Digital Arrest: 18 ದಿನದ ಅಂತರದಲ್ಲಿ 11.8 ಕೋಟಿ ರೂಪಾಯಿ ಕಳೆದುಕೊಂಡ ಬೆಂಗಳೂರು ಟೆಕ್ಕಿ!

By Santosh Naik  |  First Published Dec 23, 2024, 7:54 PM IST

ಬೆಂಗಳೂರಿನ 39 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ 18 ದಿನಗಳಲ್ಲಿ 11.8 ಕೋಟಿ ರೂ. ವಂಚನೆಗೆ ಒಳಗಾಗಿದ್ದಾರೆ. ವಂಚಕರು ಟ್ರಾಯ್ ಅಧಿಕಾರಿ ಮತ್ತು ಪೊಲೀಸ್ ಎಂದು ಹೇಳಿಕೊಂಡು ಆಧಾರ್ ಕಾರ್ಡ್ ದುರ್ಬಳಕೆ ಆರೋಪದಲ್ಲಿ ಹಣ ವರ್ಗಾವಣೆ ಮಾಡಿಸಿದ್ದಾರೆ.


ಬೆಂಗಳೂರು (ಡಿ.23): 39 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ಡಿಜಿಟಲ್‌ ಅರೆಸ್ಟ್‌ಗೆ ಗುರಿಯಾಗಿದ್ದು, ವಂಚಕರು ಈತನಿಂದ 18 ದಿನಗಳ ಅಂತರದಲ್ಲಿ ಬರೋಬ್ಬರಿ 11.8 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ತೆಗೆದುಕೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಬ್ಯಾಂಕ್‌ ಅಕೌಂಟ್‌ಗಳನ್ನು ತೆರೆಯಲು ಟೆಕ್ಕಿನ ಆಧಾರ್‌ ಕಾರ್ಡ್‌ ಬಳಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡಿರುವ ವಂಚಕರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನವೆಂಬರ್‌ 25 ರಿಂದ ಡಿಸೆಂಬರ್‌ 12ರವರೆಗಿನ 18 ದಿನಗಳ ಅಂತರದಲ್ಲಿ ಈ ಮೋಸ ನಡೆದಿದೆ ಎಂದು ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿ ದಾಖಲಾಗಿರುವ ಮಾಹಿತಿಯ ಪ್ರಕಾರ, ನವೆಂಬರ್‌ 11 ರಂದು ಟೆಕ್ಕಿಗೆ ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (ಟ್ರಾಯ್) ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಕರೆ ಮಾಡಿದ್ದಾರೆ. ಆಧಾರ್‌ ಕಾರ್ಡ್‌ಗೆ ಲಿಂಕ್‌ಆಗಿರುವ ಈತನ ಸಿಮ್‌ ಕಾರ್ಡ್‌ಅನ್ನು ಅಕ್ರಮ ಜಾಹೀರಾತು ಹಾಗೂ ಕಿರುಕುಳದ ಮೆಸೇಜ್‌ ಕಳಿಸಲು ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾನೆ. ಈ ವಿಚಾರವಾಗಿ ಮುಂಬೈನ ಕೊಲಬಾ ಸೈಬರ್‌ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಕೂಡ ದಾಖಲಾಗಿದೆ ಎಂದು ವಂಚಕ ತಿಳಿಸಿದ್ದಾನೆ.

ಅದಾದ ಬಳಿಕ ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿದ್ದು, ಅಕ್ರಮ ಹಣ ವರ್ಗಾವಣೆಗೆ ಬ್ಯಾಂಕ್‌ ಖಾತೆ ತೆರೆಯಲು ಈತನ ಆಧಾರ್‌ ವಿವರಗಳನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾನೆ. ವಂಚಕನು ವಿಷಯವನ್ನು ಗೌಪ್ಯವಾಗಿಡಲು ಎಚ್ಚರಿಕೆ ನೀಡಿದ್ದಾನೆ ಮತ್ತು ವಾಸ್ತವ ತನಿಖೆಗೆ ಸಹಕರಿಸದಿದ್ದರೆ ನೇರವಾಗಿ ಬಂದು ಬಂಧನ ಮಾಡೋದಾಗಿ ತಿಳಿಸಿದ್ದಾನೆ. ಅದಾದ ಬಳಿಕ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ತಕ್ಷಣವೇ ಸ್ಕೈಪ್‌ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡುವಂತೆ ಹೇಳಿದ್ದಾರೆ. ಆ ಬಳಿಕ, ಮುಂಬೈ ಪೊಲೀಸ್‌ ಸಮವಸ್ತ್ರದಲ್ಲಿದ್ದ ವ್ಯಕ್ತಿ ಈತನಿಗೆ ವಿಡಿಯೋ ಕಾಲ್‌ ಮಾಡಿದ್ದು, ಉದ್ಯಮಿಯೊಬ್ಬ ನಿಮ್ಮ ಆಧಾರ್‌ ಕಾರ್ಡ್‌ ಬಳಸಿಕೊಂಡು ಬ್ಯಾಂಕ್‌ ಖಾತೆ ತೆರೆದಿದ್ದು, 6 ಕೋಟಿಗೂ ಅಧಿಕ ವಹಿವಾಟು ನಡೆಸಿದ್ದಾನೆ ಎಂದು ತಿಳಿಸಿದ್ದಾನೆ.

Tap to resize

Latest Videos

undefined

ನವೆಂಬರ್ 25 ರಂದು, ಪೊಲೀಸ್ ಸಮವಸ್ತ್ರದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸ್ಕೈಪ್‌ನಲ್ಲಿ ಕರೆ ಮಾಡಿ, ಪ್ರಕರಣವನ್ನು ಉನ್ನತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾನೆ. ಇದಕ್ಕೆ ಒಪ್ಪದೇ ಇದ್ದಲ್ಲಿ ಇಡೀ ಕುಟುಂಬವನ್ನೇ ಬಂಧಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ನಕಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾರ್ಗಸೂಚಿಗಳನ್ನು ಉಲ್ಲೇಖಿಸಿ, ವಂಚಕರು "ಪರಿಶೀಲನೆ ಉದ್ದೇಶಗಳ" ನೆಪದಲ್ಲಿ ಕೆಲವು ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ತಿಳಿಸಿದ್ದು, ಇಲ್ಲದೇ ಇದ್ದಲ್ಲಿ ಕಾನೂನು ಪರಿಣಾಮಗಳನ್ನು ಎದುರಿಸುವುದಾಗಿ ಬೆದರಿಸಿದ್ದಾರೆ.

 

Digital Arrest: ಕರ್ನಾಟಕದಲ್ಲಿ ಹಾಲಿ ವರ್ಷ 109 ಕೋಟಿ ಕಳೆದುಕೊಂಡ ಕನ್ನಡಿಗರು!

ಎಫ್‌ಐಆರ್‌ನ ಪ್ರಕಾರ, ಸಂತ್ರಸ್ತ ಟೆಕ್ಕಿ ಬಂಧನದ ಭೀತಿಯಿಂದ ಹಲವಾರು ಬ್ಯಾಂಕ್ ಖಾತೆಗಳಿಗೆ ಹಲವಾರು ವಹಿವಾಟುಗಳಲ್ಲಿ ಒಟ್ಟು 11.8 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದಾನೆ. ಅವರು ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದಾಗ, ತಾನು ವಂಚನೆಗೆ ಒಳಗಾಗುತ್ತಿದ್ದಾನೆ ಅನ್ನೋದನ್ನ ಅರಿತು ಪೊಲೀಸರಿಗೆ ದೂರು ನೀಡಿದ್ದಾನೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಐಟಿ ಕಾಯ್ದೆ ಮತ್ತು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Digital Arrest Scam: ಜೀವಮಾನ ಪೂರ್ತಿ ದುಡಿದು ಉಳಿಸಿದ್ದ 1 ಕೋಟಿ ಕಳೆದುಕೊಂಡ 90ರ ವೃದ್ಧ!

click me!