ಮರಣ ಹೊಂದಿದ ಮಗನ ನೆನಪಲ್ಲಿ 10 ಮಕ್ಕಳನ್ನು ದತ್ತು ಪಡೆದ್ರು..!

By Kannadaprabha NewsFirst Published Feb 26, 2020, 8:15 AM IST
Highlights

ಮಗನನ್ನು ಕಳೆದುಕೊಂಡ ದಾಬಸ್‌ಪೇಟೆ ಸಂಪತಿ ಅಳುತ್ತಾ ಕೂರಲಿಲ್ಲ. ಖಿನ್ನತೆಗೂ ಜಾರಲಿಲ್ಲ. ಸಮಾಜಸೇವೆ ಹಾಗೂ ಗ್ರಾಮದ ಬದಲಾವಣೆಯಲ್ಲಿ ಸದಾ ಮುಂದಾಗಿದ್ದ ತಮ್ಮ ಮಗನ ನೆನಪಿನಲ್ಲಿ 10 ಮಕ್ಕಳನ್ನು ದತ್ತು ಪಡೆದ್ರು. ಇಲ್ಲಿದೆ ಅವರ ಇನ್ಪೈರಿಂಗ್ ಸ್ಟೋರಿ.

ದಾಬಸ್‌ಪೇಟೆ(ಫೆ.26): ಮರಣ ಹೊಂದಿದ್ದ ಮಗನ ನೆನಪಿನಲ್ಲಿ ಆತನ ಪೋಷಕರು 10 ಮಕ್ಕಳನ್ನು ದತ್ತು ಪಡೆದು, ಅವರ ಶಿಕ್ಷಣಕ್ಕೆ ನೆರವಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ನೆಲಮಂಗಲ ತಾಲೂಕಿನ ಟಿ. ಬೇಗೂರು ಗ್ರಾಮದ ನಿವಾಸಿಗಳಾದ ಪಾಪಣ್ಣ ಹಾಗೂ ರಾಧಮ್ಮ ತಮ್ಮ ಮಗ ಮೋಹನ್‌ ನೆನಪಿನಲ್ಲಿ 10 ಮಕ್ಕಳನ್ನು ದತ್ತು ಪಡೆದಿದ್ದಾರೆ. ಸಮಾಜಸೇವೆ ಹಾಗೂ ಗ್ರಾಮದ ಬದಲಾವಣೆಯಲ್ಲಿ ಸದಾ ಮುಂದಾಗಿದ್ದ ಮೋಹನ್‌ ಅವರು ಕಳೆದ ವರ್ಷ ನಡೆದ ಆದಿಚುಂಚನಗಿರಿ ರಥೋತ್ಸವದ ಕಾಲ್ತುಳಿತದಲ್ಲಿ ಸಿಕ್ಕಿ ಮರಣ ಹೊಂದಿದ್ದರು.

ಅಂದು ಗಂಡನಿಂದಲೇ ರೇಪ್ ಆದವಳೀಗ ಯಶಸ್ವಿ ಫಿಟ್‌ನೆಸ್ ಟ್ರೈನರ್

ಹೀಗಾಗಿ ಮೋಹನ್‌ ಹೆತ್ತವರು ಸಾಕಷ್ಟುನೊಂದಿದ್ದರೂ ಸಮಾಜಸೇವೆ ಮೂಲಕ ಮಗನನ್ನು ಕಾಣಲು ಮುಂದಾಗಿದ್ದಾರೆ. ಸಮಾಜ ಸೇವೆಯನ್ನು ಸದಾ ತೊಡಗಿರುತ್ತಿದ್ದ ಮೋಹನ್‌ ಅಗಲಿಕೆ ಬಳಿಕ ಅವರ ಅಣ್ಣ ಹರೀಶ್‌ ಆರ್‌.ಪಿ ಅವರು ಮೋಹನ್‌ ಆರ್‌ಪಿ ಫೌಂಡೇಶನ್‌ ಎಂಬ ಸಂಘವನ್ನು ಸ್ಥಾಪಿಸಿ, ಅದರ ಮೂಲಕ ಸಮಾಜ ಸೇವೆ ಮಾಡಲು ಆರಂಭಿಸಿದ್ದಾರೆ. ಇದಕ್ಕೆ ಮೋಹನ್‌ ತಂದೆ, ತಾಯಿ ಕೂಡ ಸಾಥ್‌ ಕೊಡುತ್ತಿದ್ದಾರೆ.

ಪ್ರತೀ ಸಲ ಬಾಂಬ್ ಸ್ಪೋಟಿಸಿದಾಗಲೂ ಈ ಮಗು ನಗುತ್ತಿತ್ತು!

ಮಾಜದಲ್ಲಿ ಸ್ವಾರ್ಥವಿಲ್ಲದೆ ಸೇವೆ ಮಾಡಿದವರು ಮರಣ ಹೊಂದಿದ ನಂತರವೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಇದಕ್ಕೆ ಟಿ.ಬೇಗೂರಿನ ಮೋಹನ್‌ ಕೂಡ ಉದಾಹರಣೆಯಾಗಿದ್ದಾರೆ. ಸಣ್ಣ ವಯಸ್ಸಿನಲ್ಲಿ ಗ್ರಾಮ ಹಾಗೂ ಸಮಾಜದ ಅಭಿವೃದ್ಧಿಯ ಅಪಾರ ಕನಸುಗಳ ಜೊತೆ ಸಕಾರ ಮಾಡಿದ ವ್ಯಕ್ತಿ ನಮ್ಮ ಜೊತೆ ಇಲ್ಲದಿರುವುದು ದುಃಖವಾಗಿದೆ. ಆದರೆ ಅವರ ಹೆಸರಿನಲ್ಲಿ ಅನೇಕ ಸ್ನೇಹಿತರು, ಕುಟುಂಬಸ್ಥರು ಸಮಾಜಮುಖಿ ಕೆಲಸ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರೀತಿ ಪಾತ್ರರು ಸತ್ತಾಗ, ಬದುಕಲ್ಲಿ ಮುಗುಳ್ನಗೆಯ ಮೊಳಕೆ ಒಡೆದಾಗ..

ಟಿ. ಬೇಗೂರಿನ ಮೂರು ಶಾಲೆಯ ವಿದ್ಯಾರ್ಥಿಗಳಾದ ಕವಿತ, ವೇದ, ಸಿಂಚನ, ಪೂಜಾ, ಯಮುನಾ, ಮಿಥುನ್‌, ಗಗನ್‌, ಮನೋಜ್‌ ಸೇರಿದಂತೆ 10 ಬಡ ವಿದ್ಯಾರ್ಥಿಗಳನ್ನು ಮೋಹನ್‌ ಪೋಷಕರು ದತ್ತು ಪಡೆದಿದ್ದಾರೆ. ಈ ಮಕ್ಕಳಿಗೆ 1 ರಿಂದ 10ನೇ ತರಗತಿಯವರೆಗೂ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಭರಿಸುವ ಹೊಣೆಯನ್ನು ಮೋಹನ್‌ ಆರ್‌.ಪಿ ಫೌಂಡೇಶನ್‌ ವಹಿಸಿಕೊಂಡು ಮಾದರಿಯಾಗಿದೆ. ಇದಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಮೋಹನ್‌ ಸ್ನೇಹಿತರು ಅವರ ಅಣ್ಣ ಹರೀಶ್‌ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

click me!