'ಆರಗ ಜ್ಞಾನೇಂದ್ರಗೆ ಮಂತ್ರಿ ಸ್ಥಾನ'

By Kannadaprabha News  |  First Published Oct 9, 2020, 2:59 PM IST

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮುಖಂಡರೋರ್ವರಿಗೆ ಸಚಿವ ಸ್ಥಾನ ನೀಡುವ ವಿಚಾರ ಸದ್ದಾಗುತ್ತಿದೆ


ತೀರ್ಥಹಳ್ಳಿ (ಅ.09) : ರಾಷ್ಟ್ರಮಟ್ಟದಲ್ಲಿ ಪಕ್ಷದ ಸಂಘಟನೆಗಾಗಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸಿ.ಟಿ.ರವಿ ನೇಮಕಗೊಂಡಿದ್ದು, ಅವರ ಸಚಿವ ಸ್ಥಾನ ತೆರವಾಗಿದೆ. ಈ ತೆರವಾಗಿರುವ ಸ್ಥಾನವನ್ನು ಆರಗ ಜ್ಞಾನೇಂದ್ರಗೆ ನೀಡುವಂತೆ ಪ್ರಗತಿಪರ ಚಿಂತಕ ನೆಂಪೆ ದೇವರಾಜ್‌ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಒತ್ತಾಯಿಸಿದ್ದಾರೆ. 

ಬಿಜೆಪಿಯಲ್ಲಿ ಅತ್ಯಂತ ಪ್ರಾಮಾಣಿಕಕರೆಂದು ಆರಗ ಜ್ಞಾನೇಂದ್ರ ಗುರುತಿಸಿಕೊಂಡಿದ್ದಾರೆ. 

Tap to resize

Latest Videos

ಕೊರೋನಾ ಪ್ರಕರಣಗಳು ಹೆಚ್ಚಾಗಿರುವ 10 ಜಿಲ್ಲೆಗಳ DC, ACಗಳಿಗೆ ಸಿಎಂ ಟಾಸ್ಕ್..! .

ಮಂತ್ರಿ ಸ್ಥಾನಕ್ಕೆ ಇತರ ಶಾಸಕರಂತೆ ಲಾಬಿ, ಗುಂಪುಗಾರಿಕೆ, ಒತ್ತಡ ತಂತ್ರಗಳನ್ನು ಹಾಕದಿರುವುದನ್ನೇ ದೌರ್ಬಲ್ಯ ಎಂದು ಪರಿಗಣಿಸುತ್ತಿರುವ ಪ್ರಸ್ತುತ ರಾಜಕಾರಣದಲ್ಲಿ ಆರಗ ಬಹುಭಿನ್ನವಾಗಿ ಕಾಣುತ್ತಾರೆ. ಜ್ಞಾನೇಂದ್ರ ಬೆಂಬಲಿಗರೂ ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಲಿ ಎಂದು ನೆಂಪೆ ದೇವರಾಜ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

click me!