ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರಿಗೆ ಸೇಬಿನ ಹಾರ ಹಾಕಿಸಿಕೊಳ್ಳೋದಷ್ಟೇ ಕೆಲಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಶನಿವಾರ ವ್ಯಂಗ್ಯಮಾಡಿದ್ದಾರೆ. ಈಗಿನ ಚುನಾವಣೆಯಲ್ಲಿ ಅವರ ಕೆಲಸ ಏನಿದ್ದರೂ ಹೂವಿನ ಮತ್ತು ಸೇಬಿನ ಹಾರವನ್ನು ಹಾಕಿಸಿಕೊಂಡು ಮುಂದಿನ ಊರಿಗೆ ಹೋಗುವುದು ಅಷ್ಟೆ ಎಂದು ಟೀಕಿಸಿದ್ದಾರೆ.
ಮಂಡ್ಯ(ಡಿ.01): ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರಿಗೆ ಸೇಬಿನ ಹಾರ ಹಾಕಿಸಿಕೊಳ್ಳೋದಷ್ಟೇ ಕೆಲಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಶನಿವಾರ ವ್ಯಂಗ್ಯಮಾಡಿದ್ದಾರೆ. ಈಗಿನ ಚುನಾವಣೆಯಲ್ಲಿ ಅವರ ಕೆಲಸ ಏನಿದ್ದರೂ ಹೂವಿನ ಮತ್ತು ಸೇಬಿನ ಹಾರವನ್ನು ಹಾಕಿಸಿಕೊಂಡು ಮುಂದಿನ ಊರಿಗೆ ಹೋಗುವುದು ಅಷ್ಟೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಈಗಾಗಲೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈಗ ಅವರ ಎಂಟ್ರಿಯಿಂದ ಏನೂ ಉಪಯೋಗವಿಲ್ಲ. ಅವರು ಎಲ್ಲಿ ಹೋದ್ರೂ ಒಂದು ಸೇಬಿನಹಾರ ಹಾಕಿಸಿಕೊಳ್ಳೋದು ಮಾಮೂಲಿ ಅಷ್ಟೆ. ಈಗಿನ ಚುನಾವಣೆಯಲ್ಲಿ ಅವರ ಕೆಲಸ ಏನಿದ್ದರೂ ಹೂವಿನ ಮತ್ತು ಸೇಬಿನ ಹಾರವನ್ನು ಹಾಕಿಸಿಕೊಂಡು ಮುಂದಿನ ಊರಿಗೆ ಹೋಗುವುದು ಅಷ್ಟೆಎಂದು ಟೀಕಿಸಿದ್ದಾರೆ.
ಮಂಡ್ಯ: ಜೆಡಿಎಸ್, ಬಿಜೆಪಿ ಕಾರ‍್ಯಕರ್ತರ ಹೊಡೆದಾಟ
ಜೆಡಿಎಸ್ ನಾಯಕರು ಕಣ್ಣೀರು ಹಾಕೋದು ಹಳೇ ಚಾಳಿ. ಆ ಬಗ್ಗೆ ಈಗಾಗಲೇ ಸಿ.ಟಿ.ರವಿ, ಡಿವಿಎಸ್ ಮಾತಾಡಿದ್ದಾರೆ. ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳು ಮುಚ್ಚಲು ಜೆಡಿಎಸ್ ಕಾರಣ. ರಾಜ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಜೆಡಿಎಸ್ ಮೈತ್ರಿ ಸರ್ಕಾರದ ಕಾಲದಲ್ಲಿ ಅದೂ ಮಂಡ್ಯ ಜಿಲ್ಲೆಯಲ್ಲಿ ಎಂಬುದು ವಾಸ್ತವ ಸತ್ಯ. ನನಗೆ ಉಪಮುಖ್ಯಮಂತ್ರಿ ಕೊಡದ ವಿಚಾರದಲ್ಲಿ ಬೇಸರವಿಲ್ಲ. ನನಗೆ ಈಗ ಕೊಟ್ಟಿರುವ ಕಂದಾಯ ಮತ್ತು ಪೌರಾಡಳಿತ ಖಾತೆಗಳು ನನ್ನದೆ ಆಯ್ಕೆ. ನನಗೆ ತೃಪ್ತಿ ಇದೆ ಎಂದಿದ್ದಾರೆ.
ಈ ಬೈಎಲೆಕ್ಷನ್ ನಂತ್ರ ಇನ್ನೊಂದು ಎಕೆಕ್ಷನ್: ರೇವಣ್ಣ ಭವಿಷ್ಯ..!
ಸುದ್ಧಿಗೋಷ್ಠಿಯಲ್ಲಿ ಶಾಸಕರಾದ ಪ್ರೀತಂಗೌಡ, ತೇಜಸ್ವಿನಿಗೌಡ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಪಟೀಲ…, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ತಾಲೂಕು ಅಧ್ಯಕ್ಷ ಡಾ.ಬಿ.ಸಿ.ಮಂಜು, ಮುಖಂಡರಾದ ಡಾ.ಸಿದ್ದರಾಮಯ್ಯ ಇದ್ದರು.