ಕನಕಪುರದಲ್ಲಿ ವೈದ್ಯ ದಂಪತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರಿಬ್ಬರೂ ವೈದ್ಯರಾದ ಕಾರಣ ಇವರ ಬಳಿ 800ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದರು. ಈಗ ಇವರೆಲ್ಲರಿಗೂ ಸೋಂಕಿನ ಭೀತಿ ಆವರಿಸಿದೆ.
ರಾಮನಗರ(ಜೂ.18): ಕನಕಪುರದಲ್ಲಿ ವೈದ್ಯ ದಂಪತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರಿಬ್ಬರೂ ವೈದ್ಯರಾದ ಕಾರಣ ಇವರ ಬಳಿ ಚಿಕಿತ್ಸೆ ಪಡೆದ 800ಕ್ಕೂ ಅಧಿಕ ಮಂದಿಯನ್ನು ಸ್ವಯಂ ಕ್ವಾರಂಟೈನ್ ಗೆ ಒಳಗಾಗಲು ಕನಕಪುರ ತಾಲ್ಲೂಕು ಸೂಚಿಸಿದೆ.
ಸೋಮವಾರ 85 ವರ್ಷದ ವೃದ್ಧರೊಬ್ಬರು ಕೋವಿಡ್-19 ಸೋಂಕು ತಗುಲಿ ಮೃತಪಟ್ಟಿದ್ದರು. ಸಾವಿಗೂ ಮುನ್ನ ಮೃತ ವೃದ್ಧ ಕನಕಪುರದ ಎಂ.ಜಿ ರಸ್ತೆಯಲ್ಲಿರುವ ನವೋದಯ ಆರೋಗ್ಯ ಕೇಂದ್ರ ( ಡಾ.ಚೇತನ್ ಟೇಂಕರ್ ಆಸ್ಪತ್ರೆ) ಚಿಕಿತ್ಸೆ ಪಡೆದಿದ್ದರು. ಇವರನ್ನು ಕ್ವಾರಂಟೈನ್ಗೆ ಒಳಪಡಿಸಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಇದೀಗ ಚಿಕಿತ್ಸೆ ನೀಡಿದ ವೈದ್ಯ ಹಾಗೂ ಅವರ ಪತ್ನಿಗೂ ಸೋಂಕು ತಗುಲಿದೆ.
undefined
ಮಾಸ್ಕ್ ಡೇ: ಸಿಎಂ ಜೊತೆ ಸೆಲೆಬ್ರಿಟಿಗಳ ಸಾಥ್, ಇಲ್ಲಿವೆ ಫೋಟೋಸ್
ಪತ್ನಿಯೂ ಸಹ ವೈದ್ಯರಾಗಿದ್ದು, ಸ್ತ್ರೀರೋಗ ತಜ್ಞರಾಗಿದ್ದರು. ಇವರ ಬಳಿ ಗರ್ಭಿಣಿಯರೇ ಹೆಚ್ಚಾಗಿ ಚಿಕಿತ್ಸೆಗೆ ಆಗಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದ್ದು, ಜೂನ್ 6 ರಿಂದ ಈವರೆಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಎಲ್ಲರೂ ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್ಗೆಗೆ ಒಳಗಾಗಬೇಕು. ಹಾಗೂ ಚಿಕಿತ್ಸೆಗೆ ಒಳಗಾಗಬೇಕು ಎಂದು ಸೂಚಿಸಿದೆ.
ವಿಶ್ವದ ಅತಿದೊಡ್ಡ ಕೊರೋನಾ ಆಸ್ಪತ್ರೆ ದೆಹಲಿಯಲ್ಲಿ ನಿರ್ಮಾಣ!
ವೈದ್ಯ ದಂಪತಿಗಳ ಬಳಿ ಚಿಕಿತ್ಸೆ ಪಡೆದ 800ಕ್ಕೂ ಅಧಿಕ ಮಂದಿಯನ್ನು ಗುರುತಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಈ ಕ್ಷಣಕ್ಕೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 40ಕ್ಕೆ ಏರಿದೆ. ಸಂಜೆ ವೇಳೆ ಮತ್ತಷ್ಟು ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ.