ಧರ್ಮಸ್ಥಳ ಕೇಸ್‌: ಅನಾಮಿಕ ತಂದುಕೊಟ್ಟ ತಲೆಬುರುಡೆ ರಹಸ್ಯ ಹೊರತೆಗೆಯಲು ಮುಂದಾದ ಎಸ್‌ಐಟಿ

Published : Jul 26, 2025, 03:56 PM IST
Dharmasthala Case

ಸಾರಾಂಶ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಮಂಗಳೂರಿನಲ್ಲಿ ಮುಂದುವರೆದಿದ್ದು, ಮುಸುಕುಧಾರಿ ವ್ಯಕ್ತಿಯ ವಿಚಾರಣೆ ನಡೆಸಲಾಗಿದೆ. ಎಸ್ಐಟಿ ಅಧಿಕಾರಿಗಳು ಬುರುಡೆಯ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ದೂರುದಾರನ ಹೇಳಿಕೆಗಳನ್ನು ಪರಿಶೀಲಿಸಿ, ಸ್ಥಳೀಯರನ್ನು ವಿಚಾರಿಸಲು ಯೋಜಿಸಲಾಗಿದೆ.

ಮಂಗಳೂರು/ಉಡುಪಿ (ಜು.26): ಧರ್ಮಸ್ಥಳ (Dharmasthala) ಶವ ಹೂತಿಟ್ಟ ಕೇಸ್ (Mass body burial case) ವಿಚಾರಣೆ ಮಂಗಳೂರಿನಲ್ಲಿ (Mangaluru) ತೀವ್ರಗೊಂಡಿದೆ. 2 ಗಂಟೆಗಳಿಂದ ಮುಸುಕುಧಾರಿ ವ್ಯಕ್ತಿಯ (anonymous complainant) ವಿಚಾರಣೆ ನಡೆದಿದೆ. ಡಿಐಜಿ ಅನುಚೇತ್ (DIG Anucheth) ನೇತೃತ್ವದಲ್ಲಿ ಹೇಳಿಕೆಗಳ ಸಂಗ್ರಹವಾಗುತ್ತಿದೆ. ಬೆಳಗ್ಗೆ 10‌. 55ಕ್ಕೆ ಮಂಗಳೂರು ಎಸ್ಐಟಿ (SIT) ಕಚೇರಿಗೆ ಮುಸುಕುಧಾರಿ ವ್ಯಕ್ತಿ ಬಂದಿದ್ದ. ಬೆಳಗ್ಗೆ 11ಕ್ಕೆ ವಿಚಾರಣೆ ಆರಂಭವಾಗಿತ್ತು. ಇದಕ್ಕಾಗಿ ಕೆಲವು ಪ್ರಶ್ನಾವಳಿಗಳನ್ನೂ ಕೂಡ ಎಸ್‌ಐಟಿ ಸಿದ್ಧಮಾಡಿಕೊಂಡು ಬಂದಿತ್ತು. 30 ವರ್ಷದ ಹಿಂದಿನ ಪ್ರಕರಣಗಳ ಬಗ್ಗೆ ದೂರುದಾರನಿಂದ ಮಾಹಿತಿ ಪಡೆಯುತ್ತಿದೆ. ದೂರುದಾರನ ಎಲ್ಲಾ ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಲಾಗುತ್ತಿದೆ.

ಇದರ ನಡುವೆ ಅನಾಮಿಕ ತಂದುಕೊಟ್ಟ ಬುರುಡೆ ಸುತ್ತ ಎಸ್ಐಟಿ ಚಿತ್ತ ಹೊರಳಿದೆ. ಹಲವು ಸಮಯದಿಂದ ಅನಾಮಿಕ ಒಪ್ಪಿಸಿದ್ದ ಬುರುಡೆ ಕುರಿತು ಎಸ್ಐಟಿ ತನಿಖೆ ಮಾಡುತ್ತಿದೆ. ಒಪ್ಪಿಸಿರುವ ಬುರುಡೆಯ ಸತ್ಯಾಸತ್ಯತೆ ತಿಳಿಸುವಂತೆ ಎಸ್ಐಟಿ ಪಟ್ಟು ಹಿಡಿದಿದೆ.

ಬುರುಡೆ ಹೊರ ತೆಗಯುವಾಗ ಜೊತೆಗೆ ಯಾರಿದ್ರು? ಎಂದು ಪ್ರಶ್ನೆ ಮಾಡಿದ್ದು, ಈ ರೀತಿ ಹೊರ ತೆಗೆಯಲು ಪ್ರೇರಣೆ ನೀಡಿದ್ದು ಯಾರು? ನೂರಾರು ಸ್ಥಳದಲ್ಲಿ ಶವ ಹೂತಿರುವಾಗ ನಿರ್ದಿಷ್ಟ ಅದೇ ಜಾಗದ ಬುರುಡೆ ತಂದಿದ್ದು ಯಾಕೆ? ಆ ಬುರುಡೆಯ ಅಸ್ಥಿ ಪಂಜರ ಯಾರದ್ದು ಎಂದು ತಿಳಿದಿದ್ಯಾ? ಯಾವ ಜಾಗದಲ್ಲಿ ಯಾವ ಇಸವಿಯಲ್ಲಿ ಶವ ಹೂತು ಹಾಕಲಾಗಿತ್ತು? ಆ ಶವ ಪುರುಷನದ್ದೋ? ಮಹಿಳೆಯದ್ದೋ? ಅಸ್ಥಿ ಪಂಜರ ಹೊರತೆಗೆಯುವ ವೇಳೆ ಜೊತೆಗೆ ಯಾರಿದ್ದರು? ಏಕಾಏಕಿ ಮಣ್ಣಿನಿಂದ ಹೊರತೆಗೆಯುವ ಬದಲು ಪೊಲೀಸರಿಗೆ ಮಾಹಿತಿ ನೀಡಬಹುದಿತ್ತಲ್ಲ? ಈ ರೀತಿ ಶವ ಹೊರತೆಗೆಯೋದು ಕಾನೂನಾತ್ಮಕವಾಗಿ ಅಪರಾಧ ಎಂದು ಗೊತ್ತಿಲ್ವಾ? ಇದರ ಪರಿಣಾಮ ಏನಾಗುತ್ತೆ ಎಂದು ತಿಳಿದಿದ್ಯಾ? ಎಂದು ಪ್ರಶ್ನೆ ಮಾಡಿದೆ.

ನನ್ನ ಆರೋಪವನ್ನ ಸಾಬೀತುಪಡಿಸಲು ನನಗೆ ಇದೊಂದೇ ದಾರಿ ಎಂದು ಮುಸುಕುಧಾರಿ ವ್ಯಕ್ತಿ ಹೇಳಿದ್ದು, ಸತ್ತ ವ್ಯಕ್ತಿಗಳಿಗೆ ನ್ಯಾಯ ಸಿಗಲಿ ಯಾವ ಕಾನೂನು ಕ್ರಮಕ್ಕೂ ನಾನು ಸಿದ್ಧ ಎಂದು ಹೇಳಿದ್ದಾನೆ.

ಬೆಳ್ತಂಗಡಿ-ಧರ್ಮಸ್ಥಳ ಠಾಣೆಯೆ ಕೇಸ್‌ ಫೈಲ್‌ ಪಡೆದ ತನಿಖಾಧಿಕಾರಿ: ಬೆಳ್ತಂಗಡಿ ಮತ್ತು ಧರ್ಮಸ್ಥಳ ಠಾಣೆಯಿಂದ ತನಿಖಾಧಿಕಾರಿ ಜೀತೇಂದ್ರ ಕೇಸ್ ಫೈಲ್ ಪಡೆದುಕೊಂಡಿದ್ದಾರೆ. ಹಿಂದಿನ ಮಿಸ್ಸಿಂಗ್ ಮತ್ತು ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ಕೆಲಸವಾಗುತ್ತಿದೆ. ಕಳೆದ ರಾತ್ರಿ ಕೇಸ್ ಫೈಲ್ ಬಗ್ಗೆ ಮಾಹಿತಿ ಸಂಗ್ರಹ ಮಾಡಿರುವ ಜಿತೇಂದ್ರ ದಯಾಮ್. ಕೋರ್ಟು, ಪೊಲೀಸರ ಮುಂದೆ ಮತ್ತು ಎಸ್ಐಟಿ ಮುಂದೆ ಹೇಳಿಕೆ ದಾಖಲು ಮಾಡಲಾಗುತ್ತಿದೆ. ಮೂರು ಹೇಳಿಕೆಗಳನ್ನು ಎಸ್‌ಐಟಿ ಒಂದಕ್ಕೊಂದು ತುಲನೆ ಮಾಡಲಿದೆ. ಹೇಳಿಕೆಗಳು ತಾಳೆಯಾದರೆ ಮುಂದಿನ ಹಂತಕ್ಕೆ ತನಿಖಾ ಪ್ರಕ್ರಿಯೆ ಹೋಗಲಿದೆ.

ತನಿಖೆಗೆ ಮತ್ತಷ್ಟು ಪ್ಲ್ಯಾನ್‌: ಧರ್ಮಸ್ಥಳ ಶವ ಹೂತ ಕೇಸ್ ನಲ್ಲಿ ಅನಾಮಿಕನ ಹೇಳಿಕೆ ದಾಖಲು ಬೆನ್ನಲ್ಲೇ ಮತ್ತಷ್ಟು ಪ್ಲಾನ್ ಸಿದ್ಧಮಾಡಲಾಗಿದೆ. ಅನಾಮಿಕನ ಹೇಳಿಕೆ ಬೆನ್ನಲ್ಲೇ ಪ್ರಾಥಮಿಕ ಸತ್ಯಾಸತ್ಯತೆ ಪತ್ತೆಗೆ ಟೀಂ ರೆಡಿಯಾಗಿದೆ. ಹೇಳಿಕೆಯನ್ನು ಗ್ರೌಂಡ್ ಲೆವೆಲ್ ಹಾಗೂ ಸಮಯದ ಆಧಾರದಲ್ಲಿ ಕ್ರಾಸ್‌ಚೆಕ್ ಮಾಡಲು ಸಿದ್ದತೆ ಮಾಡಲಾಗುತ್ತಿದೆ. ದೂರಿನಲ್ಲಿ ಯಾವುದೇ ವ್ಯಕ್ತಿ ವೈರತ್ವ, ದುರುದ್ದೇಶ ಅಥವಾ ಯಾರದ್ದೋ ಪ್ರೇರಣೆ ಇದ್ಯಾ ಎಂದು ಪರಿಶೀಲನೆ ಮಾಡಲಾಗುತ್ತಿದೆ

ದೂರುದಾರನ ಹೇಳಿಕೆಯು ಆ ಸಮಯದ ಜೊತೆ ಸಂಬಂಧ ಹೊಂದಿದೆಯಾ? ಎನ್ನುವ ಪರಿಶೀಲನೆಯೂ ನಡೆಯುತ್ತಿದೆ. ಹೂತ ಶವಗಳ ಸ್ಥಳ, ಸಮಯ ಮತ್ತು ಪರಿಸ್ಥಿತಿಗಳ ನಿಖರ ವಿವರಗಳ ಆಧಾರದಲ್ಲಿ ಪ್ರಾಥಮಿಕ ಪರಿಶೀಲನೆ ನಡೆಯಲಿದೆ.

ಸ್ಥಳದಲ್ಲಿ ಈಗಲೂ ಪತ್ತೆಹಚ್ಚಬಹುದಾದ ಯಾವುದಾದರೂ ಗುರುತುಗಳು ಇದೆಯಾ ಎಂದು ತನಿಖೆ ಮಾಡಲಾಗುತ್ತಿದೆ. ಆತ ಹೇಳಿದ ರೀತಿಯಲ್ಲೇ ಯಾವುದಾದರೂ ಗುರುತುಗಳು ಇದ್ಯಾ ಎಂದು ಪರಿಶೀಲಿಸಲಿದ್ದು. ಈ ಬಗ್ಗೆ ಸ್ಥಳೀಯರು ಏನಾದರೂ ಕಂಡಿದ್ದಾರಾ ಅಥವಾ ಕೇಳಿದ್ದಾರಾ? ಎಂದು ವಿಚಾರಣೆಗೆ ಪ್ಲ್ಯಾನ್‌ ಮಾಡಿಕೊಳ್ಳಲಾಗುದೆ. ದೂರುದಾರನು ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಉಲ್ಲೇಖಿಸುತ್ತಿದ್ದರೆ ಅವರ ಪತ್ತೆ ಮತ್ತು ಅವರ ಹೇಳಿಕೆ ದಾಖಲು ಸಾಧ್ಯತೆ. ಬೇರೆ ಸಾಕ್ಷಿಗಳು ಇದ್ದರೆ ಅವರ ಜೊತೆ ಇರುವ ಸಂಬಂಧಗಳ ಮಾಹಿತಿ ಕಲೆ ಹಾಕಲಾಗುತ್ತದೆ.

 

PREV
Read more Articles on
click me!

Recommended Stories

ಕೆ.ಎಸ್. ಈಶ್ವರಪ್ಪ ಬಿಜೆಪಿ ವಾಪಸಾತಿ, ನನ್ನ ಮನಸ್ಸಲ್ಲೂ ಇದೆ ಬಸನಗೌಡ ಯತ್ನಾಳ್ ಮನಸ್ಸಲ್ಲೂ ಇದೆ ಅಂದ್ರು!
ಬೆಳ್ತಂಗಡಿ ಬಾಲಕ ಸುಮಂತ್ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್ : ಶವ ಪತ್ತೆಯಾದ ಕೆರೆಯಲ್ಲಿ ಕತ್ತಿ ಟಾರ್ಚ್ ಪತ್ತೆ