
ಧಾರವಾಡ (ಆ.14): ಬಾಂಗ್ಲಾ ವಿಮೋಚನೆಗಾಗಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ 1971ರಲ್ಲಿ ನಡೆದ ಯುದ್ಧದಲ್ಲಿ ಪಾಲ್ಗೊಂಡು ಸಾಹಸ ಮೆರೆದಿದ್ದ ಧಾರವಾಡದ ಮಾಜಿ ಯೋಧ ಸಪ್ತಾಪೂರ ನಿವಾಸಿ ವಸಂತ ಲಾಡ್ (84) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಧೈರ್ಯ ಉತ್ಸಾಹದಿಂದ ಹೋರಾಡಿ ರಕ್ಷಾ ಮಿಡಲ್,ಸಮರ ಸೇವಾ ಮೆಡಲ್ ಸೇರಿದಂತೆ ಅನೇಕ ಮೆಡಲ್‌ಗಳನ್ನು ಪಡೆದಿದ್ದ ವಸಂತ್ ಲಾಡ್ ಭಾರತ ಸರ್ಕಾರದ ಹೆಮ್ಮೆಗೂ ಪಾತ್ರ ರಾಗಿದ್ದರು. ಸಾಹಸಿ ಯೋಧ ಎನಿಸಿಕೊಂಡಿದ್ದರು.
ಜಮ್ಮು-ಕಾಶ್ಮೀರದ ಶಾಲೆಗಳಿಗೆ ದೇಶಕ್ಕಾಗಿ ಬಲಿದಾನ ಮಾಡಿದ ಯೋಧರ ಹೆಸರು
ಮರಾಠಾ ಲೈಟ್ ಇನ್ ಫೆಂಟರಿಯಲ್ಲಿ ತರಬೇತಿ ಪಡೆದು ಮದ್ರಾಸ್,ನಾಗಾಲ್ಯಾಂಡ್ ದಲ್ಲಿ ಸೇವೆ ಸಲ್ಲಿಸಿ ನಂತರ ಭಾರತ ಮತ್ತು ಪಾಕಿಸ್ತಾನ ಹಾಗೂ ಚೀನಾ ಯುಧ್ಧದಲ್ಲಿ ಪಾಲ್ಗೊಂಡಿದ್ದರು.
ಅನೇಕ ಬಾರಿ ಗುಂಡೇಟು ತಿಂದು ವೈರಿಗಳನ್ನು ಎದುರಿಸಿದ್ದ ವಸಂತ ಲಾಡ್ ಸಾಹಸಿಯಾಗಿದ್ದರು. ಇದೀಗ ವಯೋಸಹಜ ಕಾಯಿಲೆಯಿಂದ ವಸಂತ್ ಲಾಡ್ ನಿಧನರಾದರು.