ತಮ್ಮ ಹುಟ್ಟುಹಬ್ಬ ಆಚರಣೆ ಮಾಡದಂತೆ ಶಾಸಕ ಟಿ.ಬಿ.ಜಯಚಂದ್ರ ಮನವಿ

By Girish Goudar  |  First Published Jul 29, 2023, 10:27 AM IST

ಬೃಹತ್‌ ಉದ್ಯೋಗ ಮೇಳ ಮಾಡಿ ನಿರುದ್ಯೋಗಿಗಳಿಗೆ ನೆರವಾಗೋಣ. ನಿಮ್ಮ ಆಶೀರ್ವಾದಿಂದ ನಾನು ಶಾಸಕನಾಗಿದ್ದೇನೆ ಮತ್ತು ದೆಹಲಿಯ ವಿಶೇಷ ಪ್ರತಿನಿಧಿಯಾಗಿದ್ದೇನೆ. ಸಂಪುಟ ದರ್ಜೆ ಸ್ಥಾನಮಾನ ಸಿಕ್ಕಿದೆ ಇಷ್ಟೇ ಸಾಕು ನನಗೆ ಅಂತ ಹೇಳಿದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ


ತುಮಕೂರು(ಜು.29):  ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ ಅವರು ತಮ್ಮ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಣೆ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ನಾನು ದೇವರ ಸನ್ನಿಧಿಗೆ ತೆರಳುತಿದ್ದೇನೆ ನಿಮಗೆ ನಾನು ಸಿಗೋದಿಲ್ಲ. ಹೀಗಾಗಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯಾವುದೇ ರೀತಿ ಆಚರಣೆ‌ ಮಾಡಬೇಡಿ ಅಂತ ಮನವಿ ಮಾಡಿದ್ದಾರೆ. 

ಆ. 7 ರಂದು ಬೃಹತ್‌ ಉದ್ಯೋಗ ಮೇಳ ಮಾಡಿ ನಿರುದ್ಯೋಗಿಗಳಿಗೆ ನೆರವಾಗೋಣ. ನಿಮ್ಮ ಆಶೀರ್ವಾದಿಂದ ನಾನು ಶಾಸಕನಾಗಿದ್ದೇನೆ ಮತ್ತು ದೆಹಲಿಯ ವಿಶೇಷ ಪ್ರತಿನಿಧಿಯಾಗಿದ್ದೇನೆ. ಸಂಪುಟ ದರ್ಜೆ ಸ್ಥಾನಮಾನ ಸಿಕ್ಕಿದೆ ಇಷ್ಟೇ ಸಾಕು ನನಗೆ ಅಂತ ಹೇಳಿದ್ದಾರೆ. 

Tap to resize

Latest Videos

ನೈಸ್ ಸಂಸ್ಥೆ ಅಕ್ರಮ: ಕಾಂಗ್ರೆಸ್‌ ಶಾಸಕ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ

ನನ್ನ ಹುಟ್ಟುಹಬ್ಬಕ್ಕೆ ಯಾವುದೇ ಹಾರ, ತುರಾಯಿ, ಬ್ಯಾನರ್, ಪ್ಲೆಕ್ಸ್‌ನ ವಿಜೃಂಭಣೆ ಬೇಡ. ನಿಮ್ಮ ಆಶೀರ್ವಾದ ಸಾಕು, ಸಿರಾ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡೋಣ ಅಂತ ವಿಡಿಯೋ ಮೂಲಕ ಟಿ.ಬಿ. ಜಯಚಂದ್ರ ಅವರು ಮನವಿ ಮಾಡಿಕೊಂಡಿದ್ದಾರೆ. 

click me!