Chamarajanagara: ಆಧಾರ್ ಕಾರ್ಡ್ ನಲ್ಲಿ ಒಂದೂರು, ವೋಟರ್ ಐಡಿಯಲ್ಲಿ ಒಂದೂರು!

By Gowthami K  |  First Published Oct 21, 2022, 8:55 PM IST

 ಆಧಾರ್ ಕಾರ್ಡ್ ನಲ್ಲಿ ಊರ ಹೆಸರು ಹೊಸದೊಡ್ಡಿಯಾದ್ರೆ, ವೋಟರ್ ಐಡಿಯಲ್ಲಿ ಮೈಸೂರಪ್ಪನ ದೊಡ್ಡಿ. ಊರ ಹೆಸರು ಬದಲಾವಣೆಯಿಂದ ಮಕ್ಕಳ ವಿಧ್ಯಾಭ್ಯಾಸಕ್ಕೂ ತೊಂದರೆ ಆತಂಕ. ಹೆಸರು ಬದಲಾಯಿಸಿ ಹೊಸ ಕಾರ್ಡ್ ಕೊಡದಿದ್ರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ. 


ವರದಿ: ಪುಟ್ಟರಾಜು. ಆರ್‌. ಸಿ ಏಷಿಯಾನೆಟ್  ಸುವರ್ಣ  ನ್ಯೂಸ್

ಚಾಮರಾಜನಗರ (ಅ.21): ಅದು ಕಾಡಂಚಿನ ಗ್ರಾಮ. ಜನರಂತೂ ತೀರಾ ಹಿಂದುಳಿದವರು. ಆಧಾರ್ ಕಾರ್ಡ್ ನಲ್ಲಿ ಊರ ಹೆಸರು ಹೊಸದೊಡ್ಡಿ ಅಂತಾ ಇದ್ರೆ ಮತದಾರ ಗುರುತಿನ ಚೀಟಿಯಲ್ಲಿ ಮೈಸೂರಪ್ಪನ ದೊಡ್ಡಿ ಅಂತಾ ಇದೆ. ಇದ್ರಿಂದ ನಮಗೆ ಹಾಗೂ ನಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕೂ ತೊಂದರೆಯಾಗ್ತಿದೆ. ಕೂಡಲೇ ಮತದಾರರ ಗುರುತಿನ ಚೀಟಿಯಲ್ಲಿ ಊರ ಹೆಸರು ಬದಲಾಯಿಸಿ ಇಲ್ಲವಾದ್ರೆ ಮತದಾನ ಬಹಿಷ್ಕಾರ ಹಾಕ್ತೀವಿ ಅಂತಾರೆ. ಇದು ಗಡಿ ಜಿಲ್ಲೆ ಚಾಮರಾಜನಗರದ ಕಾಡಂಚಿನ ಜನರ ಸ್ಥಿತಿ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊಸದೊಡ್ಡಿ ಅಂತಾ ಗ್ರಾಮವೊಂದಿದೆ. ಈ ಗ್ರಾಮದಲ್ಲಿ ಬಹುತೇಕ ಎಲ್ಲರು ಕೂಲಿ ಮಾಡಿ ಜೀವನ ನೆಡೆಸುವ ಅನಕ್ಷಸ್ಥರು ಇವರು ಇಂದಿಗೂ  ತಮ್ಮ ಊರಿನ ಹೆಸರು ಯಾವುದು ಅನ್ನೋ ಗೊಂದಲದಲ್ಲೆ ಇದ್ದಾರೆ. ಈ ಗ್ರಾಮದಲ್ಲಿ   ಜನರಿಗೆ ಮತದಾರರ ಗುರುತಿನ ಚೀಟಿಯೇ ಒಂದು ದೊಡ್ಡ ಸಮಸ್ಯೆಯಾಗಿದೆ. ಮತದಾರ ಗುರುತಿನ ಚೀಟಿಯಲ್ಲಿ ಗ್ರಾಮದ ಹೆಸರು ಮೈಸೂರಪ್ಪನ ದೊಡ್ಡಿ ಅಂತಾ ಇದೆ. ಆದ್ರೆ ಮೈಸೂರಪ್ಪನ ದೊಡ್ಡಿಯಿಂದ ಬೇರ್ಪಟ್ಟು  ಹೊಸದೊಡ್ಡಿ ಗ್ರಾಮ ರಚನೆಯಾಗಿ  ಹಲವು ವರ್ಷಗಳೇ ಕಳೆದಿವೆ. 

Tap to resize

Latest Videos

undefined

ಮೈಸೂರಪ್ಪನ ದೊಡ್ಡಿಯಿಂದ ವಲಸೆ ಬಂದ 200 ಕ್ಕೂ ಹೆಚ್ಚು ಕುಟುಂಬಗಳು ಈ ಗ್ರಾಮದಲ್ಲಿ ವಾಸವಿವೆ. ಗ್ರಾಮದ ಹೆಸರನ್ನು ಐಡಿ ಕಾರ್ಡ್ ನಲ್ಲಿ ಬದಲಾಯಿಸುವಂತೆ ಹಲವು ವರ್ಷದಿಂದ ಜನರು ಮನವಿ ಮಾಡ್ತಿದ್ದಾರೆ. ಆದ್ರೆ ಅಧಿಕಾರಿಗಳು ಇದಕ್ಕೆ ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷ್ಯ ತಾಳಿದ್ದಾರೆ. ಇದ್ರಿಂದ ನಮಗೆ ಸರ್ಕಾರಿ ಯೋಜನೆಗಳು ತಲಪುವಲ್ಲಿ ತೊಂದರೆಯಾಗುತ್ತಿದ್ದು ಯಾವುದಾದರು ಯೋಜನೆಗೆ ಅರ್ಜಿ ಹಾಕಿದರೆ ಇದು ನಿಮ್ಮ ಊರಿಗೆ ಬರುವುದಿಲ್ಲ ನಿಮ್ಮ ಬಳಿ ಸರಿಯಾದ ದಾಖಲೆ ಇಲ್ಲ ಎನ್ನುತ್ತಾರೆ.  ದಾಖಲಾತಿ ಸಮಸ್ಯೆ  ನಮಗಷ್ಟೇ ಅಲ್ಲ ನಮ್ಮ ಮಕ್ಕಳ ವಿಧ್ಯಾಭ್ಯಾಸ ಹಾಗು ಉದ್ಯೋಗ ಇತರೆ ಸೌಲಭ್ಯಗಳು ಪಡೆಯಲು  ತೊಂದರೆಯಾಗ್ತಿದೆ, ನಾವು ಯಾವ ಊರಿಗೆ ಸೇರಿದ್ದೆವೆ ನಮ್ಮ ಊರಿನ ಹೆಸರು ಏನು  ಅಂತಾ ಸ್ಥಳೀಯರು ಅಳಲು ತೋಡಿಕೊಳ್ತಾರೆ.

ಇನ್ನೂ ರೇಷನ್ ಕಾರ್ಡ್,ಆಧಾರ್ ಕಾರ್ಡ್ ನಲ್ಲಿ ಗ್ರಾಮದ ಹೆಸರು ಹೊಸದೊಡ್ಡಿ ಅಂತಾ ಬರ್ತಿದೆ.ಬ್ಯಾಂಕ್ ಸೇರಿದಂತೆ ಹಲವು ಕಡೆ ಇದನ್ನೇ ಆಧಾರವಾಗಿ ಜನರು ಬಳಸುತ್ತಿದ್ದಾರೆ. ಆದ್ರೆ ಮತದಾರ ಗುರುತಿನ ಚೀಟಿ, ಶಾಲಾ ದಾಖಲಾತಿಯಲ್ಲಿ ಮೈಸೂರಪ್ಪನ ದೊಡ್ಡಿ ಅಂತಾ ಬರುತ್ತಿರುವುದರಿಂದ ಒಂದು ವೇಳೆ ಮುಂದೆ ಅದರ ತಿದ್ದುಪಡಿ ಮಾಡಿಸಬೇಕಾದ ಸಂಧರ್ಭ ಬಂದರೆ ಹರಸಹಾಸ ಪಡಬೇಕಾಗುತ್ತದೆ ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಭವಿಷ್ಯದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾದ್ರೆ ಅನ್ನೋ ಆತಂಕವಿದೆ.ಹಲವು ಬಾರಿ ಹೆಸರು ಬದಲಾಯಿಸಲು ಗ್ರಾಮಸ್ಥರು ಮನವಿ ಕೊಟ್ಟಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ತಿಲ್ಲ. ಯಾವುದೇ ಇಲಾಖೆಗಳಿಗೂ ಹೋದರೂ ಕೂಡ ಎರಡೆರಡು ವಿಳಾಸವಿರುವ ಬಗ್ಗೆ ಕೇಳ್ತಾರೆ, ಸರ್ಕಾರಿ ಸೌಲಭ್ಯ ಕೂಡ ಇಲ್ಲವಾಗ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸ್ತಾರೆ.

ಒಟ್ನಲ್ಲಿ ಅಧಿಕಾರಿಗಳು ಮಾಡೋ ಎಡವಟ್ಟಿಗೆ ಜನರು ಹೈರಾಣಾಗ್ತಿದ್ದು,ಕೂಡಲೇ ಕಾರ್ಡ್ ನಲ್ಲಿ ಹೆಸರು ಬದಲಾಯಿಸಿ ಇಲ್ಲವಾದ್ರೆ ಮತದಾನ ಬಹಿಷ್ಕಾರದ ಎಚ್ಚರಿಕೆ ಕೊಟ್ಟಿದ್ದು,ಅಧಿಕಾರಿಗಳ ಇನ್ನಾದ್ರೂ ಕಣ್ಣಾಯಿಸುತ್ತಾರಾ?ಸಮಸ್ಯೆ ಬಗೆಹರಿಸ್ತಾರಾ? ಅನ್ನೋದ್ನ ಕಾದುನೋಡಬೇಕಾಗಿದೆ.

click me!