ತೇಜಸ್ ಕಳೆದ 12 ವರ್ಷಗಳಿಂದ ಹೆತ್ತಮಕ್ಕಳಂತೆ ಕಷ್ಟಪಟ್ಟು 6 ಎಕರೆ ಪ್ರದೇಶದಲ್ಲಿ ಕಾಫಿ ಗಿಡಗಳನ್ನ ನೆಟ್ಟು ಲಾಲನೆ-ಪಾಲನೆ ಪೋಷಣೆ ಮಾಡಿದ್ರು. ಆದ್ರೆ, ಬಂಗಾರದಂತಿದ್ದ ಆ ಕಾಫಿ ತೋಟದೊಳಗೆ ಹಾದುಹೋಗಿದ್ದ ವಿದ್ಯುತ್ ತಂತಿ ಇಡೀ ತೋಟವನ್ನೆ ಸುಟ್ಟು ಕರಕಲಾಗಿಸಿದೆ. ಕಾಫಿತೋಟವನ್ನ ಕಳೆದುಕೊಂಡು ಆ ಕುಟುಂಬದ ಬದುಕು ಅದೇ ಬೆಂಕಿಯಲ್ಲಿ ಬೇಯುತ್ತಿದ್ದರೂ ಕೂಡ ಮೆಸ್ಕಾಂ ಅಧಿಕಾರಿಗಳು ಮಾತ್ರ ಅತ್ತ ತಲೆ ಹಾಕಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.22): ಮೆಸ್ಕಾಂ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ಆರು ಎಕರೆ ಕಾಫಿತೋಟ ಸಂಪೂರ್ಣ ಭಸ್ಮವಾಗಿದೆ. ತೋಟಕ್ಕೆ ಬೆಂಕಿ ತಗುಲಿ ಕಾಫಿಗಿಡಗಳು ಸುಟ್ಟು ಹೋಗಿದ್ದು, ಭಾರೀ ನಷ್ಟ ಉಂಟಾಗಿದೆ. ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಸಮೀಪದ ಬಿಗ್ಗನಹಳ್ಳಿ ಗ್ರಾಮದ ತೇಜಸ್ಗೌಡ ಎಂಬುವರಿಗೆ ಸೇರಿದ ಕಾಫಿತೋಟ ಸಂಪೂರ್ಣ ವಿದ್ಯುತ್ ಸ್ಪರ್ಶಿ ಸಿ ಬೆಂಕಿ ಹತ್ತಿಕೊಂಡು ನಾಶವಾಗಿದೆ.
undefined
ತೇಜಸ್ ಕಳೆದ 12 ವರ್ಷಗಳಿಂದ ಹೆತ್ತಮಕ್ಕಳಂತೆ ಕಷ್ಟಪಟ್ಟು 6 ಎಕರೆ ಪ್ರದೇಶದಲ್ಲಿ ಕಾಫಿ ಗಿಡಗಳನ್ನ ನೆಟ್ಟು ಲಾಲನೆ-ಪಾಲನೆ ಪೋಷಣೆ ಮಾಡಿದ್ರು. ಆದ್ರೆ, ಬಂಗಾರದಂತಿದ್ದ ಆ ಕಾಫಿ ತೋಟದೊಳಗೆ ಹಾದುಹೋಗಿದ್ದ ವಿದ್ಯುತ್ ತಂತಿ ಇಡೀ ತೋಟವನ್ನೆ ಸುಟ್ಟು ಕರಕಲಾಗಿಸಿದೆ. ಕಾಫಿತೋಟವನ್ನ ಕಳೆದುಕೊಂಡು ಆ ಕುಟುಂಬದ ಬದುಕು ಅದೇ ಬೆಂಕಿಯಲ್ಲಿ ಬೇಯುತ್ತಿದ್ದರೂ ಕೂಡ ಮೆಸ್ಕಾಂ ಅಧಿಕಾರಿಗಳು ಮಾತ್ರ ಅತ್ತ ತಲೆ ಹಾಕಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ.
ಚಿಕ್ಕಮಗಳೂರು: ಸಚಿವೆ ಕರಂದ್ಲಾಜೆಗೆ ಸ್ವಕ್ಷೇತ್ರದಲ್ಲೇ ವಿರೋಧ, ಬಿಜೆಪಿ ಕಾರ್ಯಕರ್ತರಿಂದ ಶೋಭಾ ವಿರುದ್ಧ ಪತ್ರ ಅಭಿಯಾನ
ಬೆಂಕಿ ಕಿಡಿಗೆ ಹೊತ್ತಿ ಉರಿದ ಕಾಫಿ ತೋಟ :
ತೇಜಸ್ 12 ವರ್ಷಗಳಿಂದ ಮಕ್ಕಳಂತೆ ಬೆಳೆಸಿದ್ದ 6 ಎಕರೆ ಕಾಫಿ ತೋಟ ಸಂಪೂರ್ಣ ಸುಟ್ಟು ಬೂದಿಯಾಗಿದೆ. ತೋಟದ ಇಂದಿನ ಈ ಸ್ಥಿತಿಗೆ ಬೇಜವಾಬ್ದಾರಿ ಮೆಸ್ಕಾಂ ಅಧಿಕಾರಿಗಳೇ ಕಾರಣ. ತೇಜಸ್ ಅವರ ತೋಟದಲ್ಲಿ ಪವರ್ ವಿದ್ಯುತ್ ತಂತಿ ಹಾದು ಹೋಗಿದ್ದು ವಿದ್ಯುತ್ ತಂತಿಯಿಂದ ಬಿದ್ದ ಬೆಂಕಿ ಕಿಡಿಯಿಂದ ಇಡೀ ಕಾಫಿತೋಟ ಧಗಧಗ ಹೊತ್ತಿ ಉರಿದಿದೆ. ಚಿಕ್ಕಮಗಳೂರಿಂದ ಕೆ ಆರ್ ಪೇಟೆ ಮಾರ್ಗವಾಗಿ ಕುಂದೂರು ಗ್ರಾಮಕ್ಕೆ ವಿದ್ಯುತ್ ಪವರ್ ಲೈನ್ ಕಂಬಗಳನ್ನ ತೋಟದ ಮಧ್ಯೆ ಹಾಕಲಾಗಿದೆ. ಗಾಳಿಗೆ ಒಂದಕ್ಕೊಂದು ತಂತಿ ತಗಲಿ ಬೆಂಕಿ ಕಿಡಿ ತೋಟಕ್ಕೆ ಬಿದ್ದು ರಾತ್ರೋರಾತ್ರಿ ಸುಟ್ಟು ಭಸ್ಮವಾಗಿದೆ.12 ವರ್ಷಗಳಿಂದ ಮಕ್ಕಳಂತೆ ಸಾಕಿದ್ದ ಬೆಳೆ ಸಂಪೂರ್ಣ ನಾಶವಾಗಿರೋದ ಕಂಡು ತೋಟದ ಮಾಲೀಕರು ಕಣ್ಣೀರಿಟ್ಟಿದ್ದಾರೆ.
ಪವರ್ ಲೈನ್ ಬದಲಾವಣೆ ಮಾಡುವಂತೆ ಮನವಿ ಮಾಡಿದ್ರೂ ಕ್ಯಾರೆ ಎನ್ನುವ ಇಲಾಖೆ :
ಬಿಗ್ಗನಹಳ್ಳಿ ಗ್ರಾಮ ಹೇಳಿ-ಕೇಳಿ ಅರೆ ಮಲೆನಾಡು. ನೀರಿನ ಅಭಾವ ಇರುವ ಈ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯೋದು ಒಂದು ರೀತಿಯ ಸವಾಲೇ ಸರಿ. ಇಂತಹ ಪ್ರತಿಕೂಲ ಹವಾಮಾನ ಸನ್ನಿವೇಶದಲ್ಲೂ ಕಾಫಿ ಬೆಳೆ ಬೆಳೆಯುವಂತೆ ಕಷ್ಟಪಟ್ಟು ತೇಜಸ್ ಕುಟುಂಬ ತೋಟವನ್ನ ಅಭಿವೃದ್ಧಿಪಡಿಸಿದ್ದರು. ಹಗಲಿರುಳೆನ್ನದೆ ಶ್ರಮವಹಿಸಿ ದುಡಿದು, ಇನ್ನೇನು ಸಮೃದ್ಧ ಬೆಳೆ ಕೈಗೆ ಬರ್ತಿದೆ ಅಂತ ನೆಮ್ಮದಿಯ ನಿಟ್ಟುಸಿರು ಬಿಡುವ ಹೊತ್ತಿಗೆ ಮೆಸ್ಕಾಂ ಅಧಿಕಾರಿಗಳು ಪರೋಕ್ಷವಾಗಿ ತೋಟವನ್ನ ಸುಟ್ಟುಹಾಕಿದ್ದಾರೆ. ಹಲವು ವರ್ಷಗಳಿಂದ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಯನ್ನ ಸ್ಥಳಾಂತರಿಸುವಂತೆ ತೋಟದ ಮಾಲೀಕ ತೇಜಸ್ ಹಲವು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳು ಆಯ್ತು ಅಂತೇಳಿ ವರ್ಷಗಳನ್ನೇ ದೂಡಿದ್ದಾರೆ. ಸದ್ಯ ಮಕ್ಕಳಂತೆ ಸಾಕಿದ್ದ ತೋಟದ ಸ್ಥಿತಿ ಕಂಡು ತೇಜಸ್ ಕುಟುಂಬ ಮುಂದೇನು ಮಾಡಬೇಕೆಂದು ತಿಳಿಯದಂತಾಗಿದೆ.
ಒಟ್ಟಾರೆ, ಕಾಫಿ ಆರು ತಿಂಗಳಿಗೋ ವರ್ಷಕ್ಕೋ ಬೆಳೆಯೋ ಬೆಳೆಯಲ್ಲ. ವರ್ಷಗಳ ಕಾಲ ಮಕ್ಕಳಂತೆ ಸಾಕಿದ್ರೆ ಒಂದು ತಲೆಮಾರು ಮಕ್ಕಳಂತೆಯೇ ಜೊತೆಗಿರುತ್ತೆ. ಎಕರೆ ಕಾಫಿ ತೋಟದ ಬೆಲೆಯೇ 20 ಲಕ್ಷದ ಮೇಲಿದೆ. ಹೀಗಿರುವಾಗ ಚಿನ್ನದಂತ 6 ಎಕರೆ ಕಾಫಿ-ಮೆಣಸಿನ ತೋಟ ಭಸ್ಮವಾಗಿದೆ. ಈ ರೈತನ 12 ವರ್ಷದ ಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ. ಆದ್ರೆ, ಯಾವೊಬ್ಬ ಅಧಿಕಾರಿಯೂ ಸ್ಥಳ ಪರಿಶೀಲನೆ ನಡೆಸದ ಕಾರಣ ದಂಪತಿ ಮತ್ತಷ್ಟು ಕುಗ್ಗಿ ಹೋಗಿದ್ದಾರೆ. ಇನ್ನಾದ್ರು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನೊಂದಿರೋ ಕುಟುಂಬದ ನೆರವಿಗೆ ನಿಲ್ತಾರಾ ಕಾದುನೋಡ್ಬೇಕು.