ಇಂದಿನಿಂದ ಮೈಸೂರು ಗೋವಾ ವಿಮಾನ ಹಾರಾಟ ಆರಂಭ!

By Web DeskFirst Published Jul 19, 2019, 3:56 PM IST
Highlights

ಇಂದಿನಿಂದ ಮೈಸೂರು ಗೋವಾ ನಡುವೆ ವಿಮಾನ ಹಾರಾಟ ಆರಂಭ| ಉಡಾನ್ ಯೋಜನೆ ಅಡಿಯಲ್ಲಿ ಚಾಲನೆಗೊಂಡ ವಿಮಾನಸೇವೆ| ಮಧ್ಯಾಹ್ನ 3.20 ರಿಂದ ಮೈಸೂರಿನಿಂದ ಗೋವಾಕ್ಕೆ.

ಮೈಸೂರು[ಜು.19]: ಉಡಾನ್ ಯೋಜನೆ ಅಡಿ ಇಂದಿನಿಂದ ಮೈಸೂರಿನಿಂದ ಗೋವಾ, ಹೈದರಾಬಾದ್, ಕೊಚ್ಚಿ ನಡುವೆ ನೇರ ವಿಮಾನ ಹಾರಾಟ ಆರಂಭಗೊಂಡಿದೆ. 

ಉಡಾನ್ ಯೋಜನೆ ಅಡಿಯಲ್ಲಿ ವಿಮಾನಸೇವೆ ಚಾಲನೆ ಪಡೆದಿದ್ದು, ಇಂದು ಮಧ್ಯಾಹ್ನ 3.20 ರಿಂದ ಮೈಸೂರಿನಿಂದ ಗೋವಾಗೆ ಮೊದಲ ವಿಮಾನ ಹೊರಡಲಿದೆ. ಸಂಜೆ 5.20 ರಿಂದ ಗೋವಾದಿಂದ ಮೈಸೂರಿಗೆ ವಿಮಾನ ಹಾರಟ ಆರಂಭವಾಗಲಿದೆ.

ಅಲಯನ್ಸ್ ಏರ್ ಸಂಸ್ಥೆ ಈ ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸಲಿದ್ದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಇನ್ಮುಂದೆ ಹೆಚ್ಚು ಚಟುವಟಿಕೆಯಿಂದ ಕೂಡಿರಲಿದೆ.

Guyz, after the inauguration of 3 flights tmrw, I will make one more announcement regarding train connectivity! pic.twitter.com/V2gnBIMDF6

— Pratap Simha (@mepratap)

ಈಗಾಗಲೇ ಮೈಸೂರಿನಿಂದ ಚೆನೈ, ಬೆಂಗಳೂರು, ಹೈದರಾಬಾದ್ ಗೆ ವಿಮಾನ ಹಾರಟ ಆರಂಭಿಸಲಾಗಿದೆ. ಇಂದಿನಿಂದ ಗೋವಾ ವಿಮಾನ ಸೇವೆಯೂ ಆರಂಭವಾಗಿದ್ದು, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ ತೋರಿದ್ದರೆ.

click me!