ಒಂದೇ ದಿನದಲ್ಲಿ 250 ಸಾಗುವಳಿ ಚೀಟಿ ವಿತರಣೆ: ಇದೊಂದು ಐತಿಹಾಸಿಕ ದಾಖಲೆ ಎಂದ ಎಂ.ಪಿ. ರೇಣುಕಾಚಾರ್ಯ

By Kannadaprabha News  |  First Published Mar 30, 2023, 8:43 AM IST

ಒಂದೇ ದಿನ ಏಕಕಾಲದಲ್ಲಿ ಸುಮಾರು 250 ಫಲಾನುಭವಿಗಳಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ವಿತರಣೆ ಮಾಡಿದ್ದು ಇದೊಂದು ಐತಿಹಾಸಿಕ ದಾಖಲೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಿಂದ ಈ ವರೆಗೆ ಸುಮಾರು ಒಂದು ಸಾವಿರ ಬಗರ್‌ ಹುಕುಂ ಸಾಗುವಳಿ ಪತ್ರ ವಿತರಿಸಲಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.


ಹೊನ್ನಾಳಿ (ಮಾ.30) : ಒಂದೇ ದಿನ ಏಕಕಾಲದಲ್ಲಿ ಸುಮಾರು 250 ಫಲಾನುಭವಿಗಳಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ವಿತರಣೆ ಮಾಡಿದ್ದು ಇದೊಂದು ಐತಿಹಾಸಿಕ ದಾಖಲೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಿಂದ ಈ ವರೆಗೆ ಸುಮಾರು ಒಂದು ಸಾವಿರ ಬಗರ್‌ ಹುಕುಂ ಸಾಗುವಳಿ ಪತ್ರ ವಿತರಿಸಲಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಹೇಳಿದರು.

ತಾಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ಬೆಳಗ್ಗೆ ಸುಮಾರು 250 ಮಂದಿ ಬಗರ್‌ಹುಕುಂ(Bagarhukum) ಸಾಗುವಳಿದಾರರಿಗೆ ಸಾಗುವಳಿ ಪತ್ರ ವಿತರಿಸಿ, ಅವಳಿ ತಾಲೂಕುಗಳಲ್ಲಿ ಅನೇಕ ದಶಕಗಳಿಂದ ಬಗರ್‌ಹುಕುಂ ಸಾಗುವಳಿ ಮಾಡಿ ಬರುತ್ತಿದ್ದ ಬಡ ರೈತ ಸಮುದಾಯ ಸಾಗುವಳಿ ಪತ್ರದ ನಿರೀಕ್ಷೆಯಲ್ಲಿಯೇ ಜೀವನ ಸಾಗಿಸಿಕೊಂಡು ಬರುತ್ತಿದ್ದರು. ಇವರ ಸಂಕಷ್ಟವನ್ನು ಗಮನಿಸಿ ಇದೀಗ ತನ್ನ ಅಧಿಕಾರಾವಧಿಯಲ್ಲಿ ಬಗರ್‌ಹುಕುಂ ಸಮಿತಿ ಮತ್ತು ಅಧಿಕಾರಿಗಳ ಸಹಕಾರದಿಂದ ಒಂದೇ ದಿನ 250ಮಂದಿಗೆ ಸಾಗುವಳಿ ಪತ್ರ ನೀಡಿರುವುದು ದಾಖಲೆ ಎಂದು ಹೇಳಿದರು.

Tap to resize

Latest Videos

ಬಗರ್‌ಹುಕುಂ ಸಾಗುವಳಿದಾರರ ತೆರವು ವಿಚಾರ: ರೈತಪರ ಯಾವುದೇ ಕಾನೂನು ಹೋರಾಟಕ್ಕೆ ನಾನು ಸಿದ್ಧ: ಮಧು

ಸಾಮಾನ್ಯವಾಗಿ ಬಗರ್‌ಹುಕುಂ ಸಮಿತಿ ಅಧ್ಯಕ್ಷರು ಕ್ಷೇತ್ರದ ಶಾಸಕ. ಆದರೆ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಸ್ವತಃ ರೈತರಾದ ಕೆ.ಇ.ನಾಗರಾಜ್‌ಗೆ ಈ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟು ಪಾರದರ್ಶಕವಾಗಿ ಬಗರ್‌ಹುಕುಂ ಸಾಗುವಳಿ ಮಾಡುವ ರೈತರಿಗೆ ಸಾಗುವಳಿ ಚೀಟಿ ದೊರಕಿಸುವ ಕೆಲಸ ಮಾಡಿದ್ದೇನೆ. ಮುಂದೆ ಸಾಗುವಳಿ ಚೀಟಿ ಪಡೆದ ರೈತರಿಗೆ ಪಹಣಿ ವ್ಯವಸ್ಥೆ ಅಧಿಕಾರಿಗಳು ಮಾಡಿಕೊಡಬೇಕು. ತಾಲೂಕಿನಲ್ಲಿ ಅರ್ಜಿ ಹಾಕಿದ ಎಲ್ಲ ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ ಎಂದು ಹೇಳಿದರು. ಅವಳಿ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಮನೆಗಳು ಹಾಳಾಗಿದ್ದು, ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರದಿಂದ 3,500 ಮನೆಗಳಿಗೆ ಸುಮಾರು 151 ಕೋಟಿ ರು. ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ಬಗರ್‌ ಹುಕುಂ ಸಮಿತಿ ಅಧ್ಯಕ್ಷ ಮಾದೇನಹಳ್ಳಿ ಕೆ.ಇ. ನಾಗರಾಜ್‌ ಮಾತನಾಡಿ ಸುಮಾರು 50 ರಿಂದ 60ವರ್ಷದಿಂದ ಬಗರ್‌ಹುಕುಂ ಸಾಗುವಳಿ ಮಾಡಿ ಬಂದಂತಹ ರೈತರಿಗೆ ಸಾಗುವಳಿ ಪತ್ರ ವಿತರಿಸಿ ನ್ಯಾಯ ದೊರಕಿಸುವ ಕೆಲಸ ಶಾಸಕರು, ತಾಲೂಕು ಆಡಳಿತದ ಅಧಿಕಾರಿಗಳ ಸಹಕಾರದಿಂದ ಮಾಡಲಾಗಿದೆ ಎಂದು ಹೇಳಿದರು.

ಬಗರ್‌ಹುಕುಂ ರೈತರಿಗೆ ಸಾಗುವಳಿ ಪತ್ರ ನೀಡಲು ಒತ್ತಾಯ

ತಹಸೀಲ್ದಾರ್‌ ತಿರುಪತಿ ಪಾಟೀಲ್‌, ಬಗರ್‌ ಹುಕುಂ ಸಮಿತಿ ಸದಸ್ಯ ಕುಂದೂರು ಶಾಂತರಾಜ್‌, ಕುಳಗಟ್ಟೆಮಹಾಂತೇಶ್‌, ಮುಖಂಡರಾಡ ಆರಕೆರೆ ನಾಗರಾಜ್‌, ಬೆನಕನಹಳ್ಳಿ ಮಹೇಂದ್ರ ಗೌಡ, ರಾಜು, ಪ್ರಶಾಂತ್‌ ಸೇರಿ ಅನೇಕ ಮುಖಂಡರು, ಫಲಾನುಭವಿಗಳಿದ್ದರು.

click me!