'ಗೃಹಜ್ಯೋತಿ' ಲಾಭ ಪಡೆಯಲು ಇದು ಕಡ್ಡಾಯ: ಇಲ್ಲದಿದ್ರೆ ಯೋಜನೆ ಕ್ಯಾನ್ಸಲ್​- ಇಂಧನ ಇಲಾಖೆ ಎಚ್ಚರಿಕೆ

Published : Aug 04, 2026, 08:01 PM IST
Gruha Jyothi  Scheme

ಸಾರಾಂಶ

ಸರ್ಕಾರವು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಪುನರ್​ಪರಿಶೀಲಿಸುತ್ತಿದೆ. ಬೆಸ್ಕಾಂ ಸಿಬ್ಬಂದಿ ಸಮೀಕ್ಷೆಗೆ ಬಂದಾಗ ಆಧಾರ್ ಕಾರ್ಡ್, ಬಾಡಿಗೆ ಒಪ್ಪಂದದಂತಹ ಅಗತ್ಯ ದಾಖಲೆಗಳನ್ನು ನೀಡದಿದ್ದರೆ, ಯೋಜನೆಯ ಉಚಿತ ವಿದ್ಯುತ್ ಲಾಭವನ್ನು ರದ್ದುಗೊಳಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಬೆಂಗಳೂರು: ಸರ್ಕಾರ ಜಾರಿಗೊಳಿಸಿರುವ ಗೃಹಜ್ಯೋತಿ ಯೋಜನೆಯನ್ನು ಪುನರ್​ವಿಮರ್ಶೆ ಮಾಡುತ್ತಿರುವುದು ತಿಳಿದೇ ಇದೆ. ಇದಾಗಲೇ ಈ ನಿಟ್ಟಿನಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಗೃಹಜ್ಯೋತಿಯ ಲಾಭವನ್ನು ಮುಂದುವರೆಸುವ ಇಚ್ಛೆ ನಿಮಗಿದ್ದರೆ ಸರ್ಕಾರದ ಈ ನಿಯಮವನ್ನು ನೀವು ಫಾಲೊ ಮಾಡಲೇಬೇಕು. ಇಲ್ಲದಿದ್ದರೆ ಅದು ರದ್ದಾಗುತ್ತದೆ. ನೀವು ಸಂಪೂರ್ಣ ಹಣವನ್ನು ಕಟ್ಟುವುದು ಕಡ್ಡಾಯವಾಗುತ್ತದೆ. ಅಷ್ಟಕ್ಕೂ ಇದಾಗಲೇ, ಗೃಹಜ್ಯೋತಿ ಯೋಜನೆಯಡಿ 1,65,32,652 ಗೃಹ ವಿದ್ಯುತ್ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಆಗಸ್ಟ್‌ 2, 2026ರವರೆಗೆ 91,50,081 ಫಲಾನುಭವಿಗಳ ಮನೆಗಳಿಗೆ ಮೀಟರ್ ರೀಡರ್‌ಗಳು ಭೇಟಿ ನೀಡಿ ಸಮೀಕ್ಷೆ ಪೂರ್ಣಗೊಳಿಸಿದ್ದು, ಇನ್ನೂ 73,82,571 ಫಲಾನುಭವಿಗಳ ಮಾಹಿತಿ ಸಂಗ್ರಹವಾಗಿಲ್ಲ.

ಮಾಹಿತಿ ಸಂಗ್ರಹವಾಗದ ಫಲಾನುಭವಿಗಳ ಪೈಕಿ ಹೆಚ್ಚಿನವರು ಸಿಬ್ಬಂದಿ ಮನೆಗೆ ಬಂದಾಗ ಇರಲಿಲ್ಲ, ಅಥವಾ ಸಿಬ್ಬಂದಿ ಕೇಳಿರುವ ದಾಖಲೆಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ! ಆಧಾರ್​ ಕಾರ್ಡ್​, ಬಾಡಿಗೆ/ಲೀಸ್​ಯವರಾಗಿದ್ದರೆ ಅದರ ಅಗ್ರೀಮೆಂಟ್​, ವೋಟರ್​ ಐಡಿ, ಜಾತಿ ಪ್ರಮಾಣ ಪತ್ರ ಇದ್ದರೆ, ಪ್ಯಾನ್​ ಕಾರ್ಡ್​, ಫೋಟೋ ಸೇರಿದಂತೆ ಕೆಲವು ದಾಖಲೆಗಳನ್ನು ಈ ಸಂದರ್ಭದಲ್ಲಿ ಸಿಬ್ಬಂದಿಗೆ ಕೊಡುವುದು ಕಡ್ಡಾಯವಾಗಿದೆ. ಬೆಸ್ಕಾಂ ಸಿಬ್ಬಂದಿ ಮನೆಗೆ ಬಂದಾಗ ಅವರು ಕೇಳಿರುವ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ನೀಡದಿದ್ದರೆ ಗೃಹಜ್ಯೋತಿ ಲಾಭ ಪಡೆಯಲಾಗುವುದಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ದಾಖಲೆ-ಮಾಹಿತಿ ನೀಡಲು ಹಿಂದೇಟು

ಕೆಲವು ಕಡೆಗಳಲ್ಲಿ ಅದರಲ್ಲಿಯೂ ಕೆಲವು ಅಪಾರ್ಟ್​ಮೆಂಟ್​ಗಳಲ್ಲಿ ಜನರು ಮಾಹಿತಿ ನೀಡಲು, ಬೆಸ್ಕಾಂ ಸಿಬ್ಬಂದಿ ಕೇಳಿರುವ ದಾಖಲೆ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಮಾಡಿದರೆ ಗೃಹಜ್ಯೋತಿಯ ಲಾಭ ಸಿಗುವುದಿಲ್ಲ. ಅದು ಸ್ಥಗಿತಗೊಳ್ಳುತ್ತದೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ದಾಖಲೆ ನೀಡಲೇಬೇಕು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಎನ್. ಹೇಳಿದ್ದಾರೆ. ಸಮೀಕ್ಷೆ ವೇಳೆ ಗ್ರಾಹಕರು ಮನೆಯಲ್ಲಿ ಇಲ್ಲದಿದ್ದರೆ ಅಥವಾ ಮಾಹಿತಿ ನೀಡಲು ನಿರಾಕರಿಸಿದರೆ, ಅವರ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಯೋಜನೆಯ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದಿದ್ದಾರೆ.

ವಿಶೇಷ ಶಿಬಿರಕ್ಕೆ ಚಿಂತನೆ

ಯಾವ ಫಲಾನುಭವಿಗಳೂ ವಂಚನೆಗೆ ಒಳಗಾಗಬಾರದು ಎನ್ನುವ ಕಾರಣದಿಂದ ಸರ್ಕಾರ, ವಿಶೇಷ ಶಿಬಿರಗಳನ್ನು ಆಯೋಜಿಸುವ ಚಿಂತನೆ ಕೂಡ ನಡೆಸಿದೆ. 'ಕೆಲವರು ತಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಆಸಕ್ತಿ ತೋರದಿರುವುದು ನಿಜ. ಅಂಥ ಸಂದರ್ಭಗಳಲ್ಲಿ ಆ್ಯಪ್‌ನಲ್ಲಿ 'ಮಾಹಿತಿ ನೀಡಲು ನಿರಾಕರಿಸಿದ್ದಾರೆ' ಎಂಬ ಆಯ್ಕೆಯಿದೆ ಮತ್ತು ಫಲಾನುಭವಿಯಿಂದ ಸಹಿಯನ್ನೂ ಪಡೆಯಲಾಗುತ್ತದೆ. ಇದುವರೆಗೆ ಯಾವುದೇ ಫಲಾನುಭವಿಯನ್ನು ಪಟ್ಟಿಯಿಂದ ಕೈಬಿಡಲಾಗಿಲ್ಲ. ಯೋಜನೆಯಿಂದ ಯಾರನ್ನಾದರೂ ಹೊರಗಿಡುವ ಕುರಿತು ಅಂತಿಮ ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳಲಿದೆ" ಎಂದು ಶಿವಶಂಕರ ಎನ್ ಹೇಳಿದ್ದಾರೆ.

PREV
Read more Articles on
click me!

Recommended Stories

ಆಟೋದಲ್ಲಿ ಅಳುತ್ತಿದ್ದ ಯುವತಿಗೆ ಸಾಂತ್ವನ ಹೇಳಿದ ಚಾಲಕ: ವೈರಲ್ ಆಯ್ತು 'ಕ್ಯೂಟೆಸ್ಟ್ ಅಣ್ಣ'ನ ಕಥೆ!
ಹುಲಿಯ ಜಾಡು ಹಿಡಿದ ಅರಣ್ಯ ಇಲಾಖೆ: ಗಂಗಾವತಿಯಲ್ಲಿ ನಡೆಯುತ್ತಿದೆ ಮಹಾ ಕಾರ್ಯಾಚರಣೆ!