ಹೆಣ್ಣು​ಮ​ರಿಗೆ ಜನ್ಮ ನೀಡಿದ ಧರ್ಮ​ಸ್ಥ​ಳದ ಆನೆ ಲಕ್ಷ್ಮೀ

By Kannadaprabha News  |  First Published Jul 2, 2020, 9:54 AM IST

ಬೆಳ್ತಂಗಡಿಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆನೆ ಲಕ್ಷ್ಮೇ ಹೆಣ್ಣು ಆನೆಗೆ ಜನ್ಮ ನೀಡಿದ್ದು, ತಾಯಿ- ಮರಿ ಆರೋಗ್ಯವಾಗಿವೆ. ಮಂಗಳವಾರ ಸಂಜೆ ಆನೆಗೆ ಪ್ರಸವ ವೇದನೆ ಪ್ರಾರಂಭವಾಗಿತ್ತು. ಬಳಿಕ ಕೆಲವೇ ಕ್ಷಣಗಳಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ.


ಮಂಗಳೂರು(ಜು.02): ಬೆಳ್ತಂಗಡಿಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆನೆ ಲಕ್ಷ್ಮೇ ಹೆಣ್ಣು ಆನೆಗೆ ಜನ್ಮ ನೀಡಿದ್ದು, ತಾಯಿ- ಮರಿ ಆರೋಗ್ಯವಾಗಿವೆ. ಮಂಗಳವಾರ ಸಂಜೆ ಆನೆಗೆ ಪ್ರಸವ ವೇದನೆ ಪ್ರಾರಂಭವಾಗಿತ್ತು. ಬಳಿಕ ಕೆಲವೇ ಕ್ಷಣಗಳಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ.

ಪಶು ವೈದ್ಯರು ಪರೀಕ್ಷೆ ನಡೆಸಿ ತಾಯಿ ಮತ್ತು ಮರಿ ಸೌಖ್ಯವಾಗಿರುವುದನ್ನು ತಿಳಿಸಿದ್ದಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ವೀಕ್ಷಿಸಿದ್ದಾರಲ್ಲದೆ ಅದರ ಆರೈಕೆಯ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ಕ್ಷೇತ್ರದ ಹೆಗ್ಗಡೆ ಕುಟುಂಬಿಕರು, ಸಿಬ್ಬಂದಿಗಳು, ನಾಗರಿಕರು ಸಂತಸ ವ್ಯಕ್ತ ಪಡಿಸಿದ್ದಾರೆ.

Tap to resize

Latest Videos

 

2009ರಲ್ಲಿ ಆಗ ಶಾಸಕರಾಗಿದ್ದ ಆನಂದ ಸಿಂಗ್‌ ಅವರು ಹೆಣ್ಣು ಮರಿ ಆನೆಯೊಂದನ್ನು ಅರಣ್ಯ ಕಾಯಿದೆ ನಿಯಮಾನುಸಾರ ಕ್ಷೇತ್ರಕ್ಕೆ ದಾನ ಮಾಡಿದ್ದರು. ಅದಕ್ಕೆ ಲಕ್ಷ್ಮೀ ಎಂದು ನಾಮಕರಣ ಮಾಡಲಾಗಿತ್ತು.

click me!