ಧರ್ಮಸ್ಥಳ ಮಂಜುನಾಥನಲ್ಲ, ವಕೀಲ ಮಂಜುನಾಥನಿಗೂ ಸುಳ್ಳು ಹೇಳಿದ್ದ AI ಗ್ಯಾಂಗ್‌!

Published : Aug 19, 2025, 11:28 AM IST
Lawyer Manjunath

ಸಾರಾಂಶ

ಧರ್ಮಸ್ಥಳ ವಿರೋಧಿ ಗ್ಯಾಂಗ್‌ನ ಸುಳ್ಳುಗಳು ಬಯಲಿಗೆ ಬರುತ್ತಿದ್ದು, ಸುಜಾತಾ ಭಟ್‌ ಅವರ 'ಮಗಳು' ಎಂದು ಹೇಳಲಾದ ಅನನ್ಯಾ ಭಟ್‌ ಫೋಟೋ ವಾಸ್ತವದಲ್ಲಿ ಬೇರೊಬ್ಬರದ್ದೇ ಎಂಬುದು ಬೆಳಕಿಗೆ ಬಂದಿದೆ. ವಕೀಲರೂ ಸಹ ಈ ಸುಳ್ಳಿನ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು (ಆ.19): ರಾಜಧಾನಿ ಬೆಂಗಳೂರು ಮೂಲದ ರಂಗಪ್ರಸಾದ್‌ ಎನ್ನುವವರ ಸೊಸೆ, ಶ್ರೀವತ್ಸ ಎನ್ನುವವರ ಪತ್ನಿ ವಾಸಂತಿಯನ್ನೇ ತನ್ನ ಮಗಳು ಅನನ್ಯಾ ಭಟ್‌ ಎಂದು ಹೇಳಿದ್ದ ಸುಜಾತಾ ಭಟ್‌ ಸುಳ್ಳುಗಳು ಜನರ ಮುಂದೆ ಜಗಜ್ಜಾಹೀರಾಗಿದೆ. ಧರ್ಮಸ್ಥಳ ವಿರೋಧಿ ಗ್ಯಾಂಗ್‌ನ ಒಂದೊಂದೆ ಸುಳ್ಳುಗಳು ಜನರ ಮುಂದೆ ಬರುತ್ತಿರುವಾಗ ಅವರ ಪರ ವಕೀಲರಿಗೂ ನಿಜಾಂಶ ಅರಿವಾಗುವ ಲಕ್ಷಣ ಕಂಡಿದೆ.

ವಿಚಾರ ಏನೆಂದರೆ, ಧರ್ಮಸ್ಥಳ ವಿರೋಧಿ ಗ್ಯಾಂಗ್ 'ಅನನ್ಯಾ ಭಟ್‌ ಫೋಟೋ' ಕುರಿತಾಗಿ ಈ ಪ್ಲಾನ್ ಮಾಡಿದ್ದು ಸುಜಾತಾ ಭಟ್ ಪರ ವಕೀಲ ಎನ್. ಮಂಜುನಾಥ್‌ಗೆ ಗೊತ್ತೇ ಇರಲಿಲ್ಲ. ವಕೀಲ ಮಂಜುನಾಥ್‌ ಅವರು ಇದು ನಿಜವಾದ ಅನನ್ಯಾ ಭಟ್‌ ಫೋಟೋ ಎಂದೇ ನಂಬಿದ್ದರು. ಇದು ನಿಜವಾಗಿಯೂ ಅನನ್ಯಾ ಭಟ್ ಫೋಟೋ. ಇದನ್ನು ಸುಜಾತಾ ಭಟ್ ಬಿಡುಗಡೆ ಮಾಡ್ತಾರೆ. ನೀವು ಬೇರೆ ಏನು ಕೇಳಬಾರದು ಕೇವಲ ಫೋಟೋ ಮಾತ್ರ ಕೇಳಬೇಕು ಅಂತಾ ಹೇಳಿ ಅವರನ್ನು ಕರೆದುಕೊಂಡು ಬಂದು ಕ್ಯಾಮರಾ ಎದುರು ಕೂರಿಸಿದರು. ಇದು ಟ್ರ್ಯಾಪ್ ಅನ್ನೋದು ಗೊತ್ತೇ ಇಲ್ಲದೆ ವಕೀಲ ಮಂಜುನಾಥ್ ಧರ್ಮಸ್ಥಳ ವಿರೋಧಿ ಗ್ಯಾಂಗ್ ಹೇಳಿದಂತೆ ಕೇಳಿದ್ದರು.

ಜನರಿಗೆ ಮಂಕುಬೂದಿ ಎರಚೋಕೆ ಹೋಗಿ ವಕೀಲ ಮಂಜುನಾಥ್ ತಾವೇ ಮುರ್ಖರಾದ ಪ್ರಸಂಗ ಇದು.ಈ ಫೋಟೋದ ಸತ್ಯ ಹುಡುಕಿಕೊಂಡು ರಂಗಪ್ರಸಾದ್ ಮನೆ ತನಕ ಯಾರಾದರೂ ಹೋಗಬಹುದು ಅನ್ನೋ ಅಂದಾಜು ಎಂ.ಡಿ ಸಮೀರ್ ಸೇರಿದಂತೆ ಧರ್ಮಸ್ಥಳ ವಿರೋಧಿ ಗ್ಯಾಂಗ್‌ನ ಯಾರೊಬ್ಬರಿಗೂ ಇದ್ದಿರಲಿಲ್ಲ.

2007ರಲ್ಲಿ ವಾಸಂತಿ ಮೃತಪಟ್ಟಿದ್ದರೆ, ಅವರ ಪತಿ ಶ್ರೀವತ್ಸ 2015ರಲ್ಲಿ ಹಾಗೂ ಮಾವ ರಂಗಪ್ರಸಾದ್‌ ಈ ವರ್ಷದ ಜನವರಿಯಲ್ಲಿ ಸಾವು ಕಂಡಿದ್ದರು. ರಂಗಪ್ರಸಾದ್‌ ಜೊತೆ ಲಿವಿಂಗ್‌ ಟುಗೆದರ್‌ನಲ್ಲಿದ್ದ ಸುಜಾತಾ ಭಟ್‌ಗೆ ವಾಸಂತಿ ಕಾಲೇಜು ದಿನಗಳ ಫೋಟೋ ಸಿಕ್ಕಿದೆ. ತನ್ನ ಹಳೇ ಫೈಲಿನಲ್ಲಿ ಇಟ್ಟಿದ್ದ ವಾಸಂತಿ ಫೋಟೋವನ್ನೇ ಸುಜಾತಾ ಇಲ್ಲಿ ತೋರಿಸಿದ್ದಾರೆ.

ಮೃತಪಡುವ ಸ್ವಲ್ಪ ಕಾಲ ಮೊದಲು ವಾಸಂತಿ ಹೇಗಿದ್ದರು ಅನ್ನೋದರ ಫೋಟೋವನ್ನು ಕೂಡ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಸಾರ ಮಾಡಿತ್ತು. ಆದರೆ, ವಾಸಂತಿಯ ಕಾಲೇಜು ದಿನಗಳ ಫೋಟೋವನ್ನು ತೋರಿಸಿ ಸುಜಾತಾ ಭಟ್‌ ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆ.

 

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್