'ಧಾರವಾಡ ಅಪಘಾತದಲ್ಲಿ 11 ಜನರ ಸಾವಿಗೆ ಅಶೋಕ ಖೇಣಿ ಹೊಣೆ'

By Kannadaprabha NewsFirst Published Jan 17, 2021, 9:42 AM IST
Highlights

ಇಟ​ಗಟ್ಟಿ ಬೈಪಾಸ್‌ ಬಳಿ ನಡೆ​ದಿದ್ದ ಅಪ​ಘಾ​ತ| ಅಶೋಕ ಖೇಣಿ​ ಬಂಧಿ​ಸಲು ಕೇಂದ್ರ ಗೃಹ ಸಚಿ​ವ​ರಿಗೆ ಆಗ್ರಹ| ರಸ್ತೆ ಅಗ​ಲೀ​ಕ​ರಣ ಕುರಿತು ಹೈಕೋ​ರ್ಟ್‌ಗೆ ಪಿಐ​ಎಲ್‌ ಸಲ್ಲಿ​ಸಲು ತೀರ್ಮಾನ| ಸರ್ಕಾ​ರ​ವನ್ನು ಬ್ಲಾಕ್‌ ಮೇಲ್‌ ಮಾಡುತ್ತ ಬಂದಿರುವ ಖೇಣಿ​| 

ಧಾರವಾಡ(ಜ.17): ಹುಬ್ಬ​ಳ್ಳಿ-ಧಾರ​ವಾಡ ಬೈಪಾಸ್‌ ರಸ್ತೆಯ ಇಟಗಟ್ಟಿ ಕ್ರಾಸ್‌ ಬಳಿ ಎರಡು ದಿನ​ಗಳ ಹಿಂದೆ ಸಂಭವಿಸಿದ ಭೀಕರ ಅಪಘಾತಕ್ಕೆ ಅದರ ಗುತ್ತಿಗೆದಾರ ಸಂಸ್ಥೆಯಾಗಿರುವ ನಂದಿ ಇನ್ಪಾಸ್ಟಕ್ಷರ್‌ ಕಂಪನಿ ಮಾಲೀಕ ಅಶೋಕ ಖೇಣಿ ನೇರ ಹೊಣೆ. ತಕ್ಷಣ ಖೇಣಿಯನ್ನು ಬಂಧಿಸಲು ಕೇಂದ್ರ ಗೃಹ ಸಚಿ​ವರು ಆದೇ​ಶಿ​ಸ​ಬೇ​ಕೆಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದ್ದಾರೆ. 

"

ಈ ರಸ್ತೆ​ಯಲ್ಲಿ ಹತ್ತಾರು ವರ್ಷ​ಗ​ಳಿಂದ ನಿರಂತರ ಅಪ​ಘಾ​ತ​ಗಳು ನಡೆ​ದಿದ್ದು ನೂರಾರು ಜನರು ಮೃತ​ಪ​ಟ್ಟಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಸರ್ಕಾ​ರವೇ ರಸ್ತೆ ಅಗ​ಲೀ​ಕ​ರ​ಣಕ್ಕೆ ಮುಂದಾ​ದರು ಹಣದ ಆಸೆ​ಯಿಂದ ಅದಕ್ಕೆ ತಡೆ​ಯೊ​ಡ್ಡು​ತ್ತಲೇ ಬಂದಿ​ದ್ದಾರೆ. ಇದೀಗ ಪ್ರವಾ​ಸಕ್ಕೆ ಹೊರ​ಟಿದ್ದ 11 ಜನರು ಒಂದೇ ಘಟ​ನೆ​ಯಲ್ಲಿ ಮೃತ​ರಾ​ಗಿರುವು​ದಕ್ಕೆ ಯಾರು ಹೊಣೆ ಎಂದು ಶನಿ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಪ್ರಶ್ನಿ​ಸಿದ ಅವರು, ಅಶೋಕ ಖೇಣಿ ಅವರಿಗೆ ಈ ರಸ್ತೆ ನಿರ್ಮಾಣ, ನಿರ್ವಹಣೆ ಹಾಗೂ ಶುಲ್ಕ ಸಂಗ್ರಹ ಆಧಾರದ ಮೇಲೆ ನೀಡಲಾಗಿದೆ. ಹೀಗಾಗಿ ಅದಕ್ಕೆ ಅವರೇ ನೇರ ಹೊಣೆ ಹೊರಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇವಲ ಟೋಲ್‌ ಸಂಗ್ರಹಕ್ಕೆ ಸೀಮಿತವಾಗಿರುವ ಅಶೋಕ್‌ ಖೇಣಿ ಬೈಪಾ​ಸ್‌ನ 26 ಕಿಲೋ ಮೀಟರ್‌ ರಸ್ತೆಯನ್ನು ಅಗಲೀಕರಣ ಮಾಡಲು ಸರ್ಕಾ​ರ​ವನ್ನು ಬ್ಲಾಕ್‌ ಮೇಲ್‌ ಮಾಡುತ್ತ ಬಂದಿ​ದ್ದಾರೆ. ಪ್ರತಿ ತಿಂಗಳು ಕೋಟ್ಯಂತರ ರುಪಾಯಿ ಟೋಲ್‌ ಸಂಗ್ರಹಿಸಿದರು ಬೈಪಾಸ್‌ ಅಗಲೀಕರಣ ಮಾಡಲು ಅಡ್ಡಿ​ಯಾ​ಗು​ತ್ತಿ​ದ್ದಾ​ರೆಂದರು.

ಭೀಕರ ಅಪಘಾತ: ಶವ ಗುರುತಿಗೆ ಸಾಕ್ಷಿ ನುಡಿದ ನಾಯಿಮರಿ ಟ್ಯಾಟೂ!

ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಇರುವ ರಾಷ್ಟ್ರೀಯ ಹೆದ್ದಾರಿ -48ಕ್ಕೆ ಸೇರಿಸಲು ಅಶೋಕ ಖೇಣಿ ಈ ಹಿಂದಿನಿಂದ 800 ಕೋಟಿ ಕೇಳಿದ್ದು ಸರಿಯಲ್ಲ. ಅಲ್ಲದೆ, ರಸ್ತೆ ನಿರ್ವಹಣೆ ಸಹ ಮಾಡುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ. ಹೀಗಾಗಿ ಇದೀಗ ನಡೆದ ಅಪಘಾತ ಪ್ರಕರಣಕ್ಕೆ ನೇರವಾಗಿ ಅಶೋಕ ಖೇಣಿ ಕಾರಣವಾಗಿದ್ದು ಅವರನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಈ ವಿಷ​ಯ​ದಲ್ಲಿ ಖೇಣಿ ಜತೆಗೆ ಮಾತು​ಕತೆ ಆಗು​ತ್ತಿದೆ ಎಂದು ಹಲವು ವರ್ಷ​ಗ​ಳಿಂದಲೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಸಚಿವ ಜಗ​ದೀಶ ಶೆಟ್ಟರ್‌ ಹೇಳು​ತ್ತಲೇ ಇದ್ದಾರೆ. ಬರೀ ಆಶ್ವಾ​ಸ​ನೆ​ಯಿಂದ ಅಲ್ಲಿ ಅಪ​ಘಾ​ತ​ಗ​ಳಾ​ಗು​ವುದು ತಪ್ಪು​ವು​ದಿಲ್ಲ. ಜನರ ಜೀವ ಉಳಿ​ಸಲು ಶೀಘ್ರ ಅಗ​ಲೀ​ಕ​ರಣ ಕಾರ್ಯ ಆರಂಭಿಸಿ. ಇಲ್ಲದೇ ಹೋದಲ್ಲಿ ಈ ಕುರಿತು ಹೈಕೋ​ರ್ಟ್‌​ನಲ್ಲಿ ಸಾರ್ವ​ಜ​ನಿಕ ಹಿತಾ​ಸಕ್ತಿ ಅರ್ಜಿ ಹಾಕು​ವು​ದ​ಲ್ಲದೇ ಸ್ಥಳೀ​ಯ​ರೊಂದಿಗೆ ಉಗ್ರ ರೂಪದ ಹೋರಾಟ ಮಾಡ​ಲಾ​ಗು​ವುದು ಎಂದು ಎಚ್ಚ​ರಿ​ಸಿ​ದರು.
 

click me!