ಮಂಗಳವಾರ ತಡರಾತ್ರಿ ಹೆರಿಗೆಯಾಗಿರಬಹುದು| ಪಾಪಿ ತಾಯಿಯ ಅಟ್ಟಹಾಸಕ್ಕೆ ಏನೂ ಅರಿಯದ ಕಂದಮ್ಮ ಬಲಿ| ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆಟಗೇರಿ ಬಡಾವಣೆಯ ಪೊಲೀಸರು|ಯಾವ ಕಾರಣಕ್ಕಾಗಿ ಮಗು ಬಿಟ್ಟು ಹೋಗಿದ್ದಾರೆ ಎನ್ನುವುದು ಮಾತ್ರ ನಿಗೂಢ|
ಗದಗ(ಜೂ.04): ಇಲ್ಲಿಯ ಕೆ.ಸಿ. ರಾಣಿ ರಸ್ತೆಯಲ್ಲಿರುವ ದಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಆಸ್ಪತ್ರೆ ಕೂಗಳತೆ ದೂರದಲ್ಲಿ ಕೆ.ಸಿ. ರಾಣಿ ರಸ್ತೆಗೆ ಹೊಂದಿಕೊಂಡಿರುವ ಭಂಗಿ ರಸ್ತೆಯ ಚರಂಡಿ ಪಕ್ಕದಲ್ಲಿ ನವಜಾತಾ ಗಂಡು ಶಿಶುವಿನ ಶವ ಬುಧವಾರ ದೊರೆತಿದೆ.
ಮಂಗಳವಾರ ತಡರಾತ್ರಿ ಹೆರಿಗೆಯಾಗಿರಬಹುದು ಎನ್ನಲಾಗುತ್ತಿದೆ. ಪಾಪಿ ತಾಯಿಯ ಅಟ್ಟಹಾಸಕ್ಕೆ ಏನೂ ಅರಿಯದ ಕಂದಮ್ಮ ಬಲಿಯಾಗಿದೆ. ಸ್ಥಳಕ್ಕೆ ಬೆಟಗೇರಿ ಬಡಾವಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿರಹಟ್ಟಿ: ಕಪ್ಪತ್ತಗುಡ್ಡ ವನ್ಯ ಜೀವಿಧಾಮ ಹಿಂಪಡೆದರೆ ಉಗ್ರ ಹೋರಾಟ
ಯಾವ ಕಾರಣಕ್ಕಾಗಿ ಮಗು ಬಿಟ್ಟು ಹೋಗಿದ್ದಾರೆ ಎನ್ನುವುದು ಮಾತ್ರ ನಿಗೂಢವಾಗಿದೆ. ಆದರೆ, ಅತ್ಯಂತ ಸದೃಢವಾಗಿರುವ ಗಂಡು ಮಗುವನ್ನು ಚರಂಡಿ ಬದಿಯಲ್ಲಿ ರಟ್ಟಿನ ಡಬ್ಬದಲ್ಲಿ ಹಾಕಿ ಹೋಗಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.