಹೋಗಿ ಮೀನುಗಳನ್ನು ಬೇಟೆಯಾಡುತ್ತವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.