ಡಾಕ್ಟರ್‌ಗೂ ಬಿಡದ ಕೊರೋನಾ ವೈರಸ್‌: ತನ್ನದೇ ಆಸ್ಪತ್ರೆಗೆ ದಾಖಲಾದ ವೈದ್ಯ!

Kannadaprabha News   | Asianet News
Published : Mar 14, 2020, 10:56 AM IST
ಡಾಕ್ಟರ್‌ಗೂ ಬಿಡದ ಕೊರೋನಾ ವೈರಸ್‌: ತನ್ನದೇ ಆಸ್ಪತ್ರೆಗೆ ದಾಖಲಾದ ವೈದ್ಯ!

ಸಾರಾಂಶ

ವೈದ್ಯರಿಗೆ ಕೊರೋನಾ ಸೋಂಕು ಶಂಕೆ| ತೀವ್ರ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವ ವೈದ್ಯ| ಮಹಾರಾಷ್ಟ್ರದ ಕೊಲ್ಲಾಪುರದ ತಮ್ಮದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೈದ್ಯರು| 

ಬೆಳಗಾವಿ(ಮಾ.14): ಮಹಾರಾಷ್ಟ್ರದ ಕೊಲ್ಲಾಪುರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೊರೋನಾ ಸೋಂಕು ತಗಲಿರುವ ಶಂಕೆಯಿದ್ದು, 2 ದಿನಗಳಿಂದ ತೀವ್ರ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದಾರೆ. 

ಈ ಹಿನ್ನೆಲೆಯಲ್ಲಿ ತಮ್ಮದೇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಸ್ವಯಂ ಪ್ರೇರಿತವಾಗಿ ತಮ್ಮ ಸ್ವಾಬ್‌ ಪ್ರಯೋಗಾಲಯಕ್ಕೆ ತಮ್ಮ ರಕ್ತದ ಮಾದರಿಯನ್ನು ತಪಾಸಣೆಗೆ ಕಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೊರೋನಾ ಸೋಂಕಿತ ವೈದ್ಯರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಕೊರೋನಾ ವೈರಸ್‌ನಿಂದ ಇಡೀ ದೇಶವೇ ಭಯದ ವಾತಾರಣದಲ್ಲಿ ಕಾಲ ಕಳೆಯುತ್ತಿದೆ. ದಿನದಿಂದ ದಿನಕ್ಕೆ ಕೊರೋನಾ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೆ ಕೊರೋನಾ ವೈರಸ್‌ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ.
 

PREV
click me!

Recommended Stories

ದರ್ಶನ್ ಇಲ್ದೇ ಇರುವಾಗ ಕೆಲವೊಬ್ರು ಏನೇನೋ ಮಾತಾಡ್ತಾರೆ: ಕಿಚ್ಚ ಸುದೀಪ್‌ಗೆ ಪರೋಕ್ಷವಾಗಿ ಟಕ್ಕರ್ ಕೊಟ್ರಾ ವಿಜಯಲಕ್ಷ್ಮಿ
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ