
ಧಾರವಾಡ(ಆ.11): ಅತೃಪ್ತ ಶಾಸಕರು ಸಭೆ ಮಾಡಿದ್ದಾರೆ ಎಂಬುದು ತಪ್ಪು ಮಾಹಿತಿ. ಅಂತಹದ್ದೇನೂ ಆಗಿಲ್ಲ. ಸುಮ್ಮನೆ ಮಾಧ್ಯಮಗಳಲ್ಲಿ ಸಭೆ ಮಾಡಿದ್ದಾರೆ ಎಂದು ಬಂದಿದೆ. ಮಾಧ್ಯಮಗಳಲ್ಲಿ ನೋಡಿದಾಗಲೇ ಈ ವಿಷಯ ನನಗೆ ತಿಳಿದಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥ ಆಡಳಿತಗಾರ. ಅತ್ಯಂತ ಓದಿದ, ಮೇಧಾವಿ, ಬುದ್ಧಿವಂತ ಮುಖ್ಯಮಂತ್ರಿಗಳು. ಅತೀ ಹೆಚ್ಚು ಪುಸ್ತಕ ಓದಿದ ರಾಜಕಾರಣಿಗಳ ಟಾಪ್ ಲಿಸ್ಟ್‌ನಲ್ಲಿ ಅವರಿದ್ದಾರೆ. ಅವರು ನಮ್ಮ ಭಾಗದವರಾಗಿದ್ದು, ಒಳ್ಳೆ ಕೆಲಸಗಳು ಆಗಲಿವೆ ಎಂದರು.
ಬಿಜೆಪಿ ಶಾಸಕ ಬೆಲ್ಲದ್ ಫೋನ್ ಕದ್ದಾಲಿಕೆ: ತನಿಖಾಧಿಕಾರಿ ಬದಲು
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನಡೆಸಿದ ಸಭೆಗೆ ಗೈರಾದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಭೆ ಹಿಂದಿನ ದಿನವೇ ನನ್ನ ಜನ್ಮದಿನ ಇತ್ತು. ಹೀಗಾಗಿ ನಾನು ಊರಲ್ಲಿ ಇರಲಿಲ್ಲ. ಸಭೆ ದಿನದಿಂದ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನನ್ನ ಬೆಂಬಲಿಗರು ಬ್ಯಾನರ್ ಹರಿದಿರುವುದು ತಪ್ಪು. ಅವಸರದಲ್ಲಿ ನನ್ನ ಫೋಟೊ ಬಿಟ್ಟು ಹೋಗಿರಬಹುದಷ್ಟೇ ಎಂದ ಅವರು, ಉಳಿದ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದರು.