Bengaluru: ಆಸ್ತಿ ಮಾಡುವುದೇ ದೊಡ್ಡತನವಲ್ಲ: ಪ್ರಹ್ಲಾದ್‌ ಜೋಶಿ

Published : Oct 19, 2022, 11:49 AM IST
Bengaluru: ಆಸ್ತಿ ಮಾಡುವುದೇ ದೊಡ್ಡತನವಲ್ಲ: ಪ್ರಹ್ಲಾದ್‌ ಜೋಶಿ

ಸಾರಾಂಶ

ಜೀವನದಲ್ಲಿ ಆಸ್ತಿ ಮಾಡುವುದು ದೊಡ್ಡತನವಲ್ಲ. ಸಂಪಾದಿಸಿದ ಹಣವನ್ನು ಸಮಾಜದ ಅಭಿವೃದ್ಧಿಗೆ ವಿನಿಯೋಗಿಸುವುದು ಮುಖ್ಯ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. 

ಬೆಂಗಳೂರು (ಅ.19): ಜೀವನದಲ್ಲಿ ಆಸ್ತಿ ಮಾಡುವುದು ದೊಡ್ಡತನವಲ್ಲ. ಸಂಪಾದಿಸಿದ ಹಣವನ್ನು ಸಮಾಜದ ಅಭಿವೃದ್ಧಿಗೆ ವಿನಿಯೋಗಿಸುವುದು ಮುಖ್ಯ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಆರ್‌ಐಟಿ) ಭಾನುವಾರ ಆಯೋಜಿಸಿದ್ದ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಸಾಕಷ್ಟು ಜನರು ಆಸ್ತಿ ಮಾಡುತ್ತಾರೆ. ಆದರೆ, ಹಲವರು ಅದನ್ನು ಸಮಾಜದ ಅಭಿವೃದ್ಧಿಗೆ ಬಳಸುವುದಿಲ್ಲ. ಕೇವಲ ತಾವು, ತಮ್ಮ ಕುಟುಂಬ ಎಂದು ಸ್ವಾರ್ಥಕ್ಕೆ ಬಳಸುತ್ತಾರೆ. 

ಆ ರೀತಿ ಎಷ್ಟು ಹಣ ದುಡಿದು ಕೂಡಿಟ್ಟರೂ ವ್ಯರ್ಥ. ದುಡಿದ ಹಣದಲ್ಲಿ ಏನಾದರೂ ಸಮಾಜಕ್ಕೆ ಕೊಡುಗೆ ನೀಡಬೇಕು. ಆ ವಿಚಾರದಲ್ಲಿ ಡಾ ಎಂ.ಎಸ್‌.ರಾಮಯ್ಯ ಅವರು ಮಾದರಿಯಾಗಿ ನಿಲ್ಲುತ್ತಾರೆ. ತಾವು ಸಂಪಾದಿಸಿದ ಹಣದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸಿಕೊಡುವ ಮೂಲಕ ಅವರು ಸಮಾಜಕ್ಕೆ ವಿನಿಯೋಗಿಸಿದ್ದಾರೆ ಎಂದು ಶ್ಲಾಘಿಸಿದರು. ಪ್ರತಿ ಶೈಕ್ಷಣಿಕ ವರ್ಷ ಪ್ರವೇಶಾತಿ ವೇಳೆಯಲ್ಲಿ ಸಾಕಷ್ಟು ಜನ ದುಡ್ಡು ಹಿಡಿದುಕೊಂಡು ರಾಮಯ್ಯ ಕಾಲೇಜಿನಲ್ಲೇ ಸೀಟು ಕೊಡಿಸುವಂತೆ ನನ್ನ ಬಳಿ ಬರುತ್ತಾರೆ. ಇದಕ್ಕೆ ಕಾರಣ ಈ ಕಾಲೇಜಿನಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣವಾಗಿದೆ. 

ರೈಲ್ವೆಗೆ ಯುಪಿಎಗಿಂತ ಎನ್‌ಡಿಎ 3 ಪಟ್ಟು ಹೆಚ್ಚು ಅನುದಾನ

ಈ ಶಿಕ್ಷಣ ಸಂಸ್ಥೆಯಲ್ಲಿ ಕೇವಲ ಪುಸ್ತಕದ ಪಾಠ ಮಾಡದೆ, 46 ಕೈಗಾರಿಕೆಗಳು ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಜಾರಿಗೆ ತರುವ ಮೂಲಕ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ನಮ್ಮ ದೇಶ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ. ಇಂಗ್ಲೆಂಡ್‌ 6ನೇ ಸ್ಥಾನದಲ್ಲಿದೆ. 2030ರ ವೇಳೆಗೆ 3 ಅಥವಾ 4ನೇ ಸ್ಥಾನಕ್ಕೆ ತರಲು ಪ್ರಯತ್ನಿಸಬೇಕು. 2047ರ ವೇಳೆ ಭಾರತ ಮೊದಲ ಸ್ಥಾನಕ್ಕೇರಬೇಕು. ಇದಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಾಧನೆಗೆ ಶ್ರಮ ವಹಿಸಬೇಕು. ವಿಶೇಷವಾಗಿ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಉತ್ಪಾದನಾ ವಲಯಗಳಲ್ಲಿ ಹೆಚ್ಚಿನ ಬೆಳವಣಿಗೆ ಆಗಬೇಕು ಎಂದರು.

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಐತಿಹಾಸಿಕ ನಿರ್ಧಾರ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಮಾತನಾಡಿ, ಸುಸ್ಥಿರ ಅಭಿವೃದ್ಧಿಗೆ ಎಂಬುದು ಗುಣಮಟ್ಟಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದೆ. ತಾವು ಚಿಕ್ಕವಯಸ್ಸಿನಿಂದ ರಾಮಯ್ಯ ಶಾಲಾ-ಕಾಲೇಜು ನೋಡಿಕೊಂಡು ಬೆಳೆದಿದ್ದೇನೆ. ಇಲ್ಲಿ ಗುಣಮಟ್ಟಶಿಕ್ಷಣವನ್ನು ರಾಮಯ್ಯ ವಿದ್ಯಾಸಂಸ್ಥೆಯು ನೀಡುತ್ತಿದೆ. ನಮ್ಮಲ್ಲಿ ಪ್ರತಿಭೆಗಳ ಕೊರತೆ ಇರುವ ಕಾರಣ ಸಾಕಷ್ಟುಉದ್ಯೋಗವಕಾಶಗಳು ಖಾಲಿ ಇವೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು. ಇದೇ ವೇಳೆಯಲ್ಲಿ ವರ್ಚುವಲ್‌ ಮೂಲಕ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹಲೋಥ್‌ ಭಾಗವಹಿಸಿ, ವಜ್ರಮಹೋತ್ಸವಕ್ಕೆ ಶುಭ ಹಾರೈಸಿದರು. ಗೋಕುಲ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್‌.ಜಯರಾಂ, ಉಪಾಧ್ಯಕ್ಷ ಎಂ.ಆರ್‌.ಸೀತಾರಾಂ, ಕಾರ್ಯದರ್ಶಿ ಎಂ.ಆರ್‌.ರಾಮಯ್ಯ, ವಿಜ್ಞಾನಿ ವಿ.ಕೆ.ಅತ್ರೆ ಇದ್ದರು.

PREV
Read more Articles on
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು