ಅಪಘಾತದಲ್ಲಿ ತಾಯಿ ಸಾವು: ಅಂತ್ಯಕ್ರಿಯೆಗೆ ತೆರಳಲಿಕ್ಕಾಗದ ವಿಕಲಚೇತನ ಪುತ್ರನ ಪರದಾಟ !

Kannadaprabha News   | Asianet News
Published : Apr 16, 2020, 02:05 PM IST
ಅಪಘಾತದಲ್ಲಿ ತಾಯಿ ಸಾವು: ಅಂತ್ಯಕ್ರಿಯೆಗೆ ತೆರಳಲಿಕ್ಕಾಗದ ವಿಕಲಚೇತನ ಪುತ್ರನ ಪರದಾಟ !

ಸಾರಾಂಶ

ಬಳ್ಳಾರಿಗೆ ತೆರಳಲು ಅನುಮತಿ ನೀಡುವಂತೆ ಮಗನ ಕಣ್ಣೀರು| ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಮೀಪ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ತಾಯಿ| ವಿಕಲಚೇತನ ಮಲ್ಲುವಿನ ಕಣ್ಣೀರಿಗೆ ಸ್ಪಂದಿಸಿ ಅನುಮತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ DC ಪ್ರಕಾಶ ರಜಪೂತ|

ಯಾದಗಿರಿ(ಏ.16): ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಮೀಪ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ತಾಯಿಯ ಅಂತ್ಯಸಂಸ್ಕಾರಕ್ಕೆ ತೆರಳಲಾಗದೆ, ವಿಕಲಚೇತನ ಪುತ್ರನೊಬ್ಬ ಅಪರ ಜಿಲ್ಲಾಧಿಕಾರಿಗಳೆದುರು ಕಣ್ಣೀರಿಟ್ಟ ಘಟನೆ ಯಾದಗಿರಿಯಲ್ಲಿ ಬುಧವಾರ ಸಂಜೆ ನಡೆದಿದೆ.

ಜಿಲ್ಲೆಯ ಬಾಡಿಯಾಳ್ ಗ್ರಾಮದ ಯುವಕ ಮಲ್ಲು ಎಂಬಾತನ ತಾಯಿ ರುದ್ರಮ್ಮ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗಿ ಗ್ರಾಮದಲ್ಲಿ ತೀರಿಕೊಂಡಿದ್ದರು. ನಾಡಂಗಿಯಿಂದ ಉತ್ತನೂರಗೆ ಹೋಗುವಾಗ ಈ ಅಪಘಾತ ನಡೆದಿತ್ತು, ತಾಯಿ ಅಂತ್ಯಕ್ರಿಯೆಗೆ ಹೋಗಲು ಅನುಮತಿ ಪಡೆಯಲು ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮಲ್ಲು, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಬಳಿ ಕಣ್ಣೀರು ಹಾಕಿದ್ದಾನೆ.

ಸ್ವತಃ ಗರ್ಭಿಣಿಯಾಗಿ ನೂರಾರು ಹೆರಿಗೆ ಮಾಡಿಸಿದ ವೈದ್ಯೆ

ತಾಯಿಯ ಅಂತ್ಯಕ್ರಿಯೆಗೆ ಹೋಗಲು ಆಗಲಿಕ್ಕಾಗದಿದ್ದರಿಂದ ಅನುಮತಿ ನೀಡುವಂತೆ ಮನವಿ ಮಾಡಿದ. ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡ, ವಿಕಲಚೇತನ ಮಲ್ಲುವಿನ ಕಣ್ಣೀರಿಗೆ ಸ್ಪಂದಿಸಿದ ಪ್ರಕಾಶ ರಜಪೂತ ಅನುಮತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು