ಕಾಂಗ್ರೆಸ್ ಪಕ್ಷದ ಶಿಸ್ತಿನ ಶಿಫಾಯಿಯಂತೆ ಕಾರ್ಯನಿರ್ವಹಿಸಿ| ಪ್ರತಿವಿಜ್ಞಾವಿಧಿ ಕಾರ್ಯಕ್ರಮದ ಪೂರ್ವಭಾವಿಯಲ್ಲಿ ರಾಜು.ಎಸ್.ಮನ್ನಿಕೇರಿ ಮನವಿ| ಕಾಂಗ್ರೆಸ್ ಪಕ್ಷ 130 ವರ್ಷಗಳಿಂದ ಪರಿಶಿಷ್ಠ ಜಾತಿ ಜನಾಂಗದ ಏಳಿಗೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ| ಇವತ್ತು ಕೆಲ ಹಂತದಲ್ಲಿ ಪರಿಶಿಷ್ಠ ಜಾತಿ ಜನಾಂಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆಯಲು ಕಾಂಗ್ರೆಸ್ ಪಕ್ಷ ಕಾರಣ|
ಬಾಗಲಕೋಟೆ(ಜೂ.08): ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ವತಿಯಿಂದ ಬಾಗಲಕೋಟೆ ತಾಲೂಕು ಮಟ್ಟದ ಪ್ರತಿವಿಜ್ಞಾವಿಧಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ರಾಜು.ಎಸ್.ಮನ್ನಿಕೇರಿ ಮಾತನಾಡಿ, 198 ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡದ ಪದಾಧಿಕಾರಿಗಳ ಮೂಲಕ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಮುಖಂಡರಲ್ಲಿ ಮತ್ತು ಕಾರ್ಯಕರ್ತರಲ್ಲಿ ಮಾಹಿತಿಯನ್ನು ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ರವಾನಿಸಲಾಗಿದೆ. ಆದ್ದರಿಂದ ಎಲ್ಲ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡದ ಮುಖಂಡರು ಸ್ವಯಂ ಪ್ರೇರಿತ ನಿಯೋಜಕರಾಗಿ ಆಯಾ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಶಿಫಾಯಿಯಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕೊರೋನಾ ಮಧ್ಯೆಯೂ ಪತಿಯ ಆಯಸ್ಸು ವೃದ್ಧಿಗಾಗಿ ಮಹಿಳೆಯರಿಂದ ವಟ ಸಾವಿತ್ರಿ ವ್ರತ
ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ತಾಲೂಕು ಬ್ಲಾಕ್ ಅಧ್ಯಕ್ಷ ಎಸ್.ಎನ್.ರಾಂಪೂರ ಮಾತನಾಡಿ, ಕಾಂಗ್ರೆಸ್ ಪಕ್ಷ 130 ವರ್ಷಗಳಿಂದ ಪರಿಶಿಷ್ಠ ಜಾತಿ ಜನಾಂಗದ ಏಳಿಗೆಗಾಗಿ ಸಾಕಷ್ಟುಯೋಜನೆಗಳನ್ನು ಜಾರಿಗೆ ತಂದಿರುವ ಕಾರಣ ಇವತ್ತು ಕೆಲ ಹಂತದಲ್ಲಿ ಪರಿಶಿಷ್ಠ ಜಾತಿ ಜನಾಂಗವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆಯಲು ಕಾಂಗ್ರೆಸ್ ಪಕ್ಷ ಕಾರಣವಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಜನಾಂಗವು ಹಿಂದುತ್ವದ ಅವಿಭಾಜ್ಯ ಅಂಗ. ಆದರೆ, ಬಿಜೆಪಿ ಪಕ್ಷವು ಒಡೆದಾಳುವಂತ ನೀತಿ ಅನುಸರಿಸಿ ಇಲ್ಲ ಸಲ್ಲದ ಕಾಯ್ದೆಗಳನ್ನು ತಿರುಚುವ ಮೂಲಕ ಈ ಜನಾಂಗದ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ಜಿಲ್ಲಾಧ್ಯಕ್ಷರು ಚೇತನ ದೊಡಮ® ಅವರನ್ನು ಬಾಗಲಕೋಟೆ ನಗರ ಸಂಚಾಲಕರನ್ನಾಗಿ ನೇಮಕ ಮಾಡುವ ಮೂಲಕ ಮತ್ತು ಅಜಯ ಅಂತರಗೊಂಡ ಅವರನ್ನು ಕರ್ನಾಟಕ ಮಜ್ದೂರ ಸಂಘದ ಅಧ್ಯಕ್ಷರನ್ನಾಗಿ ಮತ್ತು ಕೆಲ ಮುಖಂಡರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶ ಪತ್ರ ವಿತರಿಸಿದರು.
ಸಭೆಯಲ್ಲಿ ನಗರ ಘಟಕದ ಅಧ್ಯಕ್ಷ ಹಾಜಿಸಾಬ ದಂಡಿನ ಆದೇಶ ಪತ್ರವನ್ನು ವಿತರಿಸಿದರು. ಆನಂದ ಶಿಲ್ಪಿ, ಅಪ್ಪು ಕಟ್ಟಿಮನಿ, ಮಳಿಯಪ್ಪ ಮಾದರ, ನವೀನ ಮೂಕಿ, ಮಂಜುನಾಥ ಬೇವಿನಮಟ್ಟಿ, ಮಲ್ಲು ಹಿರೇಮಠ, ಮೌನೇಶ ಮಾದರ ಉಪಸ್ಥಿತರಿದ್ದರು.