ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಅ.17) : ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಸದ್ಯ ರಾಜ್ಯದಲ್ಲಿ ಪ್ರತಿಷ್ಠಿತ ವಿಧಾನಸಭೆಯ ಕ್ಷೇತ್ರವಾಗಿ ಪರಿಣಮಿಸಿದೆ. ಈ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪರ್ಧೆ ಮಾಡಿ ಶಾಸಕರಾಗಿದ್ದ ಕ್ಷೇತ್ರ ಕಳೆದ 2018 ರ ವಿಧಾನ ಸಭಾ ಕ್ಷೇತ್ರದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಯಿಂದ ಅಮೃತ ದೇಸಾಯಿ 20,000 ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಆಯ್ಕೆಯಾದ ಬಳಿಕ ಕ್ಷೇತ್ರದಲ್ಲಿ ಕಳೆದ ನಾಲ್ಕುವರೆ ವರ್ಷದಲ್ಲಿ ಕ್ಷೇತ್ರಕ್ಕೆ 1400 ಕೋಟಿ ಅನುದಾನವನ್ನ ಅಭಿವೃದ್ಧಿಗೋಸ್ಕರ ಬಿಡುಗಡೆ ಮಾಡಿಸಿದ ಹೆಮ್ಮೆ ಶಾಸಕ ಅಮೃತ ದೇಸಾಯಿ ಅವರಿಗೆ ಸಲ್ಲುತ್ತದೆ.
ಹುಬ್ಬಳ್ಳಿ, ಧಾರವಾಡಗಳಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ: ಅರುಣ್ ಸಿಂಗ್
ಅಷ್ಟಕ್ಕೂ 1400 ಕೋಟಿ ರೂ. ಅನುದಾನವನ್ನೇನೋ ಬಿಡುಗಡೆ ಮಾಡಿಸಿದರು. ಆದರೆ ಸದ್ಯ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ ಎಂದುಕ್ಷೇತ್ರದ ಜನರೇ ಮಾತನಾಡಿಕ್ಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಧಾರವಾಡದ ಕಮಲಾಪುರದಿಂದ ಪತ್ರೇಶ್ವರ ದೇವಸ್ಥಾನದವರೆಗೆ ಎಲ್ಲಿ ನೋಡಿದರೂ ಅಕ್ರಮ ಸಕ್ರಮ ಲೇಔಟ್ ಗಳು ನಿರ್ಮಾಣವಾಗಿ ಕಟ್ಟಡಗಳು ತಲೆ ಎತ್ತುತ್ತಲೇ ಇವೆ. ಆದರೆ ಧಾರವಾಡದಿಂದ ಉಪ್ಪಿನ ಬೆಟಗೇರಿ ಗೆ ಹೋಗುವ ರಸ್ತೆ ಮಾತ್ರ ಬರೀ ಗುಂಡಿಗಳಿಂದ ತುಂಬಿ ಹೋಗಿದೆ. ಬೈಕ್ ಸವಾರರು ಆ ರಸ್ತೆಯಲ್ಲಿ ಪ್ರಯಾಣ ಮಾಡಿದರೆ ಮರಳಿ ಬರ್ತಾರೆ ಇಲ್ಲವೋ ಎಂಬಂತಾಗಿದೆ...
ರಸ್ತೆಯ ಎರಡೂ ಕಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ, ಲೇಔಟ್ ಗಳಿಂದ ಬಂದಂತಹ ನೀರು ರಸ್ತೆಯ ಮೇಲೆ ಪ್ರತಿದಿನ ಹರಿದಾಡುತ್ತೆ ತದ ನಂತರ ವಾಹನ ಸಂಚಾರಕ್ಕೆ ರಸ್ತೆ ಕಿತ್ತೋಗಿ ಎಲ್ಲಿ ನೋಡಿದರೂ ಗುಂಡಿಗಳು ಬಿದ್ದಿವೆ. ಆದರೆ ಈ ರಸ್ತೆ ಕಳೆದ ಒಂದು ವರ್ಷದಿಂದ ಇದೇ ಪರಿಸ್ಥಿತಿಯಾಗಿದೆ.
ಮಳೆ ಬಂತೆಂದರೆ ಸಾಕು ವಾಹನ ಸವಾರರು, ರೈತರು, ಶಾಲಾ ಮಕ್ಕಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದಕ್ಕೆ ಮುಕ್ತಿ ಕೊಡೋರು ಇಲ್ವಾ? ಯಾಕೆ ಹೀಗೆ ಆಗ್ತಾ ಇದೆ? ಲೋಕೋಪಯೋಗಿ ಇಲಾಖೆಯಗೆ ಎಷ್ಟೋ ಬಾರಿ ಮನವಿ ಮಾಡಿಕೊಂಡರೂ ಮಳೆಯ ಕಾರಣ ಹೇಳುತ್ತಿದ್ದಾರೆ..ಆದರೆ ಮಾಜಿ ಸಚಿವ ವಿನಯ ಕುಲಕರ್ಣಿ ಮತ್ತು ಹಾಲಿ ಶಾಸಕ ಅಮೃತ ದೇಸಾಯಿಗೆ ಗ್ರಾಮೀಣ ಕ್ಷೇತ್ರ ಆಳೋದು ಗೊತ್ತು. ಆದರೆ ಅಭಿವೃದ್ಧಿ ಮಾತ್ರ ಮರಿಚಿಕೆ.
ಧಾರವಾಡ: ವಿನಯ ಕುಲಕರ್ಣಿಗೆ ಏಕವಚನದಲ್ಲಿ ಟಾಂಗ್ ಕೊಟ್ಟ ಶಾಸಕ ಅಮೃತ ದೇಸಾಯಿ
1400 ಕೋಟಿ ರೂ. ಅಭಿವೃದ್ಧಿ ಗೆ ಬಿಡುಗಡೆಯಾಗಿದೆ ಕ್ಷೇತ್ರಕ್ಕೆ ಅಂತಾರೆ ಶಾಸಕರು. ಎಲ್ಲಿ ಅಭಿವೃದ್ದಿ ಆಗಿದೆ? ಅಕ್ರಮ ಲೇಔಟ್ ದಾರರಿಗೆ ಕಡಿವಾಣ ಹಾಕೋರು ಯಾರು? ಪ್ರಶ್ನೆಗೆ ಉತ್ತರವಿಲ್ಲ.
ಇಬ್ಬರು ನಾಯಕರಿಗೆ ಧಾರವಾಡ ಗ್ರಾಮೀಣ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಅಕ್ರಮ ಲೇಔಟ್ ಗಾರರಿಗೆ ಯಾರು ಕಡಿವಾಣ ಹಾಕ್ತಾರೆ? ಲೇಔಟ್ ನಿಂದ ರಸ್ತೆ ನೀರು ಬರದಂತೆ ಯಾರು ಅಭಿವೃದ್ಧಿ ಮಾಡ್ತಾರೆ? ಇದನ್ನೆಲ್ಲ ಕೇಳಿದರೆ ಸಂಬಂಧಪಟ್ಟವರು ತಲೆ ಕೆಡಸಿಕ್ಕೊಳ್ಳುತ್ತಿಲ್ಲ. ಆದರೆ ಇದಕ್ಕೆಲ್ಲ ಶಾಸಕರು ಮತ್ತು ಲೋಕೋಪಯೋಗಿ ಇಲಾಖೆಯ ಅದಿಕಾರಿಗಳು ಬೇಟಿ ನೀಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡು ರಸ್ತೆಯನ್ನ ಅಭಿವೃದ್ದಿ ಮಾಡಿ ಸರಳ ಸಂಚಾರಕ್ಕೆ ಮುಕ್ತವಾಗಿಸಬೇಕು ಎಂಬುದು ವಾಹನ ಸವಾರರ ಬೇಡಿಕೆಯಾಗಿದೆ.