ಶೃಂಗೇರಿ: ಸಂಕಷ್ಟ ನಿವಾರಣೆಗೆ ಗೋದಾನ ಮಾಡಿದ ಡಿಕೆಶಿ

By Web Desk  |  First Published Nov 20, 2019, 11:34 AM IST

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರು ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಗೋದಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗೋದಾನ ಮಾಡಿದರೆ ಸಂಕಷ್ಟ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದ್ದು, ಇದರಂತೆ ಡಿಕೆಶಿ ಹರಕೆ ತೀರಿಸಿದ್ದಾರೆ.


ಚಿಕ್ಕಮಗಳೂರು(ನ.20): ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರು ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಗೋದಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗೋದಾನ ಮಾಡಿದರೆ ಸಂಕಷ್ಟ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದ್ದು, ಇದರಂತೆ ಡಿಕೆಶಿ ಹರಕೆ ತೀರಿಸಿದ್ದಾರೆ.

ಇಡಿಯಿಂದ ಬಲೆಯಿಂದ ‌ಹೊರಬರಲು ಹರಕೆ‌ ಡಿಕೆಶಿ ತೀರಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಯಲ್ಲಿರುವ ಶಾರದಾಂಬೆ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಎದುರಾಗಿರುವ ಸಂಕಷ್ಟದಿಂದ ಮುಕ್ತವಾಗಲೆಂದೆ ಶಾರದೆಯ ಮೊರೆ ಹೋಗಿದ್ದಾರೆ. ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಸಂಕಷ್ಟ ನಿವಾರಿಸುವಂತೆ ಗೋದಾನ ಮಾಡಿದ್ದಾರೆ.

Tap to resize

Latest Videos

ತಮ್ಮ ಮಕ್ಕಳೊಂದಿಗೆ ರಸ್ತೆ ಗುಂಡಿ ಮುಚ್ಚಿದ ಶಿಕ್ಷಕ ದಂಪತಿ

ಡಿಕೆಶಿ ಕುಟುಂಬ ಕಪ್ಪುಬಣ್ಣದ ಗೋವನ್ನು ದಾನ ಮಾಡಿದ್ದು, ಅದಿಶಕ್ತಿ ಶಾರದೆಯ ಸನ್ನಿಧಿಯಲ್ಲಿ ಗೋದಾನ ಮಾಡಲಾಗಿದೆ. ಡಿ. ಕೆ. ಶಿವಕುಮಾರ್, ಅವರ ಪತ್ನಿ ಉಷಾ ಕಪ್ಪು ಬಣ್ಣದ ಗೋವಿಗೆ ಪೂಜೆ ಸಲ್ಲಿಸಿದ್ದಾರೆ.

ನಂತರ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿ ಜಗದ್ಗುರುಗಳ ಅರ್ಶಿವಾದ ಪಡೆದಿದ್ದಾರೆ. ಗೋದಾನ ಮಾಡಿದರೆ ಕಷ್ಟ ಪರಿಹಾರ ಅಗುತ್ತೆ ಅನ್ನೋ ನಂಬಿಕೆ ಇದ್ದು, ಜಾಮೀನು ಸಿಕ್ಕಿದ ಮೇಲೆ ಮೊದಲ ಬಾರಿ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಈಡಿ ವಿಚಾರಣೆಗೂ ಮುನ್ನ ಡಿಕೆಶಿ ಶೃಂಗೇರಿಗೆ ಭೇಟಿ ನೀಡಿದ್ದರು.

'ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಗೊತ್ತು ಗುರಿ ಇಲ್ಲ'..!

click me!