ಡಿಕೆಶಿಗೆ ಅಂದೇ ಆಶೀರ್ವಾದ ಮಾಡಿದ್ದರು ದೊಡ್ಡಗೌಡರು

By Kannadaprabha News  |  First Published Mar 12, 2020, 12:19 PM IST

ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೆ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ ಅವರಿಗೆ 35 ವರ್ಷಗಳ ಹಿಂದೆಯೇ ದೇವೇಗೌಡರಿಂದ ಆಶೀರ್ವಾದ ಪಡೆದುಕೊಂಡಿದ್ದರು. 


ಕನಕಪುರ [ಮಾ.12]:  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಎನ್ ಎಸ್ ಯುಐ ಸದಸ್ಯರಾಗಿ ಆರಂಭವಾದ ಕಾಂಗ್ರೆಸ್ ಪಕ್ಷದ ಬಗೆಗಿನ ನಿಷ್ಠೆಯೇ ಡಿ.ಕೆ.ಶಿವಕುಮಾರ್ ಅವರನ್ನು ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ಮಾಡಿದೆ

1985 ರ ಸಾತನೂರು ವಿಧಾನಸಭಾಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ನಾಯಕ ಎಚ್.ಡಿ.ದೇವೇಗೌಡ ಅವರ ವಿರುದ್ಧ ಸ್ಪರ್ಧಿಸಿ, ಪ್ರಬಲ ಸ್ಪರ್ಧೆಯೊಡ್ಡಿದ ಡಿ.
ಕೆ.ಶಿವಕುಮಾರ್ ಕಡಿಮೆ ಅಂತರದಲ್ಲಿ ಸೋತರು. 

Tap to resize

Latest Videos

ಟ್ರಬಲ್ ಶೂಟರ್ ಆಗಿದ್ದ ಡಿಕೆಶಿ ನಿದ್ದೆಗೆಡಿಸುತ್ತಿದ್ದದ್ದು ಮಾತ್ರ ಡಿಎಂವಿ!.

ಈ ಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ಬೆವರು ಹರಿಸಿದ್ದ ದೇವೇಗೌಡರಿಗೆ ಯುವ ಮುಂದಾಳು ಡಿ.ಕೆ.ಶಿವಕುಮಾರ್ ಅವರ ಶಕ್ತಿಯ ಅರಿವಾಗುತ್ತದೆ. ಫಲಿತಾಂಶದ ದಿನ ಸ್ವತಃ ದೇವೇಗೌಡರೇ ಮುಂದಾಗಿ ಡಿಕೆಶಿಯವರ ಕೈ ಕುಲುಕಿ, ಬೆನ್ನು ತಟ್ಟಿ ‘ಈ ದಿನ ನನ್ನ ವಿರುದ್ಧ ನೀನು ಸೋತಿರಬಹುದು. 

ಆದರೆ, ಮುಂದಿನ ದಿನಗಳಲ್ಲಿ ನಿನಗೆ ರಾಜಕಾರಣದಲ್ಲಿ ಉತ್ತಮ ಭವಿಷ್ಯವಿದೆ’ ಎಂದು ಆಶೀರ್ವಾದ ಮಾಡಿದ್ದರು. ಅದನ್ನು ಈಗಲೂ ಡಿ.ಕೆ.ಶಿವಕುಮಾರ್ ನೆನಪಿಸಿಕೊಳ್ಳುತ್ತಾರೆ. 

click me!