‘ಪ್ರತಿಜ್ಞೆ’ಗೂ ಮುನ್ನ ಮನೆಯಲ್ಲಿ ಡಿಕೆಶಿ ಪೂಜೆ, ಕೆಪಿಸಿಸಿ ಕಚೇರಿಯಲ್ಲಿ ಅರಳಿ ಮರಕ್ಕೂ ಪೂಜೆ

By Kannadaprabha NewsFirst Published Jul 3, 2020, 9:48 AM IST
Highlights

ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮುನ್ನ ಗುರುವಾರ ಬೆಳಗ್ಗೆ ನಗರದ ಸದಾಶಿವನಗರ ನಿವಾಸದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ಬೆಂಗಳೂರು(ಜು.03): ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮುನ್ನ ಗುರುವಾರ ಬೆಳಗ್ಗೆ ನಗರದ ಸದಾಶಿವನಗರ ನಿವಾಸದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಪುರೋಹಿತರು ಸೇರಿದಂತೆ ಆರು ಮಂದಿ ಪುರೋಹಿತರ ತಂಡ ಈ ವಿಶೇಷ ಪೂಜೆ ನೆರವೇರಿಸಿತು. ಪೂಜೆಯಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಪತ್ನಿ ಉಷಾ ಅವರು ಪಾಲ್ಗೊಂಡಿದ್ದರು. ಈ ವೇಳೆ ಪುರೋಹಿತರು ಗಾಳಿ ಆಂಜನೇಯ ಸ್ವಾಮಿ ದೇವಾಲಯದಿಂದ ತಂದಿದ್ದ ವಿಶೇಷ ಪ್ರಸಾದ ಹಾಗೂ ಅಕ್ಷತೆಯನ್ನು ಶಿವಕುಮಾರ್‌ ಹಾಗೂ ಅವರ ಕುಟುಂಬದ ಸದಸ್ಯರಿಗೆ ನೀಡಿದರು.

ಡಿಕೆಶಿ ಕಾರ್ಯಕ್ರಮದಲ್ಲಿ ಸೋಂಕು ತಡೆಗೆ ‘ಯುವಿಸಿ ತಂತ್ರಜ್ಞಾನ’

ನಂತರ ಮನೆಯಿಂದ ಕ್ವೀನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿಗೆ ಬಂದ ಶಿವಕುಮಾರ್‌ ಅವರು, ಕಚೇರಿಯ ಆವರಣದಲ್ಲಿರುವ ಅರಳಿ ಮರಕ್ಕೆ ಪೂಜೆ ಸಲ್ಲಿಸಿದರು. ನಂತರ ಕಾರ್ಯಕ್ರಮ ನಡೆಯುವ ಸಭಾಂಗಣಕ್ಕೆ ತೆರಳುವಾಗ ದೇವಮೂಲೆ ಎಂಬ ಕಾರಣಕ್ಕೆ ಕಚೇರಿಯ ಬಲಭಾಗದಿಂದ ತೆರಳಿದರು. ಉಳಿದೆಲ್ಲ ನಾಯಕರು ಎಡಭಾಗದಿಂದ ಸಭಾಂಗಣ ಪ್ರವೇಶಿಸಿದರು.

ತಾಯಿ, ಪತ್ನಿ ಹಾಜರು:

ಪದಗ್ರಹಣ ಸ್ವೀಕಾರ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್‌ ಅವರ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರು ಆಗಮಿಸಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್‌ ಅವರು ಬೀಳಿ ಟೋಪಿ ಹಾಗೂ ಕಾಂಗ್ರೆಸ್‌ ಚಿಹ್ನೆಯುಳ್ಳ ಮಾಸ್ಕ್‌ ಧರಿಸಿ ಗಮನ ಸೆಳೆದರು.

ಸಾಧು ಕೋಕಿಲ ಗಾಯನ:

ಸ್ಯಾಂಡಲ್‌ವುಡ್‌ನ ಸಂಗೀತ ನಿರ್ದೇಶಕ ಸಾಧುಕೋಕಿಲ ಅವರು ಪ್ರದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದರು. ಉದ್ಘಾಟನೆ ವೇಳೆ ‘ಹಚ್ಚೇವು ಕನ್ನಡದ ದೀಪ ಗೀತೆಯ ಸಾಹಿತ್ಯ ಬದಲಿಸಿ ‘ಹಚ್ಚೇವು ಕಾಂಗ್ರೆಸ್‌ ದೀಪ...’ ಎಂದು ಹಾಡಿದರು.

"

click me!