ಶೋಭಾ ಹೇಳಿದ್ದಕ್ಕೆಲ್ಲಾ ನಾನು ಉತ್ತರ ಕೊಡಬೇಕಾ : ಪರಂ

By Kannadaprabha News  |  First Published Jul 16, 2023, 5:31 AM IST

ಕಾಂಗ್ರೆಸ್‌ ಅವಧಿಯಲ್ಲಿ ಕೊಲೆ ಹೆಚ್ಚಾಗಿವೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಶೋಭಾ ಅವರ ಹೇಳಿದ್ದಕ್ಕೆಲ್ಲಾ ನಾನು ಉತ್ತರ ಕೊಡಬೇಕಾ ಎಂದು ಪ್ರಶ್ನಿಸಿದರು.


  ತುಮಕೂರು :  ಕಾಂಗ್ರೆಸ್‌ ಅವಧಿಯಲ್ಲಿ ಕೊಲೆ ಹೆಚ್ಚಾಗಿವೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಶೋಭಾ ಅವರ ಹೇಳಿದ್ದಕ್ಕೆಲ್ಲಾ ನಾನು ಉತ್ತರ ಕೊಡಬೇಕಾ ಎಂದು ಪ್ರಶ್ನಿಸಿದರು.

ನಾವು 136 ಸೀಟ್‌ ಗೆದ್ದ ಜೋಶ್‌ನಲ್ಲಿದ್ದೇವೆ. ಅದೇ ಅವರನ್ನು ಗೆಲ್ಲಿಸಲಿಲ್ಲ, ಆದ್ದರಿಂದ ಅವರಿಗೆ ಹೊಟ್ಟೆಉರಿ ಇರಬಹುದು. ಅದಕ್ಕೆ ಆ ರೀತಿಯಲ್ಲಿ ಮಾತನಾಡುತ್ತಾರೆ. ಅವರ ಸರ್ಕಾರ ಇದ್ದಾಗ ಎಷ್ಟುಕೊಲೆಯಾಗಿದೆ, ಎಷ್ಟುರೇಪ್‌ ಆಗಿದೆ, ಕ್ರಿಮಿನಲ… ಕೇಸ್‌ಗಳು ಆಗಿವೆ ಎಂಬ ಲೆಕ್ಕ ಕೊಡುತ್ತೇನೆ ಎಂದ ಅವರು ನಮ್ಮ ಸರ್ಕಾರದಲ್ಲಿ ಯಾರೇ ಕೊಲೆ ಮಾಡಲಿ ಮತ್ತೊಂದು ಮಾಡಲಿ. ಕೂಡಲೇ ಹಿಡಿದು ಶಿಕ್ಷೆ ಮಾಡುತ್ತಿದ್ದೇವೆ ಎಂದರು. ಜೈನ ಮುನಿಗಳನ್ನ ಕೊಂದವರನ್ನು 6 ಗಂಟೆಯಲ್ಲಿ ಹಿಡಿದು ಕೋರ್ಚ್‌ಗೆ ಒಪ್ಪಿಸಿದ್ದಾಗಿ ತಿಳಿಸಿದ ಅವರು ಅದರ ಬಗ್ಗೆ ತನಿಖೆ ನಡಿತಿದೆ. ಬೆಂಗಳೂರಿನಲ್ಲಿ ಜೋಡಿ ಕೊಲೆ ಆಯ್ತು. ಅವರನ್ನು 7 ಗಂಟೆಯಲ್ಲಿ ಕುಣಿಗಲ… ಬಳಿ ಬಂಧಿಸಿದ್ದಾಗಿ ತಿಳಿಸಿದರು. ಸುಮ್ಮನೆ ಲಾ ಆಂಡ್‌ ಆರ್ಡರ್‌ ಹಾಳಾಗಿ ಹೋಗಿದೆ ಅಂತ ಹೇಳಿಕೆ ಕೊಡುತ್ತಿರುವ ಅವರ ಕಾಲದಲ್ಲಿ ಏನಾಗುತ್ತಿತ್ತು ಅಂತ ಎಲ್ಲಾ ಬಿಡಿಸಿ ಹೇಳುವುದಾಗಿ ತಿಳಿಸಿದರು.

Tap to resize

Latest Videos

ಗೊಬ್ಬರ ಹಂಚಿಕೆಯಲ್ಲಿ ತಾರತಮ್ಯ

 ಚಿಕ್ಕಮಗಳೂರು (ಜು.16) :  ರಸಗೊಬ್ಬರ ವಿತರಣೆಯಲ್ಲಿ ತಾರತಮ್ಯ ಮಾಡಿದರೆ ಸರಿ ಇರೋದಿಲ್ಲ. ಇವೆಲ್ಲಾ ನಡೆಯೋದಿಲ್ಲ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆ, ಬಿತ್ತನೆ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಂದ ಮಾಹಿತಿ ಪಡೆದ ಸಚಿವರು, ರಸಗೊಬ್ಬರವನ್ನು ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳು ರೈತರಿಂದ ಬರುತ್ತಿವೆ ಎಂದರು.

ಕಾಂಗ್ರೆಸ್‌ ಕೃಪಾಕಟಾಕ್ಷದಲ್ಲಿ ರಾಜ್ಯಾದ್ಯಂತ ಕೊಲೆಗಳು ನಿರ್ಭೀತ: ಸಚಿವೆ ಶೋಭಾ ಕರಂದ್ಲಾಜೆ ಆರೋಪ

ಕೆಲವು ರೈತರಿಗೆ ಅಗತ್ಯಕ್ಕಿಂತ ಹೆಚ್ಚು. ಇನ್ನು ಕೆಲವು ರೈತರಿಗೆ ಅಗತ್ಯವಿರುವಷ್ಟುರಸಗೊಬ್ಬರ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ತಾರತಮ್ಯ ಮಾಡಿದರೆ ಸರಿ ಇರೋದಿಲ್ಲ, ಈ ಸಮಸ್ಯೆ ಕೂಡಲೇ ಬಗೆಹರಿಸಬೇಕು ಎಂದು ಸೂಚನೆ ನೀಡಿದರು. ಈ ಬಾರಿ ಮಳೆ, ಬೆಳೆ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್‌, ಕಳೆದ ವರ್ಷ ಈ ಅವಧಿ ವರೆಗೆ ಸರಾಸರಿ 727 ಮಿಮೀ ಮಳೆ ಬಂದಿತ್ತು. ಆದರೆ, ಈ ಬಾರಿ 377 ಮಿಮೀ ಮಳೆ ಬಂದಿದೆ. ಅಂದರೆ, ಶೇ. 48 ರಷ್ಟುಮಳೆ ಕೊರತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 40 ರಷ್ಟುಬಿತ್ತನೆಯಾಗಿತ್ತು. ಈ ವರ್ಷ ಶೇ. 20 ರಷ್ಟುಮಾತ್ರ ಬಿತ್ತನೆಯಾಗಿದೆ ಎಂದರು.

ಸಚಿವೆ ಶೋಭಾ ಕರಂದ್ಲಾಜೆ(Minister shobha karandlaje) ಮಾತನಾಡಿ, ಹೆಣ್ಣು ಮಕ್ಕಳ ವಸತಿ ಶಾಲೆಗಳಲ್ಲಿ ಕಾಂಪೌಂಡ್‌ ನಿರ್ಮಾಣ, ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.ಶಿ ಕ್ಷಣ ಇಲಾಖೆ ವಿಷಯ ಚರ್ಚೆಗೆ ಬಂದಾಗ, ಜಿಲ್ಲೆಯಲ್ಲಿ ಕಳೆದ 2 ವರ್ಷಗಳ ಹಿಂದೆ ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಕಾರ್ಯನಡೆಸಿದಾಗ 195 ಮಕ್ಕಳ ಪತ್ತೆ ಹಚ್ಚಲಾಗಿದ್ದು, ಈ ಪೈಕಿ ಬೀರೂರು ವಲಯದಲ್ಲಿ 16, ಚಿಕ್ಕಮಗಳೂರು 84, ಕೊಪ್ಪ 32, ಮೂಡಿಗೆರೆ 28, ಎನ್‌ಆರ್‌ ಪುರ 9, ಶೃಂಗೇರಿ 2 ಹಾಗೂ ತರೀಕೆರೆ ತಾಲೂಕಿನಲ್ಲಿ 24 ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗೆ ಉಳಿದಿ ದ್ದಾರೆ. ಇದಕ್ಕೆ ಕಾರಣ, ಕಲಿಕೆಯಲ್ಲಿ ಹಿಂದುಳಿದಿರುವುದು, ತಂದೆ ತಾಯಿಯೊಂದಿಗೆ ಮಕ್ಕಳು ದುಡಿಯಲು ಹೋಗುತ್ತಿರುವುದು ಎಂದರು.

click me!