ಗುಮ್ಮಟನಗರಿಯಲ್ಲಿ ಮುದ್ದು ಶ್ವಾನಗಳ ಪ್ರದರ್ಶ‌ನ; ಡಾಗ್ ಶೋ ವೇಳೆ ರೆಬೀಸ್ ಕುರಿತು ಜಾಗೃತಿ

By Ravi Janekal  |  First Published Dec 18, 2023, 3:17 PM IST

ಜಗತ್ತಿನಲ್ಲೇ ಅತ್ಯಂತ ನಿಯತ್ತಿನ ಪ್ರಾಣಿ ಎಂದ್ರೆ ಅದು ನಾಯಿ. ಅಲ್ಲದೆ ಎಲ್ಲರ ಪ್ರಿಯವಾದದ್ದು ಸಹ ಶ್ವಾನವೇ ಆಗಿದೆ. ಮನುಷ್ಯನ ಮನಸ್ಸಿಗೆ ಹತ್ತಿರವಾದ ಶ್ವಾನಗಳ ಪ್ರದರ್ಶನ ವಿಜಯಪುರದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಡೆದ ಶ್ವಾನ ಪ್ರದರ್ಶನದಲ್ಲಿ 200ಕ್ಕೂ ಅಧಿಕ ಶ್ವಾನಗಳು ಭಾಗವಹಿಸಿದ್ದವು.


- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಡಿ.17) : ಜಗತ್ತಿನಲ್ಲೇ ಅತ್ಯಂತ ನಿಯತ್ತಿನ ಪ್ರಾಣಿ ಎಂದ್ರೆ ಅದು ನಾಯಿ. ಅಲ್ಲದೆ ಎಲ್ಲರ ಪ್ರಿಯವಾದದ್ದು ಸಹ ಶ್ವಾನವೇ ಆಗಿದೆ. ಮನುಷ್ಯನ ಮನಸ್ಸಿಗೆ ಹತ್ತಿರವಾದ ಶ್ವಾನಗಳ ಪ್ರದರ್ಶನ ವಿಜಯಪುರದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಡೆದ ಶ್ವಾನ ಪ್ರದರ್ಶನದಲ್ಲಿ 200ಕ್ಕೂ ಅಧಿಕ ಶ್ವಾನಗಳು ಭಾಗವಹಿಸಿದ್ದವು.

Latest Videos

undefined

200 ಮುದ್ದು ಶ್ವಾನಗಳ‌ ಪ್ರದರ್ಶನ:

ವಿಜಯಪುರದಲ್ಲಿ ನಡೆದ ಡಾಗ್ ಶೋ ಎಲ್ಲರನ್ನೂ ಸೆಳೆಯಿತು. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಡಾಗ್ ಶೋ ನಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಜತ್ ಸೇರಿದಂತೆ ವಿವಿಧೆಡೆಯಿಂದ 200ಕ್ಕೂ ಅಧಿಕ ಶ್ವಾನಗಳೊಂದಿಗೆ ಅವುಗಳ ಮಾಲೀಕರು ಆಗಮಿಸಿದ್ರು. ಡಾಬರಮನ್, ಜ್ಯೂಲಿ, ಮುಧೋಳ ತಳಿ, ಲ್ಯಾಬ್ರೊಡಾಲ್, ಜರ್ಮನ್ ಶಫರ್ಡ್, ಸೈಬ್ರೇಲಾ ಹಸ್ಕಿ, ಪಿಟಬುಲ್ ಸೇರಿದಂತೆ ವಿವಿಧ ತಳಿಗಳ ಶ್ವಾನಗಳ ಪ್ರದರ್ಶನ ಜೋರಾಗಿತ್ತು. 

ಡಾಗ್ ಶೋನಲ್ಲಿ ರೇಬಿಸ್ ಕುರಿತು ಜಾಗೃತಿ:

ಡಾಗ್ ಶೋ ನಲ್ಲಿ ವಿವಿಧ ತಳಿಗಳ ಪರಿಚಯ, ಹಾಗೂ ಶ್ವಾನಗಳಿಗೆ ರೇಬಿಸ್ ಬಗ್ಗೆ ಜಾಗೃತಿ ಮೂಡಿಸುವದಾಗಿತ್ತು. ಪ್ರದರ್ಶನಕ್ಕೆ ಬಂದಿದ್ದ ಎಲ್ಲ ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕೆ ಹಾಕಲಾಯಿತು. ಜೊತೆಗೆ ವಿವಿಧ ತಳಿಗಳ ಶ್ವಾನಗಳನ್ನು ಸಾಕುವ ಮೂಲಕ ಶ್ವಾನ ಬ್ರೀಡರ್ ಆಗಿ ಎಷ್ಟೋ ಯುವಕರು ಹೊಸ ಉದ್ಯಮವನ್ನೂ ಮಾಡಬಹುದಾಗಿದೆ.

ಗೆದ್ದ ಶ್ವಾನಗಳಿಗೆ ಬಹುಮಾನ:

ಇನ್ನು ಡಾಗ್ ಶೋ ನಲ್ಲಿ ಶ್ವಾನಗಳ ವಿವಿಧ ತಳಿಗಳು ಹಾಗೂ ಅವುಗಳ ವ್ಯಕ್ತಿತ್ವ, ಶ್ವಾನಗಳ ಹಾವ ಭಾವ, ಶ್ವಾನಗಳ ಕಲರ್, ಶ್ವಾನಗಳ ಆರೋಗ್ಯ ಮುಂತಾದ ಮಾನದಂಡಗಳ ಮೇಲೆ ವಿನ್ನರ್ ಡಾಗ್ ಗಳನ್ನು ಆಯ್ಕೆ ಮಾಡಲಾಗುತ್ತದೆ. 

ಶ್ವಾನಗಳಿಗೆ ನಗದು ಬಹುಮಾನ:

ಇಡಿ ಡಾಗ್ ಶೋ(Vijayapur Dog show) ನಲ್ಲಿ ಒಂದು ಶ್ವಾನವನ್ನು ಶೋ ಚಾಂಪಿಯನ್ ಎಂದು ಆಯ್ಕೆ ಮಾಡಿ ಅದಕ್ಕೆ 15ಸಾವಿರ ಬಹುಮಾನ, ನಂತ್ರದಲ್ಲಿ ಪ್ರಥಮ ಬಹುಮಾನವಾಗಿ 10ಸಾವಿರ, ದ್ವಿತೀಯ ಬಹುಮಾನವಾಗಿ 7ಸಾವಿರ ಹಾಗೂ ತೃತೀಯ ಬಹುಮಾನವಾಗಿ 5ಸಾವಿರ ನಗದು ನೀಡಲಾಗುತ್ತದೆ. ಶ್ವಾನಗಳ ಪ್ರದರ್ಶನದಲ್ಲಿ ಕೆಲ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಸಹ ಇದೆ. ಇನ್ನು ನಗರದಲ್ಲಿ ನಡೆದ ಡಾಗ್ ಶೋ ನೋಡಲು ಕಿಕ್ಕಿರಿದು ಪ್ರಾಣಿಪ್ರಿಯರು ಆಗಮಿಸಿದ್ರು.

ಮನ ಮುಟ್ಟಿದ ಶ್ವಾನ ಪ್ರದರ್ಶನ:

ಮನೆ ಕಾಯುವ ಹಾಗೂ ನಿಯತ್ತಿನಲ್ಲಿ ಮೊದಲ ಸ್ಥಾನ ಪಡೆದಿರುವ ಶ್ವಾನಗಳ ಪ್ರದರ್ಶನ ವಿಶಿಷ್ಠವಾಗಿತ್ತು. ವಿಜಯಪುರ ನಗರದಲ್ಲಿ ನಡೆದ ಡಾಗ್ ಶೋ ನಲ್ಲಿ ಬಂದ ಶ್ವಾನಗಳು ಶ್ವಾನಪ್ರಿಯರ ಮನಮುಟ್ಟುವಂತಿತ್ತು

click me!