'ನನ್ನ ಮಗನನ್ನು ಕಂಡ್ರೆ ತುಂಬಾ ಪ್ರೀತಿ : ಅದಕ್ಕೆ ಬರ್ತಾರೆ'

Kannadaprabha News   | Asianet News
Published : Oct 06, 2020, 09:08 AM IST
'ನನ್ನ ಮಗನನ್ನು ಕಂಡ್ರೆ ತುಂಬಾ ಪ್ರೀತಿ : ಅದಕ್ಕೆ ಬರ್ತಾರೆ'

ಸಾರಾಂಶ

ಅವರಿಗೆ ನನ್ನ ಮಗನನ್ನು ಕಂಡರೆ ಅತ್ಯಂತ ಅಚ್ಚು ಮೆಚ್ಚು ಆದ್ದರಿಂದ ಆಗಾಗ ನಮ್ಮ ಮನೆಗೆ ಬಂದು ಹೋಗ್ತಾರೆ ಎಂದು ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಹೇಳಿದ್ದಾರೆ

ರಾಮ​ನ​ಗ​ರ (ಅ.06): ನನ್ನ ಮಗನನ್ನು ಕಂಡ್ರೆ ಇಡಿ, ಪಿಡಿ, ಸಿಡಿ, ಸಿಬಿಐನವರಿಗೆ ತುಂಬಾ ಇಷ್ಟ. ಅದ್ದ​ರಿಂದಲೇ ಆಗಾಗ ಬಂದು ಸುಮ್ಮನೆ ಹೊಟ್ಟೆಉರಿ​ಸು​ತ್ತಾರೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರ ತಾಯಿ ಗೌರಮ್ಮ ಸಿಬಿಐ ದಾಳಿ ವಿರುದ್ಧ ಕಿಡಿ​ಕಾ​ರಿ​ದರು.

ಕನ​ಕ​ಪುರ ತಾಲೂ​ಕಿನ ಕೋಡಿ​ಹಳ್ಳಿ ನಿವಾ​ಸ​ದಲ್ಲಿ ಸಿಬಿಐ ದಾಳಿಯ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ನನ್ನ ಮಗ​ನನ್ನು ಅವ​ರೆ​ಲ್ಲರೂ ತುಂಬಾ ಇಷ್ಟಪಡುತ್ತಾರೆ. ಅವ​ರಿಗೂ ಬೇರೆ ಕೆಲಸ ಇಲ್ಲದೆ ನಮ್ಮನೆ ಬಾಗಿ​ಲಿಗೆ ತಿರು​ಗು​ತ್ತಲೇ ಇರ್ತಾರೆ ಎಂದರು.

ಸಿಬಿಐ ಪರಿಶೀಲನೆ ಅಂತ್ಯ: ಸಂಸದ ಡಿಕೆ ಸುರೇಶ್ ಫಸ್ಟ್ ರಿಯಾಕ್ಷನ್...! .

ನನ್ನ ಮಗ​ನನ್ನು ಅವರ ಮನೆಗೆ ಕರೆ​ದು​ಕೊಂಡು ಹೋಗಿ ಕೂರಿ​ಸಿ​ಕೊ​ಳ್ಳಲಿ. ನನನ್ನು ಕರ​ದ್ರೆ ನಾನೂ ಹೋ​ಗ್ತೀನಿ. ಆದರೆ, ಸಮಯ ಸಮಯಕ್ಕೆ ಊಟ ಹಾಕಿದರೆ ಸಾಕು. ನನ್ನ ಮಗನ ಮೇಲೆ ರಾಜಕೀಯ ದ್ವೇಷದ ಬಗ್ಗೆ ನನಗೆ ಗೊತ್ತಿಲ್ಲ. 

ಆದರೆ, ದಾಳಿ ನಡೆಸುವಾಗ ಏನು ಸಿಗುತ್ತೊ ಅದನ್ನು ತೆಗೆದುಕೊಂಡು ಹೋಗಲಿ. ಅಲ್ಲಿರುವ ಇಟ್ಟಿಗೆಗಳನ್ನು ಕೂಡ ತೆಗೆದುಕೊಂಡು ಹೋಗಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ