ಜಾತಿಗಣತಿ ಹೊಸದಾಗಿ ಸಮೀಕ್ಷೆ ನಡೆಸಬೇಕು : ಕೆ.ಎಸ್. ಸದಾಶಿವಯ್ಯ

By Kannadaprabha News  |  First Published Dec 18, 2023, 9:58 AM IST

ಜಾತಿ ಗಣತಿ ವರದಿಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸದೆ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭೆ ಸರ್ಕಾರವನ್ನು ಒತ್ತಾಯಿಸಿದ್ದು ಅದರಂತೆ ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಬೇಕೆಂದು ವೀರಶೈವ ಲಿಂಗಾಯತ ಸಮಾಜದ ಮುಖಂಡ ಹಾಗೂ ಬಿಜೆಪಿ ಸ್ಥಾಪಿತ ಸದಸ್ಯ ಕೆ.ಎಸ್. ಸದಾಶಿವಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತಿಪಟೂರು: ಜಾತಿ ಗಣತಿ ವರದಿಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸದೆ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭೆ ಸರ್ಕಾರವನ್ನು ಒತ್ತಾಯಿಸಿದ್ದು ಅದರಂತೆ ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಬೇಕೆಂದು ವೀರಶೈವ ಲಿಂಗಾಯತ ಸಮಾಜದ ಮುಖಂಡ ಹಾಗೂ ಬಿಜೆಪಿ ಸ್ಥಾಪಿತ ಸದಸ್ಯ ಕೆ.ಎಸ್. ಸದಾಶಿವಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀರಶೈವ ಲಿಂಗಾಯಿತ ಸಮುದಾಯ ಜಾತಿ ಗಣತಿಗೆ ವಿರುದ್ಧವಾಗಿಲ್ಲ ಆದರೆ ಪ್ರಸ್ತುತ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಅವೈಜ್ಞಾನಿಕ ಸಮೀಕ್ಷೆಯನ್ನು ಮಾತ್ರ ವಿರೋಧಿಸುತ್ತದೆ. ಸಮುದಾಯಕ್ಕೆ ಸೂಕ್ತ ನ್ಯಾಯ ಸಿಗಬೇಕಾದರೆ ರಾಜ್ಯದಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕು. ಜನಗಣತಿ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಸಬೇಕು. ಈಗ ಸಮೀಕ್ಷೆ ನಡೆದು ಎಂಟು ವರ್ಷಗಳಾಗಿವೆ. ಆದ್ದರಿಂದ ಸಮೀಕ್ಷೆಯನ್ನು ಸರ್ಕಾರ ಮತ್ತೊಮ್ಮೆ ವೈಜ್ಞಾನಿಕ ರೀತಿಯಲ್ಲಿ ನಡೆಸಬೇಕೆಂದು ಕೆ.ಎಸ್. ಸದಾಶಿವಯ್ಯ ಒತ್ತಾಯಿಸಿದ್ದಾರೆ.

Tap to resize

Latest Videos

undefined

ಸದ್ಯಕ್ಕೆ ಬಿಡುಗಡೆ ಮಾಡಲ್ಲ

ದಾವಣಗೆರೆ (ಡಿ.16): ರಾಜ್ಯದಲ್ಲಿ ಈ ಹಿಂದೆ ನಡೆಸಲಾಗಿರುವ ಜಾತಿಗಣತಿ ವರದಿ ವೈಜ್ಞಾನಿಕವಾಗಿಲ್ಲ. ಆದ್ದರಿಂದ ಜಾತಿಗಣತಿ ವರದಿ ಬಿಡುಗಡೆ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 60 ಶಾಸಕರು ಸಹಿ ಮಾಡಿ ಕೊಟ್ಟಿದ್ದೇವೆ. ಆದ್ದರಿಂದ ಸದ್ಯಕ್ಕಂತೂ ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿ ಬಿಡುಗಡೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೇ ಜಾತಿ ಆಧಾರೊತ ಜನಗಣತಿ ವರದಿ ಬಿಡುಗಡೆ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ನೀಡಿದ್ದೆವು. ಈ ಹಿಂದೆ ಸಮೀಕ್ಷೆ ಮಾಡಿದ ವರದಿ ವೈಜ್ಞಾನಿಕವಾಗಿ ಇಲ್ಲ ಎಂದು 60 ಲಿಂಗಾಯತ  ಶಾಸಕರು ಸಹಿ ಮಾಡಿಸಿ ಕೊಟ್ಟಿದ್ದೇವು. ಆದ್ದರಿಂದ ಬಿಡುಗಡೆ ಮಾಡುತ್ತೇವೆ, ಇಲ್ಲ ಎಂದು ಸಿಎಂ ಬಾಯಿ ಬಿಟ್ಟು ಹೇಳಿಲ್ಲ. ಬನಾನೇ ಇನ್ನು ಸರಿಯಾಗಿ ವರದಿ ನೋಡಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದ್ದರಿಂದ ಸದ್ಯಕ್ಕಂತು ಸಿಎಂ ವರದಿಯನ್ನು ಬಿಡುಗಡೆ ಮಾಡೋದಿಲ್ಲ ಎಂದು ಹೇಳಿದರು.

ಮಂಡ್ಯದ ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣದ ಆಲೆಮನೆ ಸೀಜ್ ಮಾಡದ ಸರ್ಕಾರ: ಆರ್.ಅಶೋಕ್ ಆಕ್ರೋಶ

ಇನ್ನು ದಾವಣಗೆರೆಯಲ್ಲಿ ನಡೆಯುವ ವೀರಶೈವ ಮಹಾಸಭೆಯ ಮಹಾ ಅಧಿವೇಶನಕ್ಕೆ ಮಾಜಿ ಸಿಎಂ ಯಡಿಯೂರಪ್ಪನವರು ಸೇರಿ ಎಲ್ಲಾ ವೀರಶೈವ ನಾಯಕರನ್ನೂ ಕರೆದಿದ್ದೇವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾವು ವೀರಶೈವ ಲಿಂಗಾಯತ ಮಹಾ ಅಧಿವೇಶನಕ್ಕೆ ಕರೆದಿಲ್ಲ. ಆದ್ದರಿಂದ ಅವರು ಅಲ್ಲಿಗೆ ಹೇಗೆ ಬರ್ತಾರೆ. ಆದರೆ, ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ಬಗ್ಗೆ ನನಗೇನು ಗೊತ್ತಿಲ್ಲ. ಅವರು ಅಲ್ಲಿ ಮಾಡಿದ್ರೆ, ನಾವು ಇಲ್ಲಿ ಮಾಡ್ತಾ ಇದೀವಲ್ಲ ಸಮಾವೇಶನಾ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಶಬರಿಮಲೆಯಲ್ಲಿ ಭಕ್ತರಿಗೆ ಮೂಲ ಸೌಕರ್ಯಗಳ ಸಮಸ್ಯೆ: ಕೇರಳದ ಶಬರಿಮಲೈಯಲ್ಲಿ ಅವ್ಯವಸ್ಥೆಯ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರು, ಶಬರಿಮಲೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಹೋಗುತ್ತಾರೆ. ಜನಸಾಮಾನ್ಯರು, ಶ್ರಮ ಜೀವಿಗಳು ಕೇರಳದ ಅಯ್ಯಪ್ಪ ಸ್ವಾಮಿಗೆ ನಡೆದುಕೊಂಡು ಬರುತ್ತಿದ್ದಾರೆ. ನಾನು ಕೂಡ ಕಳೆದ ವರ್ಷ ಮಾಲಾಧಾರಿಯಾಗಿ ಶಬರಿಮಲೈಗೆ ಹೋಗಿ ಬಂದಿದ್ದೇನೆ. ಅಯ್ಯಪ್ಪ ಸ್ವಾಮಿ ದೇಗುಲದಿಂದ ಕೇರಳ ಸರ್ಕಾರಕ್ಕೆ ಸಾಕಷ್ಟು ಆದಾಯ ಬರುತ್ತಿದೆ. ಈ ಆದಾಯವನ್ನು ಬಳಸಿಕೊಂಡು ಅಯ್ಯಪ್ಪ ಸ್ವಾಮಿ ಭಕ್ತರಿಗೆ ಮೂರು ಕಾಸಿನ ವ್ಯವಸ್ಥೆ ಕೂಡ ಕೇರಳ ಸರ್ಕಾರ ಮಾಡಿಲ್ಲ ಎಂದು ಕಿಡಿಕಾರಿದರು.

click me!